You are here
Home > ಲೈಫ್‍ಸ್ಟೈಲ್ > ಮದುವೆ ಆಗಬೇಕು ಅಂತ ಸಿದ್ದವಾಗಿದ್ದೀರಾ..? ಹಾಗಿದ್ರೆ ಹುಷಾರ್..!! ಈ ಗುಣಗಳು ಅವರಲ್ಲಿದ್ರೆ ಯೋಚಿಸಿ ಮುಂದುವರೆಯಿರಿ..

ಮದುವೆ ಆಗಬೇಕು ಅಂತ ಸಿದ್ದವಾಗಿದ್ದೀರಾ..? ಹಾಗಿದ್ರೆ ಹುಷಾರ್..!! ಈ ಗುಣಗಳು ಅವರಲ್ಲಿದ್ರೆ ಯೋಚಿಸಿ ಮುಂದುವರೆಯಿರಿ..

ಮದುವೆಗೂ ಮೊದಲು ಒಂದು ರೀತಿಯ ಜೀವನ.. ಹುಡುಗಿಯರದ್ದೇ ಒಂದು ಪ್ರಪಂಚವಾದ್ರೆ ಹುಡುಗರದ್ದೇ ಬೇರೆ ಪ್ರಪಂಚ.. ಮದುವೆ ಬಗ್ಗೆ ಇಬ್ಬರಲ್ಲೂ ಕೋಟಿ ಕನಸು.. ನನ್ನ ಹುಡುಗ ಹೀಗಿರಬೇಕು ನನ್ನ ಹುಡುಗಿಗೆ ಈ ಗುಣ ಇರಬೇಕು ಅನ್ನೋದು ತುಂಬಾ ಕಾಮನ್.. ಆದರೆ ನೀವೂ ಅಂದುಕೊಂಡ ಸಂಗಾತಿಯನ್ನೇ ನೀವೂ ಆರಿಸಿಕೊಂಡಿದ್ದೀರಾ ಅನ್ನೋದು ತುಂಬಾ ಮುಖ್ಯ.

ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಸ್ವಲ್ಪ ಕಟ್ಟುನಿಟ್ಟಾಗೆ ಇರುತ್ತಾರೆ.. ಇಂತಹ ಹುಡುಗನೇ ಬೇಕು ಅಂತ ಕಸನು ಕಂಡಿರ್ತಾರೆ.. ಅದರೆ ನೀವು ಆಯ್ಕೆ ಮಾಡಿಕೊಂಡ ಬಾಳಸಂಗತಿಯಲ್ಲಿ ಇಂತಹ ಗುಣಗಳಿದ್ರೆ ಒಮ್ಮೆ ಯೋಚಿಸಿ ಮುಂದುವರೆಯುವುದು ಸರಿ ಅಂತೆ.

ಹೇರ್ ಕಟ್ ಮಾಡಿಸಿಕೊಂಡು ನಟಿಕೆ ತೆಗಿಸಿಕೊಳ್ಳೋರೆ ಹುಷಾರ್..!! ನಿಮ್ಮ ಜೀವಕ್ಕಿದೆ ಆಪತ್ತು.!!

ಸುಳ್ಳು ಹೇಳುವ ಗುಣ..

ನೀವೂ ಆಯ್ಕೆ ಮಾಡಿಕೊಳ್ಳಲು ಹೊರಟಿರುವ ವ್ಯಕ್ತಿ ಎಲ್ಲದಕ್ಕೂ ಸುಳ್ಳಿನ ಮಾಲೆಯನ್ನ ಪೋಣಿಸಿ ಹೇಳುತ್ತಿದ್ದರೆ, ಎಲ್ಲದಕ್ಕೂ ಒಂದೊಂದು ಕಟ್ಟುಕಥೆ ಹೇಳಿ ಯಾಮಾರಿಸುತ್ತಿದ್ದರೆ ಅವರಿಂದ ದೂರ ಇರುವುದೆ ಒಳ್ಳೆಯದು..

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ಹೆಚ್ಚು ಬೇಡಿಕೆ ಇಡುವುದು..
ಹಾಸಿಗೆ ಇದಷ್ಟು ಕಾಲುಚಾಚಬೇಕು ಅನ್ನೋ ಮಾತು ನೆನಪಿದ್ದರೆ ಒಳ್ಳೆಯದ್ದು, ಎಲ್ಲ ಸಮಯದಲ್ಲೂ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳದೆ ಎಲ್ಲದಕ್ಕೂ ಬೇಡಿಕೆ ಇಡುವವರಾದರೆ ಒಮ್ಮೆ ಯೋಚಿಸುವುದು ಉತ್ತಮವಂತೆ..

ಗೌರವ ನೀಡದಿರುವುದು..
ಹೌದು.. ಪ್ರತಿಯೊಬ್ಬ ವ್ಯಕ್ತಿಗೂ ಸ್ವಪ್ರತಿಷ್ಠೆ ಇದೆ.. ತಾನೂ ಏನೇ ಆಗಿದ್ದರು ರೆಸ್ಪೆಕ್ಟ್ ಬಯಸುವುದು ಮನುಷ್ಯನ ಸಹಜ ಗುಣ.. ಈ ಗುಣವಿದ್ದವರು ಉತ್ತಮ.. ಇಲ್ಲವಾದಲ್ಲಿ ಇದೇ ಮುಂದೆ ದೊಡ್ಡ ಬಿರುಕಾಗಿ ಪರಿಣಮಿಸಬಹುದು.. ದೃಷ್ಟಿ ಮಕ್ಕಳ ಮೇಲೆ ಹೆಚ್ಚು ಬೀಳಲು ಕಾರಣವೇನು ಗೊತ್ತಾ..?

ವಾದವನ್ನ ಮುಗಿಸದಿರುವುದು..
ಪ್ರತಿಯೊಂದಕ್ಕೂ ಅಂತ್ಯವಿರುತ್ತದೆ.. ಅದು ಮಾತಿನ ವಿಚಾರದಲ್ಲೂ ಅಷ್ಟೆ.. ಯಾವುದೋ ವಿಚಾರಕ್ಕೆ ಶುರುವಾದ ವಾದ ಕೊನೆಗೊಳ್ಳಲು ಬಿಡದಿರುವುದು.. ಅದನ್ನೆ ಮತ್ತೆ ಮತ್ತೆ ತೆಗೆದು ಜಗಳ ಮಾಡುವುದು.. ಇಂತಹ ಬಾಳಸಂಗಾತಿಯ ಆಯ್ಕೆಯಿಂದ ದೂರವಿರಿ..

ಬಾಯಿ‌ ಮುಚ್ಚದಿರುವುದು..
ಒಂದೇ ಸಮ ಜಗಳಕ್ಕೆ ನಿಂತು ಎಷ್ಟು ಸಮಾಧಾನ ಮಾಡಿದ್ರು ಮಾತು ಕೇಳದೆ, ಕಿರುಚುತ್ತಾ ವಾದ ಮಾಡುತ್ತ ಇರುವ ಗುಣವಿದ್ದರೆ ಯೋಚಿಸಿ..

ತಾಳ್ಮೆ ಇಲ್ಲದಿರುವುದು
ಇದು ತುಂಬಾ ಮುಖ್ಯವಾದ ಗುಣ.. ತಾಳ್ಮೆಯೊಂದಿದ್ದರೆ ಎಂತಹ ಸಮಸ್ಯೆಯನ್ನ ಯೋಚಿಸಿ ಗುಣಪಡಿಸಿಕೊಳ್ಳಬಹುದು.. ಈ ಗುಣವು ದಾಂಪತ್ಯ ಜೀವನಕ್ಕೆ ತುಂಬಾ ಮುಖ್ಯವಾಗಿರುತ್ತೆ..

 ಮಲಗುವ ಮುನ್ನ ಈ ವಸ್ತುಗಳು ನಿಮ್ಮ ತಲೆ ಹತ್ತಿರ ಇದ್ರೆ ಡೇಂಜರ್..!

ತನ್ನ ನಿಯಂತ್ರಣದಲ್ಲಿ ಎಲ್ಲವೂ ನಡೆಯಬೇಕು..
ಈ ಗುಣವಿದ್ದರೆ ಯಾವುದೇ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ.. ಯಾರೊಬ್ಬರು ಯಾರೊಬ್ಬರನ್ನ ನಿಯಂತ್ರಿಸಲು ಸಾಧ್ಯವಿಲ್ಲ.. ಒಂದು ಹಂತದವರೆಗೆ ಮಾತ್ರ ಇದು ಓಕೆ.. ಆದರೆ ಈ ಗುಣವಿದ್ದರೆ ಸಂಬಂಧಗಳು ಬೇಗ ಅಂತ್ಯ ಕಾಣುವ ಸಾಧ್ಯತೆಗಳಿವೆ.

ತನ್ನ ಬಗ್ಗೆ ಮಾತ್ರ ಯೋಚಿಸುವ ಗುಣ..
ಮದುವೆ ನಂತರದ ಜೀವನ ಅಂದ್ರೆ ಇಬ್ಬರು ಅರ್ಥ ಮಾಡಿಕೊಂಡು ಕೆಲವೊಮ್ಮೆ ನಿಭಾಯಿಸಿಕೊಂಡು ಹೋಗುವ ಗುಣವಿರಬೇಕು.. ನಾನು ಮಾತ್ರ, ನನಗೆ ಮಾತ್ರ, ಯಾರು ಬೇಕಿಲ್ಲ ಅನ್ನೋ ಗುಣವಿದ್ರೆ ಕಷ್ಟವಾಗದೆ ಇರದು..

Comments

comments

Similar Articles

Leave a Reply

Top