ಎಲ್ಲರ ಮನೆ ದೋಸೇನೂ….

ಎಲ್ಲರ ಮನೆ ದೋಸೇನೂ ತೂತೆ..!

ಬಹುಶಃ ಈ ವಾಕ್ಯವನ್ನು ಕೇಳದವರೇ ಇಲ್ಲ. ಯಾಕೆಂದರೆ ಈ ವಾಕ್ಯವು ಲೋಕಾಭಿರಾಮವಾಗಿ ಕೇಳಿಯೇ ಇರುತ್ತೀರಿ. ಹಿರಿಯರು ತಮ್ಮ ಜೀವನದ ಏರುಪೇರನ್ನು ಸೂಚಿಸಲು ಕೆಲವು ವಾಡಿಕೆ ಮಾತುಗಳನ್ನು ಬಳಸುತಿದ್ದರು. ಈ ವಾಡಿಕೆ ಮಾತು ಅಕ್ಷರಶಃ ನಿಜ.

ದೋಸೆ ಎಂದಾಕ್ಷಣ ಬಾಯಲ್ಲಿ ನೀರೂರಿ ತಿನ್ನುವ ಆಸೆಯಾಯಿತೇ?..

ಆದ್ರೆ ದೋಸೆ ತೂತೇಕೆ ಎಂದು ಎಂದಾದರೂ ಯೋಚಿಸಿದ್ದೀರಾ?

ಇದಕ್ಕೆ ವೈಜ್ಞಾನಿಕ ಕಾರಣ ಇಷ್ಟೇ, ದೋಸೆ ಹಿಟ್ಟನ್ನು ರುಬ್ಬಿ ಹುದುಗಲು ಇಟ್ಟಾಗ (ಹುಳಿಬರಲು) ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗುತ್ತದೆ.

ಈ ಅನಿಲ ಪೂರ್ತಿಯಾಗಿ ಹಿಟ್ಟಿನಿಂದ ಹೊರಬಂದಿರುವುದ್ದಿಲ್ಲ. ಅದು ಚಿಕ್ಕ ಚಿಕ್ಕ ಗುಳ್ಳೆಗಳಾಗಿ ಹಿಟ್ಟಿನಲ್ಲಿರುತ್ತದೆ. ಹಿಟ್ಟನ್ನು ಕಾವಲಿಯ ಮೇಲೆ ಹಾಕಿದಾಗ ಗುಳ್ಳೆಗಳು ಹಿಗ್ಗಿ ಹೊರಬಂದಾಗ ದೋಸೆ ತೂತು ಬೀಳುತ್ತದೆ.

ಥ್ಯಾಂಕ್ಸ್ ಫಾರ್ ಸೈನ್ಸ್ ಎನ್ನುತ್ತಾ ಗರಿಗರಿಯಾದ ದೋಸೆ ತಿನ್ನುವ ಪ್ಲಾನ್ ಹಾಕೋಣ..

 

ಕೇವಲ 7 ದಿನಗಳಲ್ಲಿ ಸೌತೆಕಾಯಿಯು ಸ್ಥೂಲಕಾಯದ ಮೇಲೆ ಬೀರುವ ಪರಿಣಾಮಗಳು..

Comments

comments

Similar Articles

Top