You are here
Home > ವಾಹಿನಿ ಸುದ್ದಿ > ಕನ್ನಡ ಚಿತ್ರರಂಗದ ಸಾರಥಿ ತಮಿಳಿನ‌ ಸಿನಿಮಾದಲ್ಲಿ ನಟಿಸಿದ್ದಾರೆ.. ಯಾವ ಸಿನಿಮಾ ಗೊತ್ತಾ..?

ಕನ್ನಡ ಚಿತ್ರರಂಗದ ಸಾರಥಿ ತಮಿಳಿನ‌ ಸಿನಿಮಾದಲ್ಲಿ ನಟಿಸಿದ್ದಾರೆ.. ಯಾವ ಸಿನಿಮಾ ಗೊತ್ತಾ..?

ದರ್ಶನ್ ಅವರು ತಮಿಳು‌ ಚಿತ್ರರಂಗದಲ್ಲೂ ಅಭಿನಯಿಸಿ ಬಂದಿದ್ದಾರೆ.. ಇದು ಸತ್ಯ..!

ಇಂದು ಹೇಮಂತ್ ಕುಮಾರ್ ಎಂಬ ಹೆಸರಿನ ಹುಡುಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ.. ಕೋಟಿ ಕೋಟಿ ಹೃದಯಗಳು ದರ್ಶನ್ ಅವರನ್ನ ದೇವರ ಹಾಗೆ ಆರಾಧನೆ ಮಾಡ್ತಿದ್ದಾರೆ ಅಂದ್ರೆ ಅದು ಅತಿಶಯೋಕ್ತಿಯಲ್ಲ.. ಯಾಕಂದ್ರೆ ಕನ್ನಡಿಗರಿಗೆ ಗೊತ್ತು ದರ್ಶನ್ ನಮ್ ಸಿನಿಮಾರಂಗದ ಎಂತಹ ಸಂಪತ್ತು ಅಂತ.

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ಇದು ದಾಸ ದರ್ಶನ್ ಅವರು ಕನ್ನಡ ನಾಡು, ನುಡಿಯ ಬಗ್ಗೆ ಮಾತನಾಡಿದ ಮುತ್ತಿನಂತ ಮಾತುಗಳು

ಅದು ದರ್ಶನ್ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದ ಸಮಯ.. ಕನ್ನಡ ಖ್ಯಾತ ಖಳನಟರೊಬ್ಬರ ಮಗ ಅಂತ ಚಿತ್ರರಂಗ ಪಲ್ಲಕ್ಕಿ ಹಾಸಿ ಅದರ ಮೇಲೆ ದರ್ಶನ್ ಅವರ ಆಹ್ವಾನ ನೀಡಲಿಲ್ಲ.. ಲೈಟ್ ಬಾಯ್ ಆಗಿ ಪಾದಾರ್ಪಣೆ ಮಾಡಿ, ಇಡೀ ಕರುನಾಡ ಚಿತ್ರರಂಗಕ್ಕೆ ಏಕೈಕ ಬಾಕ್ಸ್ ಆಫೀಸ್ ಸುಲ್ತಾನ ಆಗಿ ಮೆರಿತಿರೋದು ಇಂದು ನಮ್ಮ ಕಣ್ಣ ಮುಂದಿದೆ..

ದರ್ಶನ್ನ ಬಾಕ್ಸ್ ಆಫೀಸ್ ಸುಲ್ತಾನ ಅಂತ ಮೊದಲು ಕರೆದವರು ಇವ್ರೇ ನೋಡಿ..!

ಗಾಡ್ ಫಾದರ್ ಇಲ್ಲದೆ ತನ್ನ ಪ್ರತಿಭೆಯನ್ನ ನಂಬಿ ಬಂದ ಈ ನಮ್ಮ ಪ್ರೀತಿಯ ರಾಮು ಅಭಿಮಾಭಿಮಾನಿಗಳ ಪಾಲಿಗೆ ದಾಸ ನಿರ್ಮಾಪಕರ ಪಾಲಿಗೆ ಚಕ್ರವರ್ತಿ.. ಇದಿಷ್ಟು ಸಿನಿಮಾ ರಂಗದಲ್ಲಿ ಬೆಳೆದ ಮೇಲಿನ ಕಥೆ. ಆದರೆ ಇದೇ ಚಿತ್ರರಂಗಕ್ಕೆ ಕಾಲಿಡಲು ದರ್ಶನ್ ಪಟ್ಟ ಹರಸಾಹಸ ಈಗಲೂ ತುಂಬ ಜನರಿಗೆ ನೆನಪಿದೆ, ಹಾಗೆ ತಾನು ಪಟ್ಟ ಕಷ್ಟವನ್ನ ಸ್ವತಃ ದರ್ಶನ್ ಅವರು ಹೇಳಿಕೊಂಡಿದ್ದಾರೆ.

ನಿವೇದಿತಾಗೆ ಬಿಗ್ ಬಾಸ್ ನಲ್ಲಿ ಇದ್ರು ಇದೊಂದೆ ಚಿಂತೆ..!!

ಸಿನಿಮಾದಲ್ಲಿ ಚಾನ್ಸ್ ಗಾಗಿ ಹುಡುಕುತ್ತಿದ್ದಾಗ ತುತ್ತಿನ ಚೀಲವನ್ನು ತುಂಬಿಸಬೇಕಾದ ಅನಿವಾರ್ಯ ಸಮಯದಲ್ಲಿ ದರ್ಶನ್ ಬೇರೆ ಸಿನಿಮಾರಂಗದ ಬಾಗಿಲು ತಟ್ಟಿದ್ರು.. ಹೌದು ತಮಿಳಿನ‌ ಸಿನಿಮಾವೊಂದರಲ್ಲಿ ಅಭಿನಯಿಸಿ ಬಂದಿದ್ರು..

ಹೌದು 2000ನೇ ವಸವಿಯಲ್ಲಿ ತಮಿಳಿನ ನಟರಾದ ವಿಜಯ್ ಕಾಂತ್ ನಾಯಕರಾಗಿ‌ ಕಾಣಿಸಿಕೊಂಡಿದ್ದ ‘ವಲ್ಲರಸು’ ಸಿನಿಮಾದಲ್ಲಿ‌ ದರ್ಶನ್ ಚಿಕ್ಕದೊಂದು ಪಾತ್ರದಲ್ಲಿ‌ ಕಾಣಿಸಿಕೊಂಡಿದ್ರು…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೊದಲ ಹೆಸರು ಏನೆಂದು ಗೊತ್ತಾ..?

ಈ‌ ಚಿತ್ರದಲ್ಲಿ‌ ದರ್ಶನ್ ಅವರದ್ದು ಸಣ್ಣ ಪಾತ್ರ.. ಒಂದೇ ಒಂದು ಡೈಲಾಗ್ ಕೂಡ ಇಲ್ಲ.. ಹುಡುಗರ ಗುಂಪಿನಲ್ಲಿ ಒಬ್ಬ ಸದಸ್ಯನ ಪಾತ್ರ ಮಾಡಿದ್ರು.. ಆದ್ರೆ ಅಲ್ಲಿ ಇದ್ದವರಿಗ್ಯಾರಿಗೂ ಗೊತ್ತಿರಲಿಲ್ಲ ಅನ್ನಿಸುತ್ತೆ, ಮುಂದೊಂದು ದಿನ ಇಡೀ ಕನ್ನಡ ಸಿನಿಮಾರಂಗವನ್ನ ಆಳುವ ಚಕ್ರವರ್ತಿ ಆಗುತ್ತಾನೆ ಅಂತ… ಈ ಸಂದರ್ಭದಲ್ಲಿ ಒಂದು ಮಾತು ನೆನಪಾಗುತ್ತೆ ಉಳಿ ಪೆಟ್ಟು ತಿಂದರೆ ಮಾತ್ರ ಶಿಲೆಯ ನಿರ್ಮಾಣ. ಇದು ದರ್ಶನ್ ಅವರಿಗೆ ಹೇಳಿ‌ ಮಾಡಿಸಿದ ಹಾಗಿದೆ. ಏನಂತೀರಾ..?

ನಿವೇದಿತಾ ಹೊಡೆದ ಡಬಲ್ ಮೀನಿಂಗ್ ಡೈಲಾಗ್ ನೋಡಿ..

 

ದರ್ಶನ್ ಅಭಿನಯಿಸಿರುವ ಚಿತ್ರದ ತುಣುಕು ಇಲ್ಲಿದೆ ನೋಡಿ..

Comments

comments

Similar Articles

Leave a Reply

Top