You are here
Home > ವಾಹಿನಿ ಸುದ್ದಿ > ಕರ್ನಾಟಕದ ಹೆಬ್ಬಾಗಿಲು ಮಂಗಳೂರಿಗೆ ಆಘಾತ ನೀಡಿದ ಅಮೇರಿಕಾದ ನಾಸಾ ವರದಿ…!!

ಕರ್ನಾಟಕದ ಹೆಬ್ಬಾಗಿಲು ಮಂಗಳೂರಿಗೆ ಆಘಾತ ನೀಡಿದ ಅಮೇರಿಕಾದ ನಾಸಾ ವರದಿ…!!

ಮಂಗಳೂರು ಕರ್ನಾಟಕದ ಅತಿ ದೊಡ್ಡ  ಕರಾವಳಿ ನಗರ ಕೇಂದ್ರ ಹಾಗೂ ರಾಜ್ಯದ 4ನೇ ಅತಿ ದೊಡ್ಡ ನಗರವಾಗಿದೆ. ಭಾರತದ ಪಶ್ಚಿಮ ಕರಾವಳಿಯ ಅರಬ್ಬೀ ಸಮುದ್ರದ ತೀರದಲ್ಲಿರುವ ಮಂಗಳೂರು, ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾಗಿದ್ದು, ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ.

ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ-ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹೆಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ.

ಇಷ್ಟೆಲ್ಲಾ ವಿಶೇಷತೆ ಇರುವ ನಮ್ಮ ಮಂಗಳೂರು ಇದೀಗ ಅಪಾಯದ ಸ್ಥಿತಿಗೆ ತಲುಪಿದೆ. ಹೌದು, ಅಧ್ಯಯನದ ಪ್ರಕಾರ ಜಾಗತಿಕ ತಾಪಮಾನದ ಹೆಚ್ಚಳದಿಂದ ನೀರ್ಗಲ್ಲುಗಳು ಕರಗುತ್ತಿದ್ದು, ಸಮುದ್ರದ ಮಟ್ಟ ಹೆಚ್ಚುತ್ತಿದೆ. ಹೀಗೆ ನೀರಿನ ಮಟ್ಟ ಹೆಚ್ಚಾದರೆ  ಜಗತ್ತಿನಲ್ಲಿ ಮೊದಲು ಮುಳುಗುವ ಪ್ರದೇಶ ಮಂಗಳೂರು ಎಂದು ತಿಳಿದು ಬಂದಿದೆ.

ಅಪಾಯದ ಅಂಚಿನಲ್ಲಿರುವ ನಗರಗಳು ಯಾವುದೆಂದು ಪತ್ತೆ ಹಚ್ಚಲು ಅಮೆರಿಕಾದ ನಾಸಾ ಟೂಲ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಯಾವ ನಗರ ಎಷ್ಟು ಅಪಾಯದಲ್ಲಿದೆ ಎಂಬ ಮಾಹಿತಿ ನೀಡಿದೆ, ಇದರ ಪ್ರಕಾರ ಮಂಗಳೂರು ಮೊದಲು ಎಂದು ಪತ್ತೆಯಾಗಿದೆ.

ನೀರ್ಗಲ್ಲು, ಮಂಜಿನ ಹಾಳೆ, ಮಂಜುಗಡ್ಡೆಗಳು ಪ್ರತೀ ನಗರಗಳ ಮೇಲೂ ತನ್ನದೇ ಪ್ರಭಾವ ಬೀರುತ್ತವೆ. ನಾಸಾ ಅಭಿವೃದ್ಧಿಪಡಿಸಿದ ಈ ಟೂಲ್‌ನಿಂದ ಯಾವ ನಗರ, ಯಾವಾಗ ಅಪಾಯದ ಮಟ್ಟ ತಲುಪಲಿದೆ ಎಂಬುದನ್ನು ಕಂಡುಕೊಳ್ಳಬಹುದು. ಇದರ ಆಧಾರದ ಮೇಲೆ ಮುಂದಿನ 100 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು, ನಗರದ ನಕ್ಷೆಯನ್ನು ರೂಪಿಸಬೇಕಾಗುತ್ತದೆ. ಲಂಡನ್ ನಗರ ಸಮುದ್ರ ಮಟ್ಟ ಹೆಚ್ಚಳದಿಂದ ವಾಯುವ್ಯ ಭಾಗದ ಗ್ರೀನ್‌ಲ್ಯಾಂಡ್ ಮೇಲೆ ಪರಿಣಾಮ ಬೀರಲಿದೆ ಎಂದು ಸುಳಿವು ನೀಡುತ್ತಿದೆ ಈ ಟೂಲ್.

Comments

comments

Similar Articles

Leave a Reply

Top