You are here
Home > ವಾಹಿನಿ ಸುದ್ದಿ > ಆಧಾರ್ ಲಿಂಕ್ ಮಾಡುವಂತೆ ದುಂಬಾಲು ಬಿದ್ದ ಕಂಪನಿಗಳಿಗೆ ಸುಪ್ರೀಮ್ ಕೋರ್ಟ್ ನಿಂದ ವಾರ್ನಿಂಗ್

ಆಧಾರ್ ಲಿಂಕ್ ಮಾಡುವಂತೆ ದುಂಬಾಲು ಬಿದ್ದ ಕಂಪನಿಗಳಿಗೆ ಸುಪ್ರೀಮ್ ಕೋರ್ಟ್ ನಿಂದ ವಾರ್ನಿಂಗ್

ಈಗಾಗ್ಲೇ ಎಲ್ಲೆಡೆ ಮೊಬೈಲ್ ಕಂಪನಿ ಸೇರಿದಂತೆ ಬ್ಯಾಂಕ್ ಗಳು ಆಧಾರ್ ನಂಬರ್ ಗಳನ್ನ ತಮ್ಮ ತಮ್ಮ ಮೊಬೈಲ್ ಹಾಗೆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡುವಂತೆ ದುಂಬಾಲು ಬಿದಿದ್ದು ಬೇಗನೆ ಮಾಡದಿದ್ದರೆ ನಿಮ್ಮ ಖಾತೆಗಳು ಸ್ಥಗಿತ ಗೊಳ್ಳಲಿವೆ ಅಂತ ಕಾಲ್ ಹಾಗೆ ಮೆಸೇಜ್ ಗಳು ಬರುತ್ತಿವೆ.. ಇದು ನಿಮಗೂ ಅನುಭವವಾಗಿರ ಬೇಕು..

ಮೊಬೈಲ್ ನಂಬರ್ ಹಾಗೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಸಂಬಂಧ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶವನ್ನೂ‌‌ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.. ಆಧಾರ್ ಕಾರ್ಡ್ ದೇಶದ ನಾಗರೀಕರ ಖಾಸಗಿ ತನಕ್ಕೆ ಲಗ್ಗೆ ಇಡುತ್ತಿದೆ ಅಂತ ಅರ್ಜಿ ಸಲ್ಲಿಸಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಇದೇ ತಿಂಗಳ ಅಂತ್ಯಕ್ಕೆ ಕೈಗೆತ್ತಿಕೊಳ್ಳಲ್ಲಿದ್ದು, ಈ ವಿಚಾರವನ್ನ ಅದಕ್ಕೇ ಬಿಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಅವರು ಹೇಳಿದ್ದಾರೆ.

ಇನ್ನೂ ಸಂದರ್ಭದಲ್ಲಿ ಬ್ಯಾಂಕ್ ಹಾಗೆ ಮೊಬೈಲ್ ಕಂಪನಿಗಳು ಗ್ರಾಹಕರಲ್ಲಿ ಆಧಾರ್ ಸಂಖ್ಯೆ ಜೋಡಿಸುವ ಬಗ್ಗೆ ಡಿಸಂಬರ್ 31 ಕೊನೆ ದಿನ ಅಂತ ಮೂಡಿಸುತ್ತಿರುವ ಗೊಂದಲ ಹಾಗೆ ಒತ್ತಯಕ್ಕೆ ಆಕ್ರೋಶ ವ್ಯಕ್ತ ಪಡೆಸಿದೆ.. ಇದೇ ವಿಚಾರವ ಸಂಬಂಧಿಸಿದಂತೆ ಸಂದೇಶಗಳನ್ನು ಕಳಿಸಿ ಗ್ರಾಹಕರಿಗೆ ಧಮ್ಕಿ ಹಾಕುತ್ತಿರುವುದನ್ನು ಕೇಂದ್ರ ನಿರಾಕರಿಸಿದೆ. ಈ ಸಂಸ್ಥೆಗಳು ತಕ್ಷಣ ಗ್ರಾಹಕರಿಗೆ ಇಂಥ ಸಂದೇಶ ರವಾನಿಸುವುದನ್ನು ನಿಲ್ಲಿಸಬೇಕು ಎಂದು ನ್ಯಾ. ಸಿಕ್ರಿ ಅವರು ಆದೇಶಿಸಿದರು

ಇನ್ನೂ ಜನರಲ್ಲಿ ಆಧಾರ್ ಲಿಂಕ್ ಮಾಡಲು ಕೊನೆ ದಿನದ ಬಗ್ಗೆ ಇದ್ದ ಗೊಂದಲದ ಬಗ್ಗೆ ಇ-ಕೆವೈಸಿ ಅಡಿಯಲ್ಲಿ ಫೆಬ್ರವರಿ 6ರೊಳಗೆ ಎಲ್ಲ ಮೊಬೈಲ್ ಬಳಕೆದಾರರು ಆಧಾರ್ ಸಂಖ್ಯೆಯ ಜೊತೆ ಲಿಂಕ್ ಮಾಡಬೇಕೆಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ

 

Comments

comments

Similar Articles

Leave a Reply

Top