ಜೈ ಶ್ರೀನಿವಾಸನ್ ಗುರುಜೀ ಪರಿಸ್ಥಿತಿ ನೋಡಿ ನಿಮಗೂ ಅಯ್ಯೋ ಅನಿಸಿದರೆ ಆಶ್ಚರ್ಯವಿಲ್ಲ..!!

ಜೈ ಶ್ರೀನಿವಾಸನ್ ಗುರುಜೀ ಮನೆಯಲ್ಲಿರೋ ಎಲ್ಲ ಸದಸ್ಯರಿಗಿಂತ ಭಿನ್ನ ವ್ಯಕ್ತಿತ್ವ.. ತುಂಬಾ‌ ಬಾರಿ ಜೈ ಶ್ರೀನಿವಾಸನ್ ಗುರುಜೀ ನಡೆದುಕೊಂಡ ರೀತಿ ಪ್ರೇಕ್ಷಕರಿಗೆ ಕೋಪ ತರಿಸಿರಬಹುದು.. ಜೊತೆಗೆ ಇವರನ್ನೆಲ್ಲ ಯಾಕೆ ಇನ್ನೂ ಮನೆಯಲ್ಲಿ ಇಟ್ಟಿದ್ದಾರೆ ಅಂತ ಯೋಚಿಸಿರ ಬಹುದು.. ಅದನೆಲ್ಲ ಪಕ್ಕಕ್ಕೆ ಇಟ್ಟು ನೋಡಿದ್ರೆ ಗುರುಜೀ ಒಳಗೊಬ್ಬ ಪುಟ್ಟ ಮಗುವಿದ್ದಾನೆ..

ಕೆಲ ವಿಷ್ಯಗಳಲ್ಲಿ ಕೆಲವರು ನತದೃಷ್ಟರಾಗಿರ್ತಾರೆ.. ವೃತಿ ಬದುಕನ್ನ ಬಿಟ್ಟು ಗುರುಜೀ ಅವರ ವೈಯಕ್ತಿಕ ಜೀವನಕ್ಕೆ ಬರೋದಾದ್ರೆ ಅವರು ತಮ್ಮ ತಂದೆಯನ್ನ ನೆನೆದು ಕಣ್ಣೀರು ಹಾಕಿದ್ದು, ತಾನೂ ತುಂಬ ಚಿಕ್ಕ ವಯಸ್ಸಿನಲ್ಲಿ ತಂದೆ ಕಳೆದುಕೊಂಡೆ ಅನ್ನೋದನ್ನ ಹೇಳಿ ಅತ್ತಿದ್ದು ನಿಮಗೂ ಗೊತ್ತೆ ಇದೆ.

ಇಂದು ಕೂಡ ಗುರುಜೀ ತನ್ನ ತಂದೆಯನ್ನ ನೆನೆದು ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು.. ಇಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಇಷ್ಟವಾದ ಕೆಲ ವಸ್ತುಗಳನ್ನ ತಮ್ಮ ತಮ್ಮ ಮನೆಯಿಂದ ತರೆಸಿದ್ರು.. ಎಲ್ಲರೂ ತಮ್ಮೊಂದಿಗೆ ಆ ವಸ್ತುಗಳ ಜೊತೆ ಇದ್ದ ಅಟ್ಯಾಜ್ಮೆಂಟ್ ಬಗ್ಗೆ ಹೇಳಿಕೊಂಡ್ರು.. ತಮ್ಮ ನೆನಪಿನ ಬುತ್ತಿಯಲ್ಲಿ ಆ ವಸ್ತುಗಳು ತಮಗೆ ಎಷ್ಟು ಅಮೂಲ್ಯ ಅಂತ ಹೇಳಿದ್ರು..

ಈ ಸಾಲಿನಲ್ಲಿ ಶ್ರೀನಿವಾಸನ್ ಗುರುಜೀ ಕೂಡ ಇದ್ರು.. ಅವರಿಗೆ ಮನೆಯಿಂದ ಬಂದಿದ್ದದ್ದು ಒಂದು ಶೋ ಪಾಲಿಷ್ ಮಾಡುವ ಬ್ರೆಷ್.. ಅದು ಅವರ ತಂದೆ ಅವರದ್ದು.. ತಂದೆಯನ್ನ ನೋಡಿದ ನೆನಪೆ ಇಲ್ಲದ ಗುರುಜೀ ಭಾವುಕರಾದ್ರು..

ಜೆಕೆ ಹೇಳ್ತೀದ್ದ ನಮ್ಮ ಅಪ್ಪ ನನ್ನ ರಾಜ ಅಂತ ಕರಿತಿದ್ರು ಅಂತ, ಜಗನ್ ಹೇಳ್ತೀದ್ದ ನಾನು 7ನೇ ತರಗತಿ ಇರುವವರೆಗೂ ನನ್ನ ತಂದೆ ನನಗೆ ಸ್ನಾನ ಮಾಡಿಸಿ ಸ್ಕೂಲ್ ಯೂನಿಫಾರ್ಮ್ ಹಾಕಿಸುತ್ತಿದ್ರು ಅಂತ.. ಆದರೆ ನನಗೆ ನನ್ನ ತಂದೆಯೇ ನೆನಪಿಲ್ಲ.. ಅವರು ಬಗ್ಗೆ ನನಗೆ ಏನು ಗೊತ್ತಿಲ್ಲ..

ನನ್ನ ಬಳಿ ನನ್ನ ತಂದೆಯ ನೆನಪು ಅಂತ ಉಳಿದಿರುವುದು ಇದು.. ಈಗ ನನ್ನ ತಂದೆ ರೂಪದಲ್ಲಿ ನನ್ನ ಮಗ ಇದ್ದಾನೆ.. ಅವರಲ್ಲೇ ನಾನು ನನ್ನ ತಂದೆ ನೋಡ್ತೀದ್ದೀನಿ ಅಂತ ಕಣ್ಣೀರು ಹಾಕಿದ್ರು.. ಇದಕ್ಕೆ ಮನೆಯ ಸದಸ್ಯರ ಹಾಗೆ ಕಾರ್ಯಕ್ರಮ ನೋಡಿದ ಪ್ರೇಕ್ಷಕರ ಕಣ್ಣಿನ ಅಂಚಲ್ಲಿ ನೀರು ಬಂದದ್ದು ಸುಳ್ಳಲ್ಲ..

ಒಟ್ಟಿನಲ್ಲಿ ಇಂದಿನ ಬಿಗ್ ಬಾಸ್ ಸಂಚಿಕೆಯಲ್ಲಿ ಮ್ಯೂಸಿಯಂನ ಹೆಸರಿನಲ್ಲಿ ಮನೆ ಸದಸ್ಯರು ತಮ್ಮ ತಮ್ಮ ಭಾವುಕತೆಯನ್ನ ಹೊರಹಾಕುವಂತೆ ಮಾಡಿದ್ದು ಬಿಗ್ ಬಾಸ್…

Pic Courtesy: Colors Super

Pic Courtesy: Colors Super

Comments

comments

Similar Articles

Top