ಮತ್ತೆ ಖಂಡಿಸೋಕೆ ಶುರು ಮಾಡಿದ ಪ್ರಥಮ್.. ಕಿಚ್ಚನ ಮುಂದೆಯ ತನ್ನ ವರಸೆ ತೋರಿದ ಒಳ್ಳೆ ಹುಡುಗ..

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಒಳ್ಳೆ ಹುಡುಗ ಪ್ರಥಮ್ ನ ನೋಡುವ ಚಾನ್ಸ್ ಈತನ ಅಭಿಮಾನಿಗಳಿಗೆ ಸಿಗುತ್ತೋ ಇಲ್ವೋ ಅನ್ನೋದು ಸ್ವತಃ ಪ್ರಥಮ್ ಗು ಸಹ ಗೊತ್ತಿಲ್ಲ.. ಅಕಸ್ಮಾತ್ ಬಿಗ್ ಬಾಸ್ ಮನೆಗೆ ಪ್ರಥಮ್ ಹೊದ್ರೆ ಪ್ರಥಮ್ ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ..

ಸದ್ಯಕ್ಕೆ ಪ್ರಥಮ್ ಬಿಗ್ ಬಾಸ್ ಮನೆಯೊಳಗೆ ಹೋಗ್ತಾರೋ ಇಲ್ವೋ ಬಟ್ ಬಿಗ್ ಬಾಸ್ ನಲ್ಲಿ ಕಿಚ್ಚನ ಜೊತೆಯಂತು ವೇದಿಕೆಯನ್ನ ಶೇರ್ ಮಾಡಿಕೊಂಡಿದ್ದಾರೆ.. ಇವರೊಂದಿಗೆ ಕಳೆದ ಸೀಸನ್ ಗಳ ವಿನ್ನರ್ಗಳಾದ ಶೃತಿ ಹಾಗೆ ಅಕುಲ್ ಕೂಡ ಇದ್ದಾರೆ..

50 ಸಂಚಿಕೆಯನ್ನ ಪೂರ್ಣಗಳಿಸಿರೋ ಈ ಖುಷಿಯಲ್ಲಿ ಬಿಗ್ ಬಾಸ್ ವೇದಿಕೆಗೆ ಈ ವಿನ್ನರ್ ಗಳನ್ನ ಕರೆಯಲಾಗಿತ್ತು.. ಈ ಎಲ್ಲರು ತಮ್ಮ ಬಿಗ್ ಬಾಸ್ ಜರ್ನಿ ಅನುಭವವನ್ನೂ ಹಂಚಿಕೊಳ್ಳಲಿದ್ದಾರೆ… ಅದು ಇಂದು ಪ್ರಸಾರವಾಗಲಿದೆ..

ಆದರೆ ಪ್ರೊಮೊದಲ್ಲಿ ಈಗಾಗ್ಲೇ ಪ್ರಥಮ್ ಖಂಡಿಸೋಕೆ ಶುರು ಮಾಡಿದ್ದಾರೆ.. ಈ ಮೂಲಕ ಇಷ್ಟು ದಿನ ಮಿಸ್ ಮಾಡಿಕೊಂಡಿದ್ದ ಪ್ರಥಮ್ ನ ಈಗ ಮತ್ತೆ ನೀವಿಂದು ನೋಡಬಹುದು.. ಒಟ್ಟಿನಲ್ಲಿ ಪ್ರಥಮ್ ಮತ್ತೆ‌ ಖಂಡಿಸೋಕೆ ಶುರು ಮಾಡಿದ್ದಾರೆ..

Pic Courtesy: Colors Super

Comments

comments

Similar Articles

Top