You are here
Home > ವಾಹಿನಿ ಸುದ್ದಿ > ಗಂಟೆ ಬಡೆದು ಆರತಿ ಮಾಡೋದಲ್ಲ ಪಂಚೆ ಎತ್ತಿ ಕಟ್ಟಿದ್ರೆ ಆಚಾರ್ಯರ ಟಪ್ಪಂಗುಚ್ಚಿ ಮಜಾನೇ ಬೇರೆ!!

ಗಂಟೆ ಬಡೆದು ಆರತಿ ಮಾಡೋದಲ್ಲ ಪಂಚೆ ಎತ್ತಿ ಕಟ್ಟಿದ್ರೆ ಆಚಾರ್ಯರ ಟಪ್ಪಂಗುಚ್ಚಿ ಮಜಾನೇ ಬೇರೆ!!

ಬಿಗ್ ಬಾಸ್ ಮನೆಯ ಸಕಲ ಕಲಾ ವಲ್ಲಭ .. ಹುಬ್ಬಳಿಯ ಜವಾರಿ ಶೈಲಿಯ ಭಾಷೆಯಿಂದ ಕನ್ನಡಿಗರ  ಮನೆ ಮಾತಾದ ಸೀದಾ ಸಾದ ಮನುಷ್ಯ.. ಇಷ್ಟೆಲ್ಲ ಹೇಳ್ತಾ ಇರೋದು ಬಿಗ್ ಬಾಸ್ ಮನೆಗೆ ಕಾಮನ್ ಮ್ಯಾನ್  ಆಗಿ ಎಂಟ್ರಿ ಪಡೆದಿರುವ ಆಚಾರ್ಯ ಅವರ ಬಗ್ಗೆ..  ಸದ್ಯಕ್ಕೆ ಬಿಗ್ ಬಾಸ್ ಮನೆಯ ತುಂಬೆಲ್ಲ ಇವರದೇ ಮಾತು..

 

 ಸ್ವಾಮೀಜಿ ಅಂದ್ರೆ ಪೂಜೆ ಜಪ ತಪ ಮಾಡ್ಕೊಂಡು ಇರ್ತಾರೆ ಅನ್ನೋದು ಎಲ್ಲರ ಅನಿಸಿಕೆ. ಆದ್ರೆ, ಆಚಾರ್ಯ ಬರಿ ಗಂಟೆ ಬಡಿದು ಆರತಿ ಮಾಡೋದ್ ಅಷ್ಟೇ ಅಲ್ಲ, ಪಂಚೆ ಎತ್ತಿ ಕಟ್ಟಿದ್ರು ಅಂದ್ರೆ  ಆಚಾರ್ಯರ ಟಪ್ಪಂಗುಚ್ಚಿ ಮಜಾನೇ ಬೇರೆ..

ಈ ಹಿಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ನೀಡಿದ್ದ ಟಾಸ್ಕ್ ನಲ್ಲಿ ವೀಕ್ಷಕರಿಗೆ ಸಖತ್ ಮನೋರಂಜನೆ ನೀಡಿದ್ದಾರೆ .. ಈ ವಾರದ ಲಕ್ಸುರಿ ಟಾಸ್ಕ್ ನ ಭಾಗವಾಗಿ ಮ್ಯೂಸಿಕಲ್ ಚೇರ್ ಟಾಸ್ಕ್ ಅನ್ನು ನೀಡಲಾಗಿತ್ತು.. ಈ ಟಾಸ್ಕ್ ನಲ್ಲಿ ಕಲಾಸಿಪಾಳ್ಯ ಚಿತ್ರದ ಸುಂಟರಗಾಳಿ ಹಾಡನ್ನು ಹಾಕಲಾಗಿತ್ತು.. ಈ  ಹಾಡಿಗೆ ಸಖತ್ತಾಗಿ ಟಪ್ಪಂಗುಚ್ಚಿ ಡಾನ್ಸ್ ಮಾಡುವ ಮೂಲಕ  ವೀಕ್ಷಕರ ಮನರಂಜಿಸಿದ್ದಾರೆ..

ಆಚಾರ್ಯರ ಜೊತೆ ಶೃತಿ, ಜಗನ್ ಸೇರಿದಂತೆ ಎಲ್ಲ ಸದಸ್ಯರು ಭರ್ಜರಿ  ಸ್ಟೆಪ್ ಹಾಕಿದ್ರು.. ತಮ್ಮ ಆಚಾರ ವಿಚಾರಗಳಿಗೆ ಚ್ಯುತಿ ಬಾರದಂತೆ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ರೀತಿಯಲ್ಲಿ ಮನೋರಂಜನೆ ಕೊಡ್ತಾಯಿರುವ  ಆಚಾರ್ಯ  ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ಸೆಲೆಬ್ರಿಟಿಗಳಾಗಿ ಎಂಟ್ರಿ ಪಡೆದಿದ್ದ ಸ್ಪರ್ಧಿಗಳಿಗೆ ಪ್ರಬಲವಾದ ಪ್ರತಿಸ್ಪರ್ಧಿ ಆಗಿ ಆಚಾರ್ಯ ಫೈಟ್ ಕೊಡ್ತಾ ಇರೋದಂತು ಸುಳ್ಳಲ್ಲ..

Comments

comments

Similar Articles

Leave a Reply

Top