You are here
Home > ವಾಹಿನಿ ಸುದ್ದಿ > ದೇವೇಗೌಡರ ಹಿರಿತನಕ್ಕೆ ಇದೆ ಸಾಕ್ಷಿ. ಜಗ್ಗೇಶ್ ಮಿಮಿಕ್ರಿಗೆ ದೇವೆಗೌಡರ ಉತ್ತರ..

ದೇವೇಗೌಡರ ಹಿರಿತನಕ್ಕೆ ಇದೆ ಸಾಕ್ಷಿ. ಜಗ್ಗೇಶ್ ಮಿಮಿಕ್ರಿಗೆ ದೇವೆಗೌಡರ ಉತ್ತರ..

ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್ ತಮ್ಮ ಕಾಮಿಡಿ ಶೈಲಿಯಿಂದ ಕನ್ನಡ ಜನತೆಯ ಮನಗೆದ್ದಿದ್ದಾರೆ. ಚಿತ್ರರಂಗ ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿರುವ ನಟ ಕಮ್ ರಾಜಕಾರಣಿ ಜಗ್ಗೇಶ್ ವಿರೋಧ ಪಕ್ಷದ ನಾಯಕರ ಕುರಿತು ತನ್ನ ನಟನಾ ಶೈಲಿಯಲ್ಲಿ ಟೀಕಿಸಿದ್ದಾರೆ.

 

ಚಾಲೆಂಜಿಂಗ್ ಸ್ಟಾರ್ ನವೆಂಬರ್ 7 ತಾರೀಖಿನವರೆಗೆ ಕಾಯುವಂತೆ ಹೇಳಿದ್ಯಾಕೆ ಗೊತ್ತಾ..?

 

ಬಿಜೆಪಿ ಪರಿವರ್ತನಾ ಯಾತ್ರೆ ಅಂಗವಾಗಿ ಶುಕ್ರವಾರ ತುರುವೇಕೆರೆಯಲ್ಲಿ ನಡೆದ ಸಮಾವೇಶದಲ್ಲಿ ಜಗ್ಗೇಶ್, ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ಎಂದು ದೇವೇಗೌಡರು ಕೇಳಿಕೊಂಡರೂ ಯಾರು ಮತ ಹಾಕಬೇಡಿ ಎಂದು ದೇವೇಗೌಡರ ಮಾತಿನ  ಶೈಲಿಯಲ್ಲಿ ಮಿಮಿಕ್ರಿ ಮಾಡಿದರು.

ದೇವೇಗೌಡರ ಪ್ರತಿಕ್ರಿಯೆ: ಜಗ್ಗೇಶ್ ಮಿಮಿಕ್ರಿ ಕುರಿತು ಮಾಧ್ಯಮಗಳು ದೇವೇಗೌಡರನ್ನು ಪ್ರಶ್ನಿಸಿದಾಗ ದೇವೇಗೌಡರು ಕೊಟ್ಟ ಉತ್ತರವಿದು. ಜಗ್ಗೇಶ್- ದೊಡ್ಡವರು, ಜೊತೆಗೆ ಚಿತ್ರ ನಟರು, ಅವರ ಬಗ್ಗೆ ನಾನು ಮಾತನಾಡಲು ಸಾಧ್ಯವೇ ಎಂದು ಹೇಳಿದರು.

ತಾವೂ ಒಬ್ಬ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದರು, ದೊಡ್ಡ ದೊಡ್ಡ ರಾಜಕೀಯ ಪಕ್ಷಗಳು ದೇವೇಗೌಡರ ಸಲಹೆ ಕೇಳಿ ಬರುತ್ತಾರೆ. ಅದು ಇವರ ರಾಜಕೀಯದ ನಿಲುವನ್ನ ತೋರುತ್ತದೆ. ಭಾರತೀಯ ರಾಜಕೀಯ ರಂಗದಲ್ಲಿ ತಮ್ಮದೇ ಸ್ಥಾನವನ್ನು ಉಳಿಸಿಕೊಂಡಿರುವ ಮಹಾನ್ ಅಜಾತಶತ್ರು ದೇವೇಗೌಡ ಅವರು.

 

ಕನ್ನಡಿಗರಿಗೆ ಹೆಚ್ಡಿಕೆಯಿಂದ ವಿಶೇಷ ಕೊಡುಗೆ.. ಕನ್ನಡ ರಾಜ್ಯೋತ್ಸವಕ್ಕೆ ಟೈಗರ್ ಕ್ಯಾಬ್ ಲಾಂಚ್..!!?

 

ಇಷ್ಟೆಲ್ಲಾ ಹಿರಿಮೆ ಇದ್ದರು ಪ್ರತಿಪಕ್ಷದಲ್ಲಿ ಕೂತು ಮಾತನಾಡಿದ ಜಗ್ಗೇಶ್ ಅವರ ಬಗ್ಗೆ ಅವರು ಹಿರಿಯರು ನಟರು ಎಂದು ಗೌರವ ನೀಡಿ ಮಾತನಾಡಿದ್ದು ದೇವೇಗೌಡರ ಹಿರಿತನಕ್ಕೆ ಸಾಕ್ಷಿಯಲ್ಲದೆ ಮತ್ತೇನು.

 

Comments

comments

Similar Articles

Leave a Reply

Top