You are here
Home > ವಾಹಿನಿ ಸುದ್ದಿ > ಬಿಗ್ ಬಾಸ್ ಮನೆ ಸೇರಿದ ನಟಿ ವೈಷ್ಣವಿಯ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ..!!

ಬಿಗ್ ಬಾಸ್ ಮನೆ ಸೇರಿದ ನಟಿ ವೈಷ್ಣವಿಯ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ..!!

ಬಿಗ್ ಬಾಸ್ ಮನೆಗೆ ವೈಷ್ಣವಿ ಹೆಸರಿನ ಹುಡುಗಿ ಎಂಟ್ರಿ ನೀಡಾಯ್ತು.. ನಿಮಗೆ ಗೊತ್ತಿರೋ ಹಾಗೆ ಈಕೆ ಕಳೆದ ಬಾರಿಯ ಬಿಗ್ ಬಾಸ್ ವಿನ್ನರ್ ಪ್ರಥಮ್ ನ ಮುಂದಿನ ಸಿನಿಮಾ ದೇವ್ರಂಥ ಮನುಷ್ಯ ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು.. ಇಷ್ಟು ಮಾಹಿತಿ ನಿಮಗೆ ಗೊತ್ತಿರೋದು ಆದ್ರೇ ನಾವು ನಿಮಗೆ ವೈಷ್ಣವಿ ಅವರ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್ ಎಕ್ಸ್ ಕ್ಲೂಸಿವ್ ಮಾಹಿತಿಯನ್ನ ಹೋತ್ತು ತಂದಿದ್ದೀವಿ..

ವೈಷ್ಣವಿ ಚಂದ್ರ ಮೆನನ್ ಈಕೆ ಪೂರ್ವ ನಾಮಧೇಯ.. ಮೆನನ್ ಯಾಕೆ ಕೊನೆಯಲ್ಲಿ ಅಂದ್ರೆ ಈಕೆ ಮೂಲತಃ ಕೇರಳ ದವರು ಮಾತೃಭಾಷೆ ಬಂದು ಮಲೆಯಾಳಂ. ಹೀಗಾಗೆ ಮೆನನ್ ಜೊತೆಗಿದೆ.. ಹುಟ್ಟಿದ್ದು 27/07/1998. ಹೈಟ್ 5.5 ಕಿಚ್ಚನಿಗೆ ಕೋಪ ಬರಿಸಿದ ಪ್ರಥಮ್.. ಸ್ಟೆಜ್ ಮೇಲೆ ಒಳ್ಳೆ ಹುಡುಗ ಮಾಡಿದ ಎಡವಟ್ಟೇನು..?

ಮೂವೀ ಬರಬೇಕು ಅನ್ನೋ ಹಂಬಲ ಇಂದು ನೆನ್ನೆಯದಲ್ಲ ಬದಲಿಗೆ ಚಿಕ್ಕವಯಸ್ಸಿನಿಂದಲೇ ಇತ್ತು.. ಹೀಗಾಗೆ ಸಿನಿಮಾಗೆ ಬೇಕಾದ ಪ್ರಥಮ ಹಂತದ ತಯಾರಿಗಳನ್ನೆಲ್ಲ ಮುಗಿಸಿಕೊಂಡೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಈ ಚೆಲುವೆ..

ಮೊದಲಿಗೆ 8 ವರ್ಷಗಳ ಕಾಲ ಭರತನಾಟ್ಯವನ್ನ ಕಲಿತಿದ್ದಾರೆ.. ಅದು ದಿವಂಗತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರ ಮಗನ ಬಳಿ.. ಇದೆಷ್ಟೇ ಅಲ್ಲ ಬ್ಯಾಲೆ ಡ್ಯಾನ್ಸ್ ನ ಸಹ ಕರಗತ ಮಾಡಿಕೊಂಡಿದ್ದಾರೆ.. ವೈಷ್ಣವಿ ತಾನೆಂಥ ಡ್ಯಾನ್ಸ್ ಅಂತ ಈ ಹಿಂದಿನ ಸಂಚಿಕೆಯಲ್ಲೆ ನಿಮಗೆಲ್ಲಾ ತೊರಿಸಿಕೊಟ್ಟಿದ್ದಾರೆ.. ಆಶಿತಾ ಗಂಡ ಜಗನ್ ಅಂತೆ.. ಹೀಗಂತ ಹೇಳಿದ್ದು ಸ್ವತಃ ಆಶಿತಾ

ಸಿನಿಮಾಗೂ ಬರೋ ಮೊದಲು ಕೆಲವೊಂದು ಆಡ್ ಗಳಲ್ಲಿ ಅಭಿನಿಸಿದ್ರು, ಜೊತೆಗೆ ನೋಡೋಕೆ ಅಂದವಾಗಿದ್ದ ವೈಷ್ಣವಿ ಅವರನ್ನ ಮಾಡೆಲಿಂಗ್ ಕ್ಷೇತ್ರವೂ ಕೈ ಬೀಸಿ ಕರೆದಿತ್ತು.. ಹೀಗಾಗೆ ಈ ಯುವ ನಟಿ ಅಲ್ಲು ಕೂಡ ಕೈ ಆಡಿಸಿ ಬಂದಿದ್ದಾರೆ..

ತುಂಬಾ ಆಹಾರ ಪ್ರಿಯೆಯಂತೆ.. ಬಟ್ ಸಿನಿಮಾ ಲ್ಯಾಂಡ್ ನಲ್ಲಿ ಇರೋದ್ರಿಂದ ಫಿಟ್ ನೆಸ್ ಕಡೆಗೆ ಹೆಚ್ಚು ಗಮನ ನೀಡಿದ್ದಾರೆ.. ತನ್ನ ದೇಹವನ್ನ ಫಿಟ್ ಆಗಿ ಇಟ್ಟುಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಬೆವರು ಇಳಿಸ್ತಾರೆ..

ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ ಈಕೆಯ ದೇವ್ರಂಥ ಮನುಷ್ಯ ಚಿತ್ರ ಸದ್ಯಕ್ಕೆ ರಿಲೀಸ್ ಗೆ ರೆಡಿ ಇದೆ .. ಆದ್ರೆ ಇದರೊಂದಿಗೆ ಈಕೆ ಕೈಲಿರೋ ಮತ್ತಷ್ಟು ಚಿತ್ರಗಳು ಯಾವ್ ಯಾವ್ ಗೊತ್ತಾ..? ಅದರ ಬಗ್ಗೆ ನಿಮಗೆ ಅಶ್ಚರ್ಯವಾಗ ಬಹುದು.. ಯಾಕಂದ್ರೆ ಈಕೆ ಕೈಯಲಿ ಹಲವು ಸಿನಿಮಾ ಪ್ರಾಜೆಕ್ಟ್ ಗಳಿವೆ.

ಸುರ್ ಸುರ್ ಬತ್ತಿ, ಇದು ಕಿರುತೆರೆ ನಟ ಲೋಕೇಶ್ ನಾಯಕನಾಗಿರೋ ಕಾಮಿಡಿ ಕಥಾಹಂದರದ ಸಿನಿಮಾ ಇದೇ ಚಿತ್ರದಲ್ಲಿ ಹಿರಿಯ ನಟಿಯಾದ ಊರ್ವಶಿ ಅವರು ಅಭಿನಯಿಸಿದ್ದಾರೆ..

ಈ ಚಿತ್ರಗಳ ನಡುವೆ ನಿಮಗೆ ಆಶ್ಚರ್ಯ ಉಂಟು ಮಾಡುವ ಮತ್ತೊಂದು ವಿಚಾರ ಅಂದ್ರೆ, ನಾಗವಲ್ಲಿ ಪಾತ್ರ ನಿಮಗೆ ನೆನಪಿರಬೇಕು ಇದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ದವಾಗಿದೆ.. ಅದೇ ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಅನ್ನೋ ಚಿತ್ರ.. ಇದರಲ್ಲಿ ನಾಗವಲ್ಲಿನಾ..? ಅಥವಾ ಆಪ್ತಮಿತ್ರರಾ..? ಅನ್ನೋ ಕಾಳಗದಲ್ಲಿ ಗೆಲ್ಲೋರ್ಯಾರು ಅನ್ನೋದು ಚಿತ್ರ ಕಥೆ.. ಈ ಸಿನಿಮಾದ ನಾಯಕಿ ಕೂಡ ಎನ್ಸ್ ಅಗೈನ್ ವೈಷ್ಣವಿ ಚಂದ್ರನ್ ಮೆನನ್..

ಇನ್ನೂ ನ್ಯಾಷನಲ್ ಆವಾರ್ಡ್ ವಿನ್ನರ್ ಆಕ್ಟರ್ ಸಂಚಾರಿ ವಿಜಯ್ ಜೊತೆಗೂ ಈ ಹುಡುಗಿ ಸ್ಕ್ರೀನ್ ಷೇರ್ ಮಾಡಿಕೊಳ್ತಿದ್ದಾರೆ.. ಹೌದು ಈ ಸಿನಿಮಾದ ಹೆಸರು ಪಾದರಸ ಅಂತ..ಈಗಾಗ್ಲೇ ಈ ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ.. ಇದಿಷ್ಟೆ ಈಕೆ ಕೈಯಲ್ಲಿ ಮತ್ತೊಂದು ಚಿತ್ರವಿದೆ..

ಅದು ಶ್ರೀಮಂತ ಅಂತ.. ಈ ಸಿನಿಮಾದ ಸ್ಪೆಷಾಲಿಟಿ ಏನಪ್ಪಾ ಅಂದ್ರೆ ಈ ಚಿತ್ರಕ್ಕೆ ಸಾರಥಿ ಯಾರು ಗೊತ್ತಾ ನಾಧಬ್ರಹ್ಮ ಹಂಸಲೇಖ ಅವ್ರು.. ಯಸ್ ಈ ಚಿತ್ರದ ಆಫರ್ ಕೂಡ ಈ ಹುಡುಗಿ ಕೈಯಲ್ಲುದೆ.. ಸದ್ಯಕ್ಕೆ ಇದಿಷ್ಟು ಸಿನಿಮಾ ಅನೌಸ್ ಆಗಿರೋದು ಅಷ್ಟೆ.. “ಪ್ರಥಮ್ ಒಬ್ಬ ಗೋಮುಖ ವ್ಯಾಘ್ರ” ಸಹ ನಿರ್ದೇಶಕ ಕೆಂಡಾಮಂಡಲ..

ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮೊದಲೆ ಇಷ್ಟೆಲ್ಲ ಚಿತ್ರವನ್ನ ಗಿಟ್ಟಿಸಿಕೊಂಡಿರುವ ಈ ಚೆಲುವೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮತ್ತೆಷ್ಟು ನಿರ್ದೇಶಕರು ಈಕೆಯನ್ನ ಹುಡುಕಿಕೊಂಡು ಹೋಗ್ತಾರ ಕಾದು ನೋಡ್ಬೇಕು. ಯಾಕಂದ್ರೆ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಸಿಗುವ ಪಬ್ಲಿಸಿಟಿ ಇದ್ಯಲ್ಲ ಅದು ಬೇರೆಲ್ಲೂ ಸಿಗೋದಿಲ್ಲ..Pic Courtesy: Colors Super  
This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top