You are here
Home > ವಾಹಿನಿ ಸುದ್ದಿ > ಜೆಡಿಎಸ್ ನಿಂದ ಹೊರ ಬಂದ ಪ್ರಣಾಳಿಕೆಯಲ್ಲಿವೆ ಜನ ಮೆಚ್ಚುವ ಅಂಶಗಳು..

ಜೆಡಿಎಸ್ ನಿಂದ ಹೊರ ಬಂದ ಪ್ರಣಾಳಿಕೆಯಲ್ಲಿವೆ ಜನ ಮೆಚ್ಚುವ ಅಂಶಗಳು..

ಪ್ರಾದೇಶಿಕ ಪಕ್ಷವಾಗಿ ಈ ಬಾರಿ ಜೆಡಿಎಸ್ ತನ್ನ ಬಲವನ್ನ ರಾಷ್ಟ್ರೀಯ ಪಕ್ಷಗಳಿಗೆ ತೋರಲು ಮುಂದಾಗಿದೆ.. ಹೀಗಾಗೆ ತನ್ನ ಮತದಾರರಿಗೆ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದು, ಇದರ ಮುಖ್ಯಾಂಶಗಳನ್ನ ಸ್ವತಃ ಜೆಡಿಎಸ್ ವಕ್ತಾರದ ಡಾ.ಟಿ.ಎ.ಶರವಣ ಅವರು ತಮ್ಮ ಎಫ್ ಬಿ ಪೋಸ್ಟ್ ನಲ್ಲಿ ಹಾಕಿಕೊಂಡಮುಖ್ಯಾಂಶಗಳು.”ಜಾತ್ಯತೀತ ಜನತಾದಳ”ದ 2018ರ ಪ್ರಣಾಳಿಕೆಯ ಪ್ರಮುಖ ಮುಖ್ಯಾಂಶಗಳು.!!ನನ್ನ 20 ತಿಂಗಳ ಅಧಿಕಾರವನ್ನ ನೋಡಿದ್ದೀರಿ.. ನನ್ನ ನೋಡಿ ಈ ಬಾರಿ ಮತ ನೀಡಿ..

1.ಅಧಿಕಾರಕ್ಕೆ ಬಂದ ಕೇವಲ 24 ಗಂಟೆಯಲ್ಲಿ ರಾಜ್ಯದ ಎಲ್ಲಾ ರೈತರ ಸಾಲ ಸಂಪೂರ್ಣ ಮನ್ನಾ.

2.ನೇಕಾರರ ಮೀನುಗಾರರ ಮತ್ತು ಗ್ರಾಮೀಣ ಕುಶಲಕರ್ಮಿಗಳ ಸಂಪೂರ್ಣ ಸಾಲ ಮುನ್ನಾ.

3.ಗ್ರಾಮೀಣ ಪ್ರದೇಶದಲ್ಲಿ 24ಗಂಟೆಯೂ 3 ಪೇಸ್ ವಿದ್ಯುತ್ ಸಂಪರ್ಕ.

4. “ಜೆ.ಪಿ. ಸದನ” ಯೋಜನೆ ಅಡಿ ಹಿಂದುಳಿದ ವರ್ಗ ಮತ್ತು ಇತರೆ ವರ್ಗದವರಿಗೆ 2 ಲಕ್ಷ ರೂ ಗಳ ವಸತಿ ನಿರ್ಮಾಣ.

5. “ಹೆಚ್.ಡಿ. ದೇವೆಗೌಡರ ಆರೋಗ್ಯ ಶ್ರೀ” ಯೋಜನೆ ಅಡಿ ಬಿಪಿಎಲ್ ಕುಟುಂಬ ವರ್ಗದವರಿಗೆ 1 ಲಕ್ಷ ದಿಂದ 3 ಲಕ್ಷದವರೆಗೆ ಉಚಿತ ಚಿಕಿತ್ಸೆ.

6.1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರ ಯೋಜನೆ ಜಾರಿಗೆ.ನನ್ನ ಅಪ್ಪ ಈ ಬಾರಿ ಸಿಎಂ ಅಗೋದು ಖಂಡಿತ : ನಿಖಿಲ್ ಕುಮಾರ್ ಸ್ವಾಮಿ..

7. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 2 ಜೊತೆ ಉಚಿತ ಸಮವಸ್ತ್ರ ಶೂ ಟೈ ಬೆಲ್ಟ್ ಮತ್ತು ಉಚಿತ ನೋಟ್ ಪುಸ್ತಕಗಳ ವಿತರಣೆ.

8. ಬಿಪಿಎಲ್ ಪಡಿತರದಾರರಿಗೆ ಉಚಿತ ಮೊಬೈಲ್ ಮತ್ತು ಮಿಕ್ಸಿ ವಿತರಣೆ.

9. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ರೂ 10000 ಕ್ಕೆ ಹೆಚ್ಚಳ ಮತ್ತು ನೌಕರಿ ಕಾಯಂ.

10.“ತುಂಗಭದ್ರೆಯ ಮೇಲಾಣೆ ರೈತರ ಹಿತರಕ್ಷಣೆ ನಮ್ಮ ಹೊಣೆ”ಎನ್ನುವ ಘೋಷಣೆಯೊಂದಿಗೆ ತುಂಗಭದ್ರೆ ಜಲಾಶಯದಲ್ಲಿನ ಹೂಳು ತೆಗೆದು ಬಳ್ಳಾರಿ ರಾಯಚೂರು ಕೊಪ್ಪಳ ಭಾಗದ ರೈತರ ಎರೆಡು ಬೆಳಗೆ ನೀರು ಒದಗಿಸುವುದು.

ಇನ್ನು ಮುಂದುವರೆಯುವುದು ನಿರೀಕ್ಷಿಸಿ.

“ಕರುನಾಡಿನ ಪ್ರತಿ ಮನೆ ಮನೆ ತಲುಪುವವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಹೆಮ್ಮೆಯಿಂದ ಶೇರ್ ಮಾಡಿ”. ಇದು ಸದ್ಯದ ಜೆಡಿಎಸ್ ಪ್ರಣಾಳಿಕೆ ಮುಖ್ಯಾಂಶಗಳು..

ಸದ್ಯದ ಪ್ರಣಾಳಿಕೆ ಮುಖ್ಯಾಂಶಗಳನ್ನ ನೋಡಿದ್ರೆ ಇದು ಬಡವರ ರೈತರ ಪರವಿರುವ ಉತ್ತಮ ಕರ್ನಾಟಕದ ಭವಿಷ್ಯವಿರುವ ಪ್ರಣಾಳಿಕೆ ಎನ್ನುವ ಮಾತುಗಳು ಕೇಳಿ ಬರ್ತಿವೆ.. ಇದಿನ್ನೂ ಮುಖ್ಯಾಂಶಗಳಷ್ಟೇ ಇದರಲ್ಲಿ ಮತ್ತಷ್ಟು ಉತ್ತಮ ಅಂಶಗಳ ಸೇರಿಕೊಂಡಿರಲಿವೆ..

 

Comments

comments

Similar Articles

Leave a Reply

Top