ಬಿಗ್ ಬಾಸ್ ಮನೆಗೆ ಪ್ರಥಮ್ ಎಂಟ್ರಿ..!! ಇಲ್ಲಿದೆ ನೋಡಿ ಪ್ರೂಫ್..!

ಕಳೆದ ವಾರ ಈ ಹಿಂದಿನ ಎಲ್ಲ ಸಂಚಿಕೆಗಳಿಗಿಂತ ವಿಭಿನ್ನವಾಗಿ ಕೂಡಿದೆ.. ಯಾಕಂದ್ರೆ ಮನೆಗೆ ಹೊಸ ಹೊಸ ಸೆಲೆಬ್ರಿಟಿಗಳ ಆಗಮನವಾಗಿತ್ತು.. ಇದಕ್ಕೆ ಮೊದಲು ನಾಂದಿ ಹಾಡಿದ್ದು ಬಿಗ್ ಬಾಸ್ ರನ್ನರ್‌ ಅಪ್‌ ಕಿರಿಕ್ ಕೀರ್ತಿ.. ಸ್ಕೂಲ್ ಮೇಷ್ಟ್ರು ಗೆಟಪ್ ನಲ್ಲಿ ಮನೆ ಹೋಗಿದ್ರು.. ಇದಕ್ಕೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇವರ ಬಳಿಕ ಶಾಲಿನಿ, ನಿರಂಜನ್ ಬಿಗ್ ಬಾಸ್ ಗೆ ಮತ್ತೆ ಹೋಗಿ ಬಂದ ತಮ್ಮ ಅನುಭವನ್ನ ಹಂಚಿಕೊಂಡ್ರು.. ಈ ಎಲ್ಲದರ ನಡುವೆ ಕಾಡಿದ ಪ್ರಶ್ನೆ ಪ್ರಥಮ್ ಇನ್ನೂ ಯಾಕೆ ಬಿಗ್ ಬಾಸ್ ಮನೆಗೆ ಹೋಗಿಲ್ಲ ಅಂತ.

ಈ ನಟುವೆ ಅಭಿಮಾನಿಗಳು ಸಹ ಪ್ರಥಮ್ ಅವರನ್ನ ಇದೇ ಪ್ರಶ್ನೆ ಕೇಳಿದ್ರು, ನೀವ್ಯಾಕೆ ಮತ್ತೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಅಂತ.. ಈ ಬಗ್ಗೆ ಮಾತಾನಾಡಿದ್ದ ಪ್ರಥಮ್ ನನ್ನ ಕೈಲಿ ಏನು ಇಲ್ಲ ಅಂತ ಹೇಳಿ ಸುಮ್ಮನಾಗಿದ್ರು.

ಆದ್ರೆ ಈಗ ಪ್ರಥಮ್ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಅನ್ನೋದಕ್ಕೆ ಇಲ್ಲಿದೆ ದಾಖಲೆ.. ಸದ್ಯಕ್ಕೆ ತನ್ನ ಎಫ್ ಬಿ ಪೇಜ್ ನಲ್ಲಿ ತಾನು ಇನ್ನೋವೇಟಿವ್ ಫಿಲ್ಮ್‌ಸಿಟಿಯಲ್ಲಿ ಇರೋದಾಗಿ ಹೇಳಿಕೊಂಡಿದ್ದಾರೆ.. ಅದರಲ್ಲಿ ಏನು ವಿಶೇಷತೆ ಅಂದ್ರ..?

ನಿಮಗೆ ಗೊತ್ತಿರಬೇಕು ಇದೇ ಇನ್ನೋವೇಟಿವ್ ಫಿಲ್ಮ್‌ಸಿಟಿ ಯಲ್ಲಿ ಬಿಗ್ ಬಾಸ್ ಮನೆಯ ಸೆಟ್ ಹಾಕಿರೋದು.. ಸದ್ಯಕ್ಕೆ ಪ್ರಥಮ್ ಈಗ ಅಲ್ಲೆ ಇದ್ದಾರೆ.. ತನ್ನ ಫೇಸ್ ಬುಕ್ ಖಾತೆಯಲ್ಲಿ ಚೆಕ್ ಮಾಡಿದ್ದು ಇಲ್ಲಿದೆ ನೋಡಿ..

ಇಂದು ವಾರದ ಕತೆ ಕಿಚ್ಚನ ಜೊತೆ ಶೂಟಿಂಗ್ ಕೂಡ ಅಲ್ಲೇ ನಡೆಯಲಿದೆ.. ಬಾನುವಾರದ ಸಂಚಿಕೆಯಲ್ಲಿ ಕಿಚ್ಚನೊಂದಿಗೆ‌ ಕಿಚ್ಚನ್ ಟೈಮ್ ಇರುತ್ತೆ.. ಇಂದಿನ ಸಂಚಿಕೆಯಲ್ಲಿ‌ ಕೆಲವರು ತಮ್ಮ ಮೂವೀ ಪ್ರಮೋಷನ್ ಗೆ ಬಿಗ್ ಬಾಸ್ ವೇದಿಕೆ ಏರ್ತಾರೆ.. ಹಾಗಿದ್ರೆ ಪ್ರಥಮ್ ಈಗ ಅಲ್ಲಿ‌ ಇರೋದ್ಯಾಕೆ ಅನ್ನೋ ಅನುಮಾನ ಕಾಡುತ್ತೆ..

ಸದ್ಯಕ್ಕಂತೂ ಪ್ರಥಮ್ ನಿರ್ದೇಶನದ ಯಾವುದೇ ಸಿನಿಮಾ ಬಿಡುಗಡೆಯ ಹಂತವನ್ನ ತಲುಪಿಲ್ಲ.. ಈತನೇ ನಿರ್ದೇಶನ ಮಾಡಿರೋ ದೇವ್ರವ್ನೇ ಬಿಡುಗಡು ಹಾಡುಗಳು ಸಿದ್ದವಾಗ್ತಿದೆ.. ಇನ್ನೂ ಪ್ರಥಮ್ ನಾಯಕನಾಗಿರೋ ಚಿತ್ರಗಳು ಶೂಟಿಂಗ್ ಹಂತದಲ್ಲಿವೆ.ಹೀಗಾಗೆ ಇಂದು ಪ್ರಥಮ್ ಇನ್ನೋವೇಟಿವ್ ಫಿಲ್ಮ್‌ಸಿಟಿಯಲ್ಲಿ ಬಿಡುಬಿಟ್ಟಿರೋದು ಈ ಬಿಗ್ ಬಾಸ್ ವಿನ್ನರ್ ನ ಅಭಿಮಾನಿಗಳಲ್ಲಿ ಖುಷಿಯನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಪ್ರಥಮ್ ಕೇವಲ ಪ್ರಥಮ್ ಆಗಿ ಮನೆಗೆ ಹೋಗ್ತಾರ.?

ಸದ್ಯಕ್ಕೆ ಈ ಹಿಂದೆ ಮನೆಗೆ ಹೋಗಿಬಂದ ಮಾಜಿ ಸ್ಪರ್ಧಿಗಳು ಒಂದೊಂದು ಕ್ಯಾರೆಕ್ಟರ್ ಗಳ ಮೂಲಕ ಹೋಗಿದ್ರು.. ಈ ನಡುವೆ ಪ್ರಥಮ್ ಲಾರ್ಡ್ ಪ್ರಥಮ್ ಆಗಿ ಮನೆ ಸೇರಿದರೆ ಚೆನ್ನಾ ಅನ್ನೋದು ಅಭಿಮಾನಿಗಳ ಅಭಿಪ್ರಾಯ.. ಕಾದು ನೋಡೋಣ ಬಿಗ್ ಬಾಸ್ ಮನೆ ಸೇರ್ತಾರ ಪ್ರಥಮ್ ಅಂತ..

Pic Courtesy: Colors Super & Colors Kannada

Comments

comments

Similar Articles

Top