You are here
Home > ವಾಹಿನಿ ಸುದ್ದಿ > ಸೀರಿಯಲ್ ನೋಡಿ ಆತ್ಯಹತ್ಯೆ ಮಾಡಿಕೊಂಡ ದಾವಣಗೆರೆ ಬಾಲಕಿ..!!

ಸೀರಿಯಲ್ ನೋಡಿ ಆತ್ಯಹತ್ಯೆ ಮಾಡಿಕೊಂಡ ದಾವಣಗೆರೆ ಬಾಲಕಿ..!!

ಮಹಿಳಯರೇ ಸೀರಿಯಲ್ ಅಂದ್ರೆ ನಿಮಗೆ ತುಂಬಾ ಇಷ್ಟನಾ? ನಿಮ್ಮ ಮಕ್ಕಳು ಕೂಡ ಧಾರಾವಾಹಿ ನೋಡುತ್ತಾರಾ..? ಹಾಗಾದ್ರೆ ನಿಮ್ಮ ಮಕ್ಕಳ ಬಗ್ಗೆ ತುಂಬಾ ಹುಷಾರಾಗಿರಿ.. ನೀವು ನೋಡುವ ಸೀರಿಯಲ್ ಮಕ್ಕಳ ಜೀವಕ್ಕೆ ಕುತ್ತು ತರಲಿದೆ.

ಹೌದು, ಚಿಕ್ಕ ಮಕ್ಕಳ ಮುಂದೆ ಸೀರಿಯಲ್ ನೋಡುವ ಮುನ್ನ ಪೋಷಕರೇ ಎಚ್ಚರ. ಇಂತಹ ಸೀರಿಯಲ್ ನಿಮ್ಮ ಮಕ್ಕಳ ಜೀವಕ್ಕೆ ಕುತ್ತು ತರುವುದು.
ದೃಷ್ಟಿ ಮಕ್ಕಳ ಮೇಲೆ ಹೆಚ್ಚು ಬೀಳಲು ಕಾರಣವೇನು ಗೊತ್ತಾ..?

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ನಂದಿನಿ’ ಸೀರಿಯಲ್ ನೋಡಿ ಮಗು ಬೆಂಕಿ ಹಚ್ಚಿಕೊಂಡಿದೆ. ಧಾರಾವಾಹಿಯಲ್ಲಿ ನಾಯಕಿ ಬೆಂಕಿ ಹಚ್ಚಿಕೊಂಡು ಕುಣಿಯುತ್ತಿದ್ದಳು, ಇದನ್ನು ನೋಡಿ ಪ್ರೇರಣೆಗೊಂಡ 7 ವರ್ಷದ ಪ್ರಾರ್ಥನ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ ಅಂತ ಪೋಷಕರು ಆರೋಪಿಸಿದ್ದಾರೆ.

ಇದೇ ತಿಂಗಳು 11 ರಂದು ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ  ಈ ಘಟನೆ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವುನ್ನಪಿದೆ. ಪ್ರಾರ್ಥನ ಹರಿಹರ ನಗರದ ಸೆಂಟ್ ಮೇರಿಸ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವುದಾಗಿ ತಿಳಿದು ಬಂದಿದೆ.

Comments

comments

Similar Articles

Leave a Reply

Top