You are here
Home > ವಾಹಿನಿ ಸುದ್ದಿ > ಹೆಣ್ಣು ಮಕ್ಕಳೆಂದರೆ ಹೊರೆ ಅನ್ನೋರು ಈ ಸ್ಟೋರಿಯನ್ನ ಓದಲೇಬೇಕು.. ಮಗಳಾಗಿ ಹುಟ್ಟಿ ಅಪ್ಪನ ಮರುಹುಟ್ಟಿಗೆ ಕಾರಣವಾದಳು..

ಹೆಣ್ಣು ಮಕ್ಕಳೆಂದರೆ ಹೊರೆ ಅನ್ನೋರು ಈ ಸ್ಟೋರಿಯನ್ನ ಓದಲೇಬೇಕು.. ಮಗಳಾಗಿ ಹುಟ್ಟಿ ಅಪ್ಪನ ಮರುಹುಟ್ಟಿಗೆ ಕಾರಣವಾದಳು..

ಅಪ್ಪಾ ಅಪ್ಪಾ i love you pa.. ಈ ಹಾಡಿಗೆ ಅನ್ವರ್ಥ ಅಂದ್ರೆ ಈ ಹುಡುಗಿ..

ಏನಪ್ಪಾ ಇದು ಕಥೆ ಅಂದ್ರಾ.. 45 ವರ್ಷದ ಇವಳಿಗೆ ಜೀವನಕ್ಕಿಂತ ಜೀವ ಮುಖ್ಯ.. ಆದ್ರೆ ತನ್ನ ಜೀವಕ್ಕಿಂತ 67 ವರ್ಷದ ಅಪ್ಪನ ಜೀವ ಇನ್ನೂ ಮುಖ್ಯ!!

 

ಹೌದು ಅಪ್ಪ ಮಗಳಿಗೆ ಜನ್ಮ ನೀಡೋದು ಜಗತ್ತಿನ ನಗ್ನ ಸತ್ಯ.. ಇಲ್ಲಿ ಅಪ್ಪನಿಗೆ ಮರುಜೀವ ಕೊಟ್ಟೋಳು ಈ ಕಥಾನಾಯಕಿ..

ಸಂಡರ್ಲ್ಯಾಂಡ್ ನ ಜಾನ್, ಕ್ಯಾತಿಯನ್ನು ಮದುವೆಯಾದ ಬಳಿಕ ಪಡೆದದ್ದು 4 ಮಕ್ಕಳನ್ನು..
ಜಾನ್ ಗೆ 52 ವರ್ಷವಾದಾಗ ಅವನಿಗೆ ತಿಳಿದಿದ್ದು ಜನ್ಮತಃ ಅವನಿಗೆ ಕಿಡ್ನಿ ಸಮಸ್ಯೆ ಅಂತ.. ಆತನ ಕಿಡ್ನಿ ತನ್ನ ಕಾರ್ಯವನ್ನು ನಿಲ್ಲಿಸಲು ಆರಂಭಿಸಿತ್ತು. ಆಕಾಶ ತಲೆಮೇಲೆ ಬಿದ್ದಂತಾದ ಕ್ಷಣದಲ್ಲಿ ಕುಟುಂಬದ ಎಲ್ಲರೂ ಬಂದು ಕಿಡ್ನಿ ಕೊಡಲು ಮುಂದಾದರೂ ಅದರಲ್ಲಿ ಅರ್ಹ ಎನಿಸಿದ್ದು ಮಾತ್ರ 30ವರ್ಷದ ಮಗಳು ವೆನಿಸ್ಸಾದು ಮಾತ್ರ..

ವೆನಿಸ್ಸಾ ಕಿಡ್ನಿ ಅರ್ಹ ಎನಿಸಿದ್ದರೂ ಆಕೆಯ ಕಿಡ್ನಿಯಲ್ಲಿ ಮೂರು ಕಲ್ಲುಗಳು ಇದ್ದದ್ದು ಜಾನ್ ಜೀವಕ್ಕೆ ದೈವ ತಂದ ಇನ್ನೊಂದು ಕುತ್ತಾಗಿತ್ತು. ವೆನಿಸ್ಸಾ ಮಾತ್ರ ಓಡುವ ನದಿಗೆ ಎದುರಾಗಿ ಈಜಿ ಅಪ್ಪನ ಜೀವ ಉಳಿಸಲು ಮುಂದಾದಳು. ಮೊದಲನೆಯದಾಗಿ ತನ್ನ ದೇಹದ ತೂಕವನ್ನು ನಿಯಂತ್ರಣಕ್ಕೆ ತಂದಳು.. ಕಿಡ್ನಿಯಲ್ಲಿನ ಕಲ್ಲುಗಳನ್ನು ತೆಗೆಸಲು ಅಗತ್ಯವಾದ ಪರೀಕ್ಷೆಗಳನ್ನು ಮಾಡಿಸಿ ಶಸ್ತ್ರಚಿಕಿತ್ಸೆಗೆ ತನ್ನನ್ನು ತಾನು ಒಡ್ಡಿಕೊಂಡಳು..

ತಂದೆಯ ಜೀವನಕ್ಕೆ ಮತ್ತೊಂದಷ್ಟು ಸಮಯ ಕೊಟ್ಟೇಬಿಟ್ಟಳು ಈ ಛಲಗಾರ್ತಿ!!

ತನ್ನ ಮದುವೆಯ ದಿಬ್ಬಣದಲ್ಲಿ ಅಪ್ಪ ತನ್ನೊಂದಿಗೆ ಮದುವೆಯ ಸ್ಟೇಜ್ ವರೆಗೆ ಬಂದು ಹುಡುಗನ ಕೈ ಹಿಡಿಸಲೆಂಬ ಒಂದೇ ಆಸೆಯಿಂದ ಆಕೆ ಕಿಡ್ನಿ ದಾನ ಮಾಡಿಯೇ ಬಿಟ್ಟಳು..

11 ಮೊಮ್ಮಕ್ಕಳಿದ್ದ ಆ ಹಿರಿಜೀವ ಜಾನ್, ಕೃತಜ್ಞತಾ ಭಾವ ಹೊಮ್ಮಿಸಿ ನಕ್ಕ ಆ ದಿನ.. ತಂದೆಗೆ ಜೀವ ಕೊಟ್ಟ ಧನ್ಯತಾ ಭಾವದಿಂದ ನಕ್ಕಳು ಮಗಳು..

ಈ ನಗು ಇನ್ನಷ್ಟು ಮುಖದಲ್ಲಿ ಕಾಣಲಿ ಎಂದು ಒಂದು ಅಭಿಯಾನವನ್ನೇ ಶುರುಮಾಡಿದ್ದಾಳೆ ವೆನಿಸ್ಸಾ.. ವೆನಿಸ್ಸಾ ಮತ್ತು ಆಕೆಯ ಗಂಡ ಕೆವಿನ್, ಈಗ ಅಂಗಾಂಗ ದಾನದ ಮಹತ್ವ ಸಾರುತ್ತಾ ಎಲ್ಲರಿಗೂ ತನ್ನ ಅಪ್ಪನ ಕಥೆಯಿಂದ ಪ್ರಚೋದಿಸುತ್ತಿದ್ದಾಳೆ ವೆನಿಸ್ಸಾ..

 

Comments

comments

Similar Articles

Leave a Reply

Top