You are here
Home > ವಾಹಿನಿ ಸುದ್ದಿ > ನನ್ನ ಅಪ್ಪ ಈ ಬಾರಿ ಸಿಎಂ ಅಗೋದು ಖಂಡಿತ : ನಿಖಿಲ್ ಕುಮಾರ್ ಸ್ವಾಮಿ..

ನನ್ನ ಅಪ್ಪ ಈ ಬಾರಿ ಸಿಎಂ ಅಗೋದು ಖಂಡಿತ : ನಿಖಿಲ್ ಕುಮಾರ್ ಸ್ವಾಮಿ..

ಈ ಬಾರಿಯ ಎಲೆಕ್ಷನ್ ನಲ್ಲಿ ಜೆಡಿಎಸ್ ಪಕ್ಷ ರಾಜ್ಯದ ಚುಕ್ಕಾಣಿಯನ್ನ ಹಿಡಿಯಲು ಬೇಕಾದ ಸಕಲ ಸಿದ್ದತೆಯನ್ನ ಮಾಡಿ ಕೊಳ್ತಿದೆ.. ಪ್ರಾದೇಶಿಕ ಪಕ್ಷವಾಗಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಈಗಾಗ್ಲೇ ಕಾರ್ಯರೂಪಗಳು ಸಿದ್ದವಾಗಿವೆ.ಪ್ರಜ್ವಲ್ ಹಾಸನದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ ದೇವೇಗೌಡರು

ಇನ್ನೂ ನಟನಾಗಿ ಹೆಸರು ಮಾಡಿದ ನಿಖಿಲ್ ಕುಮಾರ್ ಸ್ವಾಮಿ ಕನ್ನಡ ಚಿತ್ರರಂಗದ‌ ಭರವಸೆಯ ನಟರಾಗಿ ಬೆಳಿತಿದ್ದಾರೆ.. ತನ್ನ‌ ಚಿತ್ರದ ಬಿಡುವಿನ ಸಮಯದಲ್ಲಿ ತಮ್ಮ‌ಪಕ್ಷದ ಪರ ಪ್ರಚಾರದಲ್ಲಿ ತೊಡಗಿಕೊಳ್ತಿದ್ದಾರೆ..

ಈ ನಡುವೆ ಹನುಮ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾಮಠ ಹಾಗೆ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು.. ಇದೇ ಸಂದರ್ಭದಲ್ಲಿ ಮಾತಾನಾಡಿದ ನಿಖಿಲ್ ಮುಂದಿನ ರಾಜಕೀಯ ಭವಿಷ್ಯವನ್ನ ನುಡಿದೆ ಬಿಟ್ರು.‌.

ಈ ಬಾರಿ ನನ್ನ‌ ತಂದೆ ಮುಖ್ಯಮಂತ್ರಿ ಆಗೇ ಅಗುತ್ತಾರೆ ಅನ್ನೋ ಭರವಸೆ ನನಗಿದೆ.. ಈಗಾಗ್ಲೇ ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಎಲ್ಲ ತಯಾರಿ‌ ನಡೆದಿದೆ.. ಸದ್ಯದಲ್ಲೇ ನಾನು ಸಹ ರಾಜ್ಯವ್ಯಾಪಿ ಸಂಚರಿಸಿ ನಮ್ಮ ಪಕ್ಷದ‌ ಪರವಾಗಿ ಪ್ರಚಾರ ಮಾಡಲಿದ್ದೇನು ಅಂದ್ರು..ಕುಮಾರಣ್ಣ ಮದುವೆ ಬರಲೇಬೇಕು ಅಂತ ವರನೇ ಉಪವಾಸ ಕುಳಿತ..

ಇನ್ನೂ ನಾನೂ ಸಿನಿಮಾ ರಂಗದಲ್ಲೇ ಮುಂದುವರೆಯುತ್ತೇನೆ.. ಪಕ್ಷದ ವಿಚಾರವಾಗಿ ಎಂದಿಗೂ ಇವರ ಜೊತೆ ನಾನು ಇರುತ್ತೇನೆ ಅಂದ್ರು.. ಸದ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಕುರುಕ್ಷೇತ್ರ ಸಿನಿಮಾದಲ್ಲಿ ಅರ್ಜುನನ ಪಾತ್ರವನ್ನ ಮಾಡಿದ್ದಾರೆ..

ಈ ನಡುವೆ ಎ.ಹರ್ಷ ನಿರ್ದೇಶನದ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು ಸೀತಾ ರಾಮ ಕಲ್ಯಾಣ ಅಂತ ಹೆಸರಿಡಲಾಗಿದೆ.. ಈ ಸಿನಿಮಾದ ಮಹೂರ್ತ ಮೊನ್ನೆಯಷ್ಟೆ ನೆರವೇರಿದ್ದು ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ..

Comments

comments

Similar Articles

Leave a Reply

Top