You are here
Home > ವಾಹಿನಿ ಸುದ್ದಿ > ಅಪ್ಪುಗೆ ಪವರ್ ಸ್ಟಾರ್ ಅಂತ ಟೈಟಲ್ ಕೊಟ್ಟವರು ಯಾರು ಗೊತ್ತಾ..? ಟೈಟಲ್ ಹಿಂದಿನ ಇಂಟ್ರಸ್ಟಿಂಗ್ ಕಥೆ ಇಲ್ಲಿದೆ ನೋಡಿ..!!

ಅಪ್ಪುಗೆ ಪವರ್ ಸ್ಟಾರ್ ಅಂತ ಟೈಟಲ್ ಕೊಟ್ಟವರು ಯಾರು ಗೊತ್ತಾ..? ಟೈಟಲ್ ಹಿಂದಿನ ಇಂಟ್ರಸ್ಟಿಂಗ್ ಕಥೆ ಇಲ್ಲಿದೆ ನೋಡಿ..!!

ಅಪ್ಪು, ಪುನೀತ್, ಪುನೀತ್ ರಾಜ್ ಕುಮಾರ್, ಇದೆಲ್ಲ ಪವರ್ ಸ್ಟಾರ್ ಆಗೋಕು ಮೊದಲು ಕೇಳಿ ಬಂದ ಹೆಸರು.. ಅದರಲ್ಲೂ ಪವರ್ ಸ್ಟಾರ್ ಅನ್ನೋ ಹೆಸರು ಪುನೀತ್ ಅವರಿಗೆ ಸೂಟ್ ಆದ ಹಾಗೆ ಬೇರ್ಯಾರಿಗೂ ಸೂಟ್ ಆಗಲ್ಲ ಅನ್ನಿಸುತ್ತೆ..ಅದು ಪುನೀತ್ ರಾಜ್ ಕುಮಾರ್ ಅವರ ಸಿನಿಮಾದಲ್ಲು ಎದ್ದು ಕಾಣುತ್ತೆ..

ಮನೆಯವರೆಲ್ಲ ಅಪ್ಪು ಅಂತ ಪ್ರೀತಿಯಿಂದ ಕರೆಯೋದು ನಿಮಗೆ ಗೊತ್ತೆ ಇದೆ.. ಹಾಗಾಗೆ ಹೀರೊ ಆಗಿ ಮಾಡಿದ ಮೊದಲ ಸಿನಿಮಾಗೆ ಅಪ್ಪು ಅಂತ ಹೆಸರಿಟ್ಟಿದ್ದು.. ಆ ಚಿತ್ರ ಕನ್ನಡ‌ ಸಿನಿಮಾ ರಂಗದಲ್ಲಿ ಹೊಸದೊಂದು ‌ಇತಿಹಾಸ ಬರೆದಿದ್ದು.. ಆ ನಂತರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೆಸರಿನ ಮೇಲೆ ಪವರ್ ಸ್ಟಾರ್ ಅಂತ ಬಂದಿದ್ದು.. ಹಾಗಿದ್ರೆ ಈ ಪವರ್ ಸ್ಟಾರ್ ಹೆಸರನ್ನ ನೀಡಿದ್ದು ಯಾರು ಗೊತ್ತಾ..?

ಅದು ಬೇರ್ಯಾರು ಅಲ್ಲ ಡಾ. ಶಿವರಾಜ್ ಕುಮಾರ್ ಅವ್ರು.. ಹೌದು, ಹೀಗಂತ ಸ್ವತಃ ಶಿವಣ್ಣನೇ ಹೇಳಿದ್ದು ಅಂಜನಿಪುತ್ರ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ.. ನನ್ನ ತಮ್ಮ ಹೇಗೆ ಅಂತ ನನಗೆ ಗೊತ್ತು.. ಅವನು ಚಿಕ್ಕ ವಯಸ್ಸಿಗೆ ನ್ಯಾಷನಲ್ ಅವಾರ್ಡ್ ಪಡೆದವನು.. ಆಗ್ಲೇ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡುವನು.. ನನ್ನ ತಮ್ಮನ ಪವರ್ ಏನು ಅಂತ ಅವನು ಚಿಕ್ಕವನಿದ್ದಾಗಲೇ ತೋರಿಸಿದ್ದ.. ಹೀಗಾಗೆ ಅಪ್ಪು ಸಿನಿಮಾ ಸ್ಟೋರಿ ಕೇಳಿದ ತಕ್ಷಣ ಈ ಸಿನಿಮಾ ನೀನ್ ಮಾಡು ಅಂತ ಹೇಳಿದ್ದೆ..

ಅವನು ಹೇಗೆ ಇರ್ತಾನೆ ಅನ್ನೋದನ್ನ ನಾನು ನೋಡಿದ್ದೀನಿ.. ನೀವೂ ಈಗ ಕರೆಯೋ ಪವರ್ ಸ್ಟಾರ್ ಹೆಸರನ್ನ ಅವನಿಗೆ ಇಟ್ಟವನು ನಾನೆ ಈ ಟವರ್(ಶಿವರಾಜ್ ಕುಮಾರ್) ಅಂತ ಹೇಳಿದ್ರು‌.. ನಂತರ ನನ್ನ ತಮ್ಮ ಈಗ ಪ್ರೊಡೆಕ್ಷನ್ ಹೌಸ್ ಶುರು ಮಾಡಿದ್ದಾನೆ.. ಹೊಸಬರಿಗೆ ಅವಕಾಶ ಕೊಟ್ಟಿದ್ದಾನೆ.. ನಂತರದಲ್ಲಿ ಈಗ ಆಡಿಯೋ ಕಂಪನಿ ಶುರುವಾಯ್ತು ಈ ಮೂಲಕ ಅವನ ಮತ್ತೊಂದು ಕನಸು ನೆರವೇರಿದೆ ಅಂದ್ರು..

ಸದ್ಯಕ್ಕೆ ಅಂಜನಿಪುತ್ರ ಆಡಿಯೋ ಹಾಗೆ ಟ್ರೇಲರ್ ಲಾಂಚ್ ಆಗಿದ್ದು ಇಲ್ಲೂ ತಮ್ಮ ಪವರ್ ನ ಈ ಪವರ್ ಸ್ಟಾರ್ ತೋರಿಸ್ತಾ ಇದ್ದಾರೆ.. ‌ಸದ್ಯದಲ್ಲೇ ಸಿನಿಮಾ ತೆರೆಗೆ ಬರೋಕೆ‌ ಸಜ್ಜಾಗಿದ್ದು, ಬಾಕ್ಸ್ ಆಫೀಸ್ ಸೌಂಡ್ ಮಾಡೋಕೆ ಸಾಧ್ಯತೆಗಳಿವೆ..

Comments

comments

Similar Articles

Leave a Reply

Top