You are here
Home > ಧಾರ್ಮಿಕ > ನಾವೇಕೆ ವಾನರ ರೂಪದಲ್ಲಿರುವ ಹನುಮನನ್ನು ಪೂಜಿಸುತ್ತೇವೆ?.

ನಾವೇಕೆ ವಾನರ ರೂಪದಲ್ಲಿರುವ ಹನುಮನನ್ನು ಪೂಜಿಸುತ್ತೇವೆ?.

ಹಿಂದೂ ಸಂಪ್ರದಾಯದಲ್ಲಿ ದೇವರುಗಳ ರೂಪವೇ ಒಂದೊಂದು ಗೂಢ ಅರ್ಥವನ್ನು ಹೊಂದಿದೆ. ಇದನ್ನು ನಾವು ಸಂಶೋಧಿಸಿ ಅರಿಯಬೇಕಾಗಿದೆ. ಇವತ್ತು ಇಲ್ಲಿ ಶಕ್ತಿಶಾಲಿಯಾಲಿಯಾದ ಹನುಮನ ರೂಪವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಈ ದೇವರ ಭುಜಗಳಿಂದ ಬ್ರಹ್ಮ, ಹೃದಯದಿಂದ ವಿಷ್ಣು, ಹುಬ್ಬುಗಳಿಂದ ಶಿವ ಹಾಗೂ ಹಲ್ಲುಗಳಿಂದ ಸರಸ್ವತಿ ಹುಟ್ಟಿದ್ದಂತೆ..! ಯಾರು ಗೊತ್ತ ಆ ದೇವರು?

ಹನುಮ.. ಹೆಸರು ಹೇಳ್ತಿದ್ದ ಹಾಗೆ ದೇಹದಲ್ಲಿ ಏನೋ ಒಂದು ಶಕ್ತಿ ಸಂಚರಿಸಿದಂತಾಗುತ್ತದೆ. ಆ ಹೆಸರು ಹೇಳುತಿದ್ದ ಹಾಗೆ ಭಯ ಅನ್ನೋದು ದೂರ ಓಡುತ್ತೆ. ಹನುಮ ಅಂದ ತಕ್ಷಣ ಕಣ್ಣ ಮುಂದೆ ಬರೋದು ಆಜಾನು ಬಾಹು, ಶಕ್ತಿ ಹಾಗು ಭಕ್ತಿಯ ಆಗರ ಶ್ರೀ ರಾಮನ ಭಂಟ, ನಮ್ಮ ಕನ್ನಡನಾಡಿನಲ್ಲಿ ಜನಿಸಿದ ಅಂಜನಿ ಪುತ್ರ ಆಂಜನೇಯನ ರೂಪ.

ಶಕ್ತಿಶಾಲಿಯಾದ ಹನುಮನಿರುವುದು ವಾನರ ರೂಪದಲ್ಲಿ ಅರ್ಥಾತ್ ಮರ್ಕಟ ರೂಪದಲ್ಲಿ. ಮನಸ್ಸು ಒಂದು ಮರ್ಕಟದಂತೆ. ಅದು ಬಲು ಚಂಚಲ. ಮಂಗ ಹೇಗೆ ಒಂದು ಕೊಂಬೆಯಿಂದ ಮತ್ತೊಂದಕ್ಕೆ ನೆಗೆಯುತ್ತಿರುತ್ತದೆಯೋ ಹಾಗೆ ಮನಸ್ಸಿಗೆ ತೃಪ್ತಿಯಿಲ್ಲ, ವಿರಾಮವಿಲ್ಲ. ಅದರ ಯೋಚನಾ ವೇಗವನ್ನು ತಡೆಯುವವರಿಲ್ಲ. ದೇಹಕ್ಕಿಂತ ಮನಸ್ಸು ತುಂಬಾ ಶಕ್ತಿಶಾಲಿ. ಆದ್ದರಿಂದ ಹನುಮನನ್ನು ಮನಸ್ಸಿಗೆ ಹೋಲಿಸಲಾಗಿದೆ.
 ತಿರುಪತಿಯಲ್ಲಿ ನೀವು ಕೊಡುವ ಮುಡಿ ಹರಕೆ ವೆಂಕಟೇಶ್ವರ ಸ್ವಾಮಿಗಲ್ಲ..! ಅದು ಸಲ್ಲುವುದು ಈ ತಾಯಿಗೆ

ಹನುಮನ ದೈವ ಶ್ರೀರಾಮ. ಭಕ್ತಿಯ ಪರಾಕಾಷ್ಠೆಯಲ್ಲಿ ಹನುಮ ದೇವರು ಶಕ್ತಿಶಾಲಿಯಾಗುತ್ತಾನೆ. ಶ್ರೀರಾಮನು ತಟಸ್ಥ, ಸ್ಥಿರತೆಯ ರೂಪ. ಶ್ರೀರಾಮನ ಸಾನಿಧ್ಯದಲ್ಲಿ ಅಷ್ಟಸಿದ್ಧಿಗಳಾದ ಅಣಿಮಾ, ಗರಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಕಾಮ್ಯ, ಇಶಿತ್ವ ಹಾಗು ವಶಿತ್ವ ಇವುಗಳನ್ನು ಹಾಗು ನವನಿಧಿಗಳಾದ ಮಹಾಪಾದ, ಪದ್ಮ, ಶಂಕ, ಮಕರ, ಕೂರ್ಮ, ಕುಮುದ, ಕುಂದ, ನೀಲ, ಖರ್ವ ಇವುಗಳನ್ನೂ ಹೊಂದಬಹುದು. ಇದರಿಂದ ಅವನು ಮಹಾ ಶಕ್ತಿಶಾಲಿ ಎಂದೆಸಿಕೊಂಡಿದ್ದ.

ಹನುಮನು ಭಗವಾನ್ ಶ್ರೀರಾಮನನ್ನು ಸಂಪೂರ್ಣ ಮನಸ್ಸು ಹಾಗು ದೇಹದಲ್ಲಿ ತುಂಬಿಕೊಂಡಿದ್ದನು. ಇದರಿಂದ ಅವನ ಮನಸ್ಸು ಸಕಾರಾತ್ಮಕ ಯೋಚನೆಯಿಂದ ತುಂಬಿ ಅವನು ಅತ್ಯುನ್ನತ ಸ್ಥಿತಿ ಅಂದರೆ ಚಿರಂಜೀವಿಯಾಗಲು ಸಹಾಯವಾಯಿತು.

ಸಾಗರ ಉಲ್ಲಂಘನೆ ಮಾಡಲು ಭರತ ಭೂಖಂಡದ ಅಂಚಿಗೆ ಬಂದು ನಿಂತ ಹನುಮ ಅದರ ವಿಸ್ತಾರಕ್ಕೆ ಹೆದರಿ ನನ್ನಿಂದ ಸಾಧ್ಯವಿಲ್ಲ ಎಂದು ಯೋಚಿಸುತ್ತಿದ್ದಾಗ, ರಾಮನ ಮೊರೆಹೊಕ್ಕ ಹಾಗು ಸಮುದ್ರ ನೆಗೆದು ಹಾರಿ ಲಂಕೆ ಮುಟ್ಟಿದ.

ಹುಟ್ಟಿದಾಗ ಸೂರ್ಯನನ್ನೇ ಹಣ್ಣೆಂದು ತಿಳಿದು ತಿನ್ನಲು ಹೋದಾಗ ಅವನಿಗೆ ಎಷ್ಟು ದೂರ ಹೋದೆನೆಂದು ಅವನಿಗೇ ತಿಳಿದಿರಲಿಲ್ಲ. ಹನುಮನ ಮನದಲ್ಲಿ ಗುರಿ ಹಾಗು ಶ್ರದ್ಧೆ ಇದ್ದದ್ದರಿಂದಲೇ ಇದು ಸಾಧ್ಯವಾಯ್ತು ಎಂದು ಇಂದ್ರ ಅವನಿಗೆ ತಿಳಿಹೇಳಿ ಅವನನ್ನು ಭೂಮಿಗೆ ಕರೆತಂದನು.

ಆದ್ದರಿಂದ ಸರಿಯಾದ ಗುರಿ, ಅದನ್ನು ಸಾಧಿಸುವ ಶ್ರದ್ಧೆ, ದೈವದ ಬಲ ಇವುಗಳಿದ್ದರೆ ಎಂತಹ ಮಂಗನೂ ಮಹಾ ಶಕ್ತಿಶಾಲಿಯಾಗಿ ಹೊರಹೊಮ್ಮಬಹುದು ಎಂಬುದೇ ಹನುಮನ ಸಂಕೇತ. ಇದನ್ನು ಅರಿತು ನಾವು ಸಕಾರಾತ್ಮಕ ಯೋಚನೆ, ದೂರದೃಷ್ಟಿಯನ್ನು ಹೊಂದಿ ಜೀವನದಲ್ಲಿ ಜಯವನ್ನು ಪಡೆಯಿರಿ ಎನ್ನುವುದೇ ಹನುಮನ ಸಂಕೇತ. ಇದಕ್ಕಾಗಿಯೇ ನಾವು ಹನುಮ ದೇವರನ್ನು ಪೂಜಿಸುತ್ತೇವೆ.

Comments

comments

Similar Articles

Leave a Reply

Top