ಬಿಗ್ ಬಾಸ್ ಮನೆಗೆ ಲಾರ್ಡ್ ಪ್ರಥಮ್ ಎಂಟ್ರಿ..!?

ಬಿಗ್ ಬಾಸ್ ಸೀಸನ್ 5 ಪ್ರಾರಂಭವಾಗಿ ಇಂದಿಗೆ 38 ದಿನಗಳು. ಈಗಾಗಲೇ ಬಿಗ್ ಬಾಸ್ ಕುರಿತು ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿದೆ. ಕೆಲವರಿಗೆ ಈ ಬಾರಿ ಬಿಗ್ ಬಾಸ್ ತುಂಬಾ ಬೋರಿಂಗ್ ಹಾಗೂ ಇನ್ನು ಕೆಲವರಿಗೆ ಚೆನ್ನಾಗಿದೆ ಸ್ವಲ್ಪ ಮಜಾ ಬೇಕಿತ್ತು ಅನ್ನೋ ಅಭಿಪ್ರಾಯಗಳು ಕೇಳಿ ಬರ್ತಿದೆ.

ಕೃಪೆ: ಕಲರ್ಸ್ ಸೂಪರ್

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ಸದ್ಯಕ್ಕೆ 6ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಮನೆಗೆ ಹಳೇ ಸ್ಪರ್ಧಿಗಳಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ವೀಕ್ಷಕರಿಗೆ ಸಖತ್ ಮನೋರಂಜನೆ ನೀಡಿದ್ದ ಸ್ಪರ್ಧಿಗಳನ್ನ ಒಳಗೆ ಕಳುಹಿಸಲು ಉದ್ದೇಶಿಸಿದ್ದಾರೆ. ಸದ್ಯಕ್ಕೆ ಕಿರಿಕ್ ಕೀರ್ತಿ ಒಂದು ದಿನದ ಮಟ್ಟಿಗೆ ಮನೆಗೆ ಪ್ರವೇಶ ಮಾಡಿ ಕನ್ನಡದ ಪಾಠ ಮಾಡಿ ಆಯಿತು. ಇನ್ನು ವಾರವಿಡೀ ಮತ್ತಷ್ಟು ಅತಿಥಿಗಳು ಬರಲಿದ್ದಾರೆ. ಶಾಲಿನಿ, ಶೀತಲ್ ಹಾಗೂ ನಿರಂಜನ್ ಹೆಸರು ಕೇಳಿ ಬರುತ್ತಿದೆ.

ಕೃಪೆ: ಕಲರ್ಸ್ ಸೂಪರ್

ಬಿಗ್ ಬಾಸ್ ಮನೆಯಲ್ಲಿ ಕಿಕ್ ಹೆಚ್ಚಿಸಿದ ಕಿರಿಕ್ ಕೀರ್ತಿ..

ಕಳೆದ ಸೀಸನ್ ನಲ್ಲಿ ತಮ್ಮ ವಿಭಿನ್ನ ಶೈಲಿಯಿಂದ ಜನರನ್ನು ಮನರಂಜಿಸಿದ ಒಳ್ಳೆ ಹುಡುಗ ಪ್ರಥಮ್ ಎಂಟ್ರಿಗಾಗಿ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹೌದು, ಯಾವಾಗ ದೊಡ್ಡ ಮನೆಗೆ ಹಳೇ ಸ್ಪರ್ಧಿಗಳು ಪ್ರವೇಶ ಮಾಡಲಿದ್ದಾರೆ ಅನ್ನೋ ಸುದ್ದಿ ಹೊರ ಬಂತೊ, ಎಲ್ಲರದು ಒಂದೇ ಒತ್ತಾಯ ಪ್ರಥಮ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಬೇಕು.

ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗಲ್ಲ.. ಯಾಕಂದ್ರೆ…!!?

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಥಮ್ ಗೆ ಅಧಿಕೃತವಾಗಿ ಬಿಗ್ ಬಾಸ್ ಕಡೆಯಿಂದ ಬುಲಾವ್ ಬಂದಿಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಥಮ್ ಮನೆಯೊಳಗೆ ಹೋಗಲಿದ್ದಾರೆ ಅನ್ನೋ ಊಹಾಪೋಹಗಳು ಕೇಳಿ ಬರ್ತಿದೆ.

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ‘ಖಂಡಿಸುವ ಪ್ರಥಮ್’ ಈ ವಾರ ದೊಡ್ಡ ಮನೆಗೆ ಎಂಟ್ರಿ ಕೊಡ್ತಾರ ಕಾದು ನೋಡಬೇಕು. ಒಂದು ವೇಳೆ ಪ್ರಥಮ್ ಮನೆಗೆ ಎಂಟ್ರಿ ನೀಡಿದ್ದೆ ಆದಲ್ಲಿ ಮನರಂಜನೆಗೆ ಹಾಗೂ ಹುಚ್ಚಾಟಕ್ಕೆ ಏನು ಕಡಿಮೆ ಇರೋದಿಲ್ಲ. ಒಟ್ಟಿನಲ್ಲಿ ಲಾರ್ಡ್ ಪ್ರಥಮ್ ಸಾರ್ ಬಿಗ್ ಬಾಸ್ ಗೆ ಎಂಟ್ರಿ ಕೊಡಬೇಕು ಅಂತ ಜನರು ಆಗ್ರಹ ಮಾಡಿದ್ದಾರೆ.ಕೃಪೆ: ಕಲರ್ಸ್ ಕನ್ನಡ

 

Comments

comments

Similar Articles

Top