You are here
Home > ವಾಹಿನಿ ಸುದ್ದಿ > ಕುಮಾರಣ್ಣ ಮನಸ್ಸು ಮಾಡಬೇಕು. ನಾನು ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವ ಕ್ಷೇತ್ರದಿಂದ ಗೊತ್ತಾ..?

ಕುಮಾರಣ್ಣ ಮನಸ್ಸು ಮಾಡಬೇಕು. ನಾನು ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ. ಯಾವ ಕ್ಷೇತ್ರದಿಂದ ಗೊತ್ತಾ..?

ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ನ ಅಧಿಕಾರಕ್ಕೆ ತರಲು ಸನ್ಮಾನ್ಯ ದೇವೇಗೌಡರಿಂದ ಹಿಡಿದು ಕಾರ್ಯಕರ್ತರ ವರೆಗೂ ಪಣ ತೊಟ್ಟಿದ್ದಾರೆ.. ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನ ಕೈಗೊಂಡಿದ್ದು ಮನೆ ಮನೆಗೂ ಜೆಡಿಎಸ್ ಪಕ್ಷವನ್ನ ತಲುಪಿಸುವ ಕಾರ್ಯ ಅಚ್ಚುಕಟ್ಟಾಗಿ ನಡಿತಿದೆ..

ಈ ನಡುವೆ ರಾಜಕೀಯ ಪಕ್ಷಗಳಲ್ಲಿ ಸ್ಟಾರ್ ನಟರನ್ನ ಕರೆ ತರುವ ತಯಾರಿ ನಡೆದಿದ್ದು, ದರ್ಶನ್ ಅವರಿಗೆ ದೇವೇಗೌಡರು ಪಕ್ಷಕ್ಕೆ ಬರುವ ಹಾಗಿದ್ರೆ ನಾವು ಆಹ್ವಾನ ನೀಡಲಿದ್ದೇವೆ ಅಂತ ಹೇಳಿದ್ರು.. ಈಗ ಜೆಡಿಎಸ್ ಪಕ್ಷಕ್ಕೆ ಕನ್ನಡದ ಮತ್ತೊಬ್ಬ ನಟನ ಆಗಮನಕ್ಕೆ ಟೈಮ್ ಕೂಡಿ ಬಂದಿದೆ.. ಅದು ಬೇರ್ಯಾರು ಅಲ್ಲ ಹಾಸ್ಯ ನಟ ರಂಗಾಯಣ ರಘು ಅವ್ರು..

ಖಾಸಗಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುವ ಇಂಗಿತವನ್ನ ವ್ಯಕ್ತ ಪಡೆಸಿದ್ದಾರೆ.. ನಾನು ರಾಜಕೀಯಕ್ಕೆ ಬರುವುದಾದರೆ ಅದು ಜೆಡಿಎಸ್ ನಿಂದಲೇ.. ಹೀಗಾಗೆ ಇದಕ್ಕೆ ಕುಮಾರಣ್ಣ ಮನಸ್ಸು ಮಾಡಬೇಕು ಎಂದಿದ್ದಾರೆ..  ಹೌದು, ರಂಗಾಯಣ ರಘು ರಾಜಕೀಯಕ್ಕೆ ಬರುವ ಸಾಧ್ಯತೆಗಳಿವೆ.. ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ಸಹ ಮಾಡಿದ್ದಾರಂತೆ.. ಇನ್ನೇನಿದ್ರು ಕುಮಾರಣ್ಣ ಗ್ರೀನ್ ಸಿಗ್ನಲ್ ನೀಡುವುದೊಂದೆ ಬಾಕಿ.. ಟಿಕೇಟ್ ಆಕಾಂಕ್ಷಿಯಾಗಿರೋ ರಘು ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ ಗೊತ್ತಾ..?

ಸದ್ಯಕ್ಕೆ‌ ಸಿನಿಮಾರಂಗದಲ್ಲಿ ರಂಗಾಯಣ ರಘು ಅವರಿಗೆ ಒಳ್ಳೆ ಹೆಸರಿದೆ.. ಸದ್ಯಕ್ಕೆ ರಾಜಕೀಯಕ್ಕೆ ಬರಲು ಇಚ್ಛಿಸಿರುವ ಇವ್ರು, ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.. ಇದಕ್ಕೆ ಕುಮಾರಣ್ಣನ ಸಮ್ಮತಿ ಬೇಕು ಅಂದಿದ್ದಾರೆ.. ಈ ಹಿಂದೆ ಮಧುಗಿರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಣಕ್ಕೆ ಇಳಿದಿದ್ದು ಇದೇ ಕ್ಷೇತ್ರದಿಂದ..

 

Comments

comments

Similar Articles

Leave a Reply

Top