ಶಂಖ ಊದುವುದರಿಂದ ಈ ಎಲ್ಲ ಖಾಯಿಲೆಗಳು ಮಂಗಮಾಯ

ಮನೆಗಳಲ್ಲಿ ವಿಶೇಷ ಪೂಜೆ, ಶುಭ ಸಮಾರಂಭ ಸಮಯಲ್ಲಿ  ಶಂಖ ಊದುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಎಷ್ಟೋ ಮಂದಿಗೆ ಶಂಖವನ್ನು ಮನೆಯೊಳಗೆ ಇಟ್ಟುಕೊಳ್ಳಬೇಕಾ, ಬೇಡವಾ ಎನ್ನುವ ಗೊಂದಲ.  ಆತಂಕ ಪಡಬೇಡಿ, ಶಂಖದಿಂದ ಏನೆಲ್ಲಾ ಉಪಯೋಗಗಳಿವೆ ಎಂಬುವುದನ್ನು ತಿಳಿದುಕೊಂಡಿರೆ ನೀವಾಗಿಯೇ ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಿರಾ..

  1. ಸಾಮಾನ್ಯವಾಗಿ ಎರಡು ಬಗೆಯ ಶಂಖಗಳಿವೆ. ಒಂದು ಬಲಮುರಿ ಮತ್ತೊಂದು ಎಡಮುರಿ. ಬಲಮುರಿ ಶಂಖ ಪೂಜಾರ್ಹವಾಗಿದ್ದರೆ ಮತ್ತೊಂದು ಶಂಖವನ್ನು ಊದಲು ಬಳಸುತ್ತಾರೆ. ಈ ಊದುವ ಶಂಖದಿಂದ ಪ್ರತಿನಿತ್ಯ ಬೆಳಿಗ್ಗೆ ಎದ್ದು ಊದುವುದರಿಂದ ಹೃದಯಕ್ಕೆ ಹೆಚ್ಚು ಶಕ್ತಿ ಬರುತ್ತದೆ.
  2. ಶಂಖ ಊದುವುದರಿಂದ ಉಸಿರಾಟದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗೆ ಕಿವುಡು ಕಡಿಮೆಯಾಗುತ್ತೆ.
  3. ಹೊಟ್ಟೆ ನೋವು,ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಶಂಖಕ್ಕೆ ನೀರು ಹಾಕಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
  4. ದಿನವಿಡೀ ಕೆಲಸದ ಒತ್ತಡದಿಂದ ಬಳಲುತ್ತಿರುವವರು ಶಂಖ ಊದುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ಸದಾ ಲವಲವಿಕೆಯಿಂದ ಇರುವಿರಿ.
  5.  ಶಂಖ ಮನೆಯಲ್ಲಿ ಊದುವುದರಿಂದ ಮನೆಯೊಳಗಿನ ನೆಗೆಟಿವ್ ಎನರ್ಜಿ ದೂರ ಮಾಡಿ, ಪಾಸಿಟಿವ್ ಎನರ್ಜೀ ಮನೆಯೊಳಗೆ ಪ್ರವೇಶಿಸುತ್ತದೆ. ಹಾಗಾಗಿ ಪ್ರತಿದಿನ ಮನೆಯಲ್ಲಿ ಶಂಖ ಊದಬೇಕು.
  6. ಶಂಖದ ಧ್ವನಿಯಿಂದ ಸೊಳ್ಳೆಗಳು ಮನೆಯೊಳಗೆ ಸುಳಿಯುವುದಿಲ್ಲ ಜೊತೆಗೆ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.
  7. ವಾಸ್ತು ಪ್ರಕಾರ ಶಂಖವನ್ನು ಮನೆಯೊಳಗಿಟ್ಟು ಪೂಜಿಸಬೇಕು. ದಿನಕ್ಕೆ ಎರಡು ಬಾರಿಯಂತೆ ಮುಂಜಾನೆ ಹಾಗೂ ಸಂಜೆ  ವೇಳೆ  ಶಂಖವನ್ನು ಊದಿದರೆ ಒಳ್ಳೆಯದು. ಇದರಿಂದ ಮನೆಯಲ್ಲಿರುವ ವಾಸ್ತುದೋಷ ಬಗೆಹರಿಯುತ್ತದೆ.

Comments

comments

Similar Articles

Top