You are here
Home > ವಾಹಿನಿ ಸುದ್ದಿ > ದರ್ಶನ್ ಅವರಿಗೆ ಉಳಿದುಕೊಂಡಿರುವ ದೊಡ್ಡ ಆಸೆ ಏನು ಅಂತ ಗೊತ್ತಾ…?

ದರ್ಶನ್ ಅವರಿಗೆ ಉಳಿದುಕೊಂಡಿರುವ ದೊಡ್ಡ ಆಸೆ ಏನು ಅಂತ ಗೊತ್ತಾ…?

ನವಗ್ರಹ ಸಿನಿಮಾ ನೋಡೆ ಇರ್ತೀರಾ.. ಆ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆಗೆಟಿವ್ ಶೇಡ್ ನಲ್ಲಿ ಕಾಣಿಕೊಂಡಿದ್ರು… ‘ಜಗ್ಗು‘ ಆಗಿ ದಾದ ಕಾಣಿಸಿಕೊಂಡ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ಬಿಟ್ಟಿತ್ತು.. ಇದು ದಿನಕರ್ ತೂಗುದೀಪ್ ಹಾಗೆ ಚಾಲೆಂಜಿಂಗ್ ಸ್ಟಾರ್ ಕಾಂಬಿನೇಷನ್ ಮೊದಲ ಅದ್ದೂರಿ ಬಜೆಟ್ ಸಿನಿಮಾ..

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ಈ ಚಿತ್ರದಲ್ಲಿ ಕನ್ನಡ ಸಿನಿಮಾರಂಗದ ಖಳನಟರ ಮಕ್ಕಳೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕೂಡ ನಿಮಗೆ ಗೊತ್ತು.. ಅಂದಹಾಗೆ ದರ್ಶನ್ ಅವರು ಕಾಣಿಸಿಕೊಂಡಿದ್ದ ಜಗ್ಗು ಪಾತ್ರ ಮೊದಲಿಗೆ ವಿನೋದ್ ಪ್ರಭಾಕರ್ ಗಾಗಿ ಸಿದ್ದ ಮಾಡಿದ್ದಂತೆ.. ಪೊಲೀಸ್ ಪಾತ್ರವನ್ನ ದರ್ಶನ್ ಅವರು ಮಾಡಬೇಕಿತ್ತಂತೆ.. ಆದ್ರೇ ಸ್ವತಃ ದರ್ಶನ್ ಅವರೇ ಈ ಸಿನಿಮಾದಲ್ಲಿ ಜಗ್ಗು ಪಾತ್ರವನ್ನ ತಾನು ಪ್ಲೇ ಮಾಡೋದಾಗಿ ದಿನಕರ್ ಗೆ ಹೇಳಿದ್ರು..

ಕನ್ನಡ ಚಿತ್ರರಂಗದ ಸಾರಥಿ ತಮಿಳಿನ‌ ಸಿನಿಮಾದಲ್ಲಿ ನಟಿಸಿದ್ದಾರೆ.. ಯಾವ ಸಿನಿಮಾ ಗೊತ್ತಾ..?

ಇದು ದರ್ಶನ್ ಅವರಿಗೆ ಇಷ್ಟವಾದ ಪಾತ್ರವಾಗಿತ್ತು.. ಯಾಕಂದ್ರೆ ದರ್ಶನ್ ಅವರಿಗೆ ಮೊದಲಿನಿಂದಲೂ ನೆಗೆಟಿವ್ ರೋಲ್ ಮಾಡೋ ಆಸೆ ಇತ್ತು ಹೀಗಾಗೆ ಜಗ್ಗು ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ರು..

ಈಗಲೂ ದರ್ಶನ್ ಅವರಿಗೆ ಇರೋ ದೊಡ್ಡದೊಂದು ಆಸೆ ಏನು ಗೊತ್ತಾ..?

ತನ್ನ ತಂದೆ ಶ್ರೀನಿವಾಸ್ ತೂಗುದೀಪ ಕನ್ನಡ ಸಿನಿಮಾದಲ್ಲಿ ದೊಡ್ಡ ವಿಲನ್ ಆದ್ರೂ, ಬೆಸ್ಟ್ ವಿಲನ್ ಆಗಿ ಒಂದೇ ಒಂದು ಅವಾರ್ಡ್ ತೆಗೆದುಕೊಂಡಿಲ್ಲ.. ಹೀಗಾಗಿ ದರ್ಶನ್ ವಿಲನ್ ಪಾತ್ರವೊಂದರಲ್ಲಿ ಕಾಣಿಸಿಕೊಂಡು, ಬೆಸ್ಟ್ ವಿಲನ್ ಪಾತ್ರಕ್ಕೆ ಪ್ರಶಸ್ತಿ ಪಡೆಯಬೇಕಂತೆ..

ಅದನ್ನ ತನ್ನ ದಿವಂಗತ ಶ್ರೀನಿವಾಸ್ ತೂಗುದೀಪ ಅವರಿಗೆ ಅರ್ಪಿಸಬೇಕು ಎನ್ನುವ ಮಹದಾಸೆ ದರ್ಶನ್ ಅವರಿಗೆ ಇದ್ಯಂತೆ.. ಇಂತಹದೊಂದು ಆಸೆ ನನ್ನ ಅಣ್ಣನಿಗೆ ಇದೆ ಅಂತ ಈ ಹಿಂದೆ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ರು ದಿನಕರ್ ತೂಗುದೀಪ್.. ಆದಷ್ಟು ಬೇಗ ಈ ದಾಸನ ಆಸೆ ಈಡೇರಲಿ ಅನ್ನೋದು ಕೋಟಿ ಕನ್ನಡ ಹೃದಯಗಳ ಆಸೆಯೂ ಆಗಿದೆ. ಏನಂತೀರಾ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೊದಲ ಹೆಸರು ಏನೆಂದು ಗೊತ್ತಾ..?

 

Comments

comments

Similar Articles

Leave a Reply

Top