You are here
Home > ವಾಹಿನಿ ಸುದ್ದಿ > ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಮೋದಿ ಆಡಿದ ಮುತ್ತಿನಂಥ ಮಾತುಗಳಿವು…

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಮೋದಿ ಆಡಿದ ಮುತ್ತಿನಂಥ ಮಾತುಗಳಿವು…

ಇಂದು ಸನ್ಮಾನ್ಯ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ರು…. ಉಜಿರೆಯ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಮೋದಿ ಎಂದಿನಂತೆ ತಮ್ಮ ಭಾಷಣದಿಂದ ನೆರೆದಿದ್ದ ಅಭಿಮಾನಿಗಳನ್ನು ಮೋಡಿ ಮಾಡಿದ್ರು….

 

 

ಇನ್ನೂ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆ ಅವರ ಕಾರ್ಯವನ್ನು ಶ್ಲಾಘಿಸಿದರು… ನಮೋ ಮಂಜುನಾಥ ಎಂದ ಮೋದಿ ಅವರು ಶ್ರೀಮಂಜುನಾಥನ ದರ್ಶನ ಪಡೆದದ್ದು ನನ್ನ ಸೌಭಾಗ್ಯವೆಂದರು….

 

 

ಇನ್ನೂ ವೀರೇಂದ್ರ ಹೆಗ್ಗಡೆಯವರನ್ನ ಸನ್ಮಾನ ಮಾಡಿದ ನಂತರ ಮಾತಾನಾಡಿದ ಮೋದಿ ಜೀ ಚಿಕ್ಕವಯಸ್ಸಿನಲ್ಲೇ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡ ಇಂತಹ ಮಹಾನ್ ವ್ಯಕ್ತಿಯನ್ನು ಸನ್ಮಾನಿಸುವ ಹಕ್ಕು ನನಗಿದ್ಯ ಅಂತ ಪ್ರಶ್ನೆ ಹಾಕಿದ್ರು….

 

 

ನಂತರ ಹಾಗೆ ಮಾತು ಮುಂದುವರೆಸಿದ ಮೋದಿ ಅವರು 125 ಕೋಟಿ ಜನ ನನ್ನ ಪ್ರಧಾನಿಯಾಗಿ ಆಯ್ಕೆ ಮಾಡಿ ಈ ಪದವಿ ನೀಡಿದ್ದೀರಿ…. ನಿಮ್ಮೆಲ್ಲರ ಸೇವಕನಾಗಿ ನಾನು ವೀರೇಂದ್ರ ಹೆಗ್ಗಡೆ ಅವರನ್ನ ಸನ್ಮಾನಿಸಿರೋದಾಗಿ ಹೇಳಿದ್ರು….

 

 

ವೀರೇಂದ್ರ ಹೆಗ್ಗಡೆ ಅವರ ಆಲೋಚನೆ ಹಾಗೆ ಯೋಜನೆಗಳಿಂದ ಈ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ… ಇನ್ನೂ ಹೆಗ್ಗಡೆ ಅವರು ನವಭಾರತ ನಿರ್ಮಾಣ ಪರಿಕಲ್ಪನೆಗೆ ಸಾಥ್ ನೀಡಿದ್ದಾರೆ ಎಂದ್ರು…

 

Comments

comments

Similar Articles

Leave a Reply

Top