You are here
Home > ವಾಹಿನಿ ಸುದ್ದಿ > ಅನುಶ್ರೀ ಮೊದಲ ಬಾರಿಗೆ ಆಟೋಗ್ರಾಫ್ ಪಡೆದಿದ್ದು ಯಾರಿಂದ ಗೊತ್ತಾ..? ಹೆಮ್ಮೆ ಪಡುವಂತಹ ವ್ಯಕ್ತಿ ಅವರು.!!

ಅನುಶ್ರೀ ಮೊದಲ ಬಾರಿಗೆ ಆಟೋಗ್ರಾಫ್ ಪಡೆದಿದ್ದು ಯಾರಿಂದ ಗೊತ್ತಾ..? ಹೆಮ್ಮೆ ಪಡುವಂತಹ ವ್ಯಕ್ತಿ ಅವರು.!!

ಅನುಶ್ರೀ ಕನ್ನಡ ಕಿರುತೆರೆ ವಾಹಿನಿಯಲ್ಲಿ ತನ್ನದೇ ಆದ ಸ್ಥಾನವನ್ನ ಪಡೆದುಕೊಂಡಿದ್ದಾರೆ.. ಎಂತಹ ಷೋ ಆಗ್ಲೀ ಲೀಲಾಜಾಲವಾಗಿ ನಿರೂಪಣೆ ನೀಡಿ ಪ್ರೇಕ್ಷಕರನ್ನ ರಂಜಿಸೋ ಟ್ಯಾಲೆಂಟ್ ಇರುವ ನಿರೂಪಕಿ ಈಕೆ.

ಸದ್ಯಕ್ಕೆ ಕನ್ನಡದ ಹಲವು ಚಾನೆಲ್ ಗಳು ಹಾಗೆ ಸಿನಿಮಾ ಈವೆಂಟ್ ಗಳು ಅನುಶ್ರೀ ಅವರನ್ನ ಆಂಕರ್ ಆಗಿ ಆಹ್ವಾನ ನೀಡುತ್ತಿವೆ.. ಇದಕ್ಕೆ ಅನುಶ್ರೀ ವಿಭಿನ್ನ ರೀತಿಯ ನಿರೂಪಣೆ ಅಲ್ಲದೆ ಮತ್ತೇನು ಕಾರಣವಲ್ಲ…

ತನ್ನ ಇಷ್ಟು ವರ್ಷದ ಈ ಜರ್ನಿಯಲ್ಲಿ ದೊಡ್ಡ ದೊಡ್ಡ ಸಲೆಬ್ರೆಟಿಗಳನ್ನ ಭೇಟಿಯಾಗಿರೋ ಈ ನಟಿ ಕಮ್ ಆಂಕರ್ ಯಾರಿಂದಲೂ ಒಂದೇ ಒಂದು ಆಟೋಗ್ರಾಫ್ ಪಡೆದಿಲ್ವಂತೆ.. ಹಂಗಂತ ಸ್ವತಃ ಹೇಳಿದ್ದು ಅನುಶ್ರೀ… ಜೀಕನ್ನಡ ವಾಹಿನಿಯಲ್ಲಿ ನಡೆದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಷೋನಲ್ಲಿ ಹೀಗೆ ಹೇಳಿದ್ರು..

ಕೃಪೆ: ಜೀ ಕನ್ನಡ

ಈ ಹಿಂದೆ ನಡೆದ ಸಂಚಿಕೆಯಲ್ಲಿ ಅಮೋಘ ಹಾಗೆ ತುಷಾರ್ ಇಬ್ಬರು ಸೈನಿಕರಿಗೆ ಕೃತಜ್ಞತೆಯನ್ನ ಸಲ್ಲಿಸುವ ಡ್ಯಾನ್ಸ್ ಒಂದನ್ನ ಮಾಡಿದ್ರು.. ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ದದಲ್ಲಿ ಸೈನಿಕರ ಟೀಮ್ ನ ಮುನ್ನಡೆಸಿದ್ದ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನ ಕರೆಸಿದ್ರು.. ಸಾವನ್ನ ಲೆಕ್ಕಿಸದೆ ಪಾಕಿಸ್ತಾನದ ವಿರುದ್ದ ಹೋರಾಡಿದ ರೋಚಕ ಘಟನೆಯನ್ನ, ಸಾವು ಕಣ್ಣ ಮುಂದೆ ಬಂದ ಘಳಿಗೆಯನ್ನ, ಆ ಸಂದರ್ಭದಲ್ಲಿ ತನ್ನ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದನ್ನ ಹೇಳಿದ್ರು..

ಕೃಪೆ: ಜೀ ಕನ್ನಡ

ಈ ಎಲ್ಲವನ್ನೂ ಕೇಳಿದ ಅನುಶ್ರೀ ನಂತರ ನಮ್ಮ ಹೆಮ್ಮೆಯ ಸೈನಿಕರಾದ ಕ್ಯಾಪ್ಟನ್ ನವೀನ್ ನಾಗಪ್ಪ ಅವರಿಂದ ಆಟೋಗ್ರಾಫ್ ಪಡೆದುಕೊಂಡ್ರು.. ಇದುವರೆಗೂ ತನ್ನ 10 ವರ್ಷದ ಕೆರಿಯರ್ ನಲ್ಲಿ ಯಾರಿಂದಲೂ ಆಟೋಗ್ರಾಫ್ ಪಡೆದಿರಲಿಲ್ಲ. ನಾನು ಪಡೆದ ಮೊದಲ ಆಟೋಗ್ರಾಫ್ ಇದು..

ಕೃಪೆ: ಜೀ ಕನ್ನಡ

“ವಿಷ್ ಯೂ ದಿ ಅಲ್ ದಿ ಬೆಸ್ಟ್.. ನೇಷನ್ ಫಸ್ಟ್ ”..

ಇನ್ನೂ ಈಕೆಗೆ ಆಟೋಗ್ರಾಫ್ ನೀಡಿದ್ದ ಕ್ಯಾಪ್ಟನ್ ನವೀನ್ ಅವರು ಹೀಗೆ ಬರೆದಿದ್ರು.. “ವಿಷ್ ಯೂ ದಿ ಅಲ್ ದಿ ಬೆಸ್ಟ್.. ನೇಷನ್ ಫಸ್ಟ್” ಅಂತ..

ಕೃಪೆ: ಜೀ ಕನ್ನಡ

ನಮ್ಮ ಹೆಮ್ಮೆಯ ಸೈನಿಕರಾದ ಕ್ಯಾಪ್ಟನ್ ನವೀನ್ ನಾಗಪ್ಪ ರವರಿಗೆ ಅಲ್ಲಿ ನೆರೆದಿದ್ದವರೆಲ್ಲ ಗೌರವ ಸೂಚಿಸಿದ ಕ್ಷಣಗಳು..

ಕೃಪೆ: ಜೀ ಕನ್ನಡ

 

Comments

comments

Similar Articles

Leave a Reply

Top