You are here
Home > ವಾಹಿನಿ ಸುದ್ದಿ > ಕೆಜಿಎಫ್ ಸಿನಿಮಾವಾದ ಬಳಿಕ ಯಶ್ ಈ ಪಾತ್ರದಲ್ಲಿ ಕಾಣಿಸಿಕೊಳ್ತಾರೆ

ಕೆಜಿಎಫ್ ಸಿನಿಮಾವಾದ ಬಳಿಕ ಯಶ್ ಈ ಪಾತ್ರದಲ್ಲಿ ಕಾಣಿಸಿಕೊಳ್ತಾರೆ

ಸ್ಯಾಂಡಲ್ ವುಡ್ ನ ಮಾಸ್ಟರ್ ಫೀಸ್ , ಅಭಿಮಾನಿಗಳ ಪಾಲಿನ ಅಣ್ತಮ್ಮ ರಾಕಿಂಗ್ ಸ್ಟಾರ್ ಯಶ್ ಈಗ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳ್ತಿರೋ  ಕೆ ಜಿ ಫ್ ಚಿತ್ರದಲ್ಲಿ ಸ್ಯಾನೇ ಬ್ಯುಸಿ ಆಗಿದ್ದಾರೆ ..    ಕೆ ಜಿ ಫ್ ಚಿತ್ರೀಕರಣ  ಕೋಲಾರದ ಚಿನ್ನದ ಗಣಿಯಲ್ಲಿ ಭರ್ಜರಿಯಾಗಿ  ಸಾಗ್ತಾ ಇದೆ..

ಇದರ ನಡುವೆ  ಯಶ್ ರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಬಾರಿ ಚರ್ಚೆ ನಡೀತಾ ಇದೆ. ಯಶ್ ಮುಂದಿನ ಸಿನಿಮಾ ಯಾವುದು.? ನಿರ್ದೇಶಕರು ಯಾರು .? ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ  ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಎಲ್ಲಾ ಕುತೂಹಲಕ್ಕೆ  ನಾವ್ ಬ್ರೇಕ್ ಹಾಕ್ತಾ ಇದೀವಿ.. ಯಶ್ ರವರ ಮುಂದಿನ ಚಿತ್ರವನ್ನ ಭಜರಂಗಿ ಹರ್ಷ  ನಿರ್ದೇಶನ ಮಾಡಲಿದ್ದಾರೆ .. ಚಿತ್ರಕ್ಕೆ ” ರಾಣಾ ” ಅನ್ನೋ ಟೈಟಲ್ ಕೂಡ ಫೈನಲ್ ಆಗಿದೆ.

” ರಾಣಾ” ಚಿತ್ರದಲ್ಲಿ ಯಶ್ ಪಾತ್ರ ಏನು.?

ಗೂಗ್ಲಿ ಚಿತ್ರದ ಹಾಡೊಂದರಲ್ಲಿ ಪೊಲೀಸ್ ವೇಷ ಹಾಕಿದ್ದು ಬಿಟ್ರೆ, ಇದೆ ಮೊದಲ ಬಾರಿಗೆ  ಪೂರ್ಣ ಪ್ರಮಾಣದ  ಖಡಕ್ ಪೊಲೀಸ್ ಅಧಿಕಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಯಶ್ ಅಭಿನಯಿಸಿದ ಎಲ್ಲಾ ರೀತಿಯ ಪಾತ್ರಗಳನ್ನು ನೋಡಿ ಖುಷಿ ಪಟ್ಟಿದ್ದ ಅಭಿಮಾನಿಗಳು ಈಗ ತನ್ನ ನೆಚ್ಚಿನ ಹೀರೊನನ್ನು ಖಡಕ್  ಪೊಲೀಸ್ ಅಧಿಕಾರಿಯಾಗಿ ನೋಡಿ ಕಣ್ಣುತುಂಬಿಕೊಳ್ಳುವ ಸೌಭಾಗ್ಯ ಒದಗಿದೆ.

” ರಾಣಾ ” ಚಿತ್ರಿಕರಣ ಯಾವಾಗ..??

ಸದ್ಯಕ್ಕೆ ಕೆ ಜಿ ಫ್  ಚಿತ್ರದಲ್ಲಿ ಬ್ಯುಸಿ ಆಗಿರುವ ಯಶ್ .. ಕೆ ಜಿ ಫ್ ಚಿತ್ರೀಕರಣ  ಮುಗಿದ ಕೂಡಲೇ ” ರಾಣಾ ” ಸೆಟ್ ನಲ್ಲಿ ಕಾಣಿಸಕೊಳ್ಳಲಿದ್ದಾರೆ..  ಕೆ ಜಿ ಫ್ ಚಿತ್ರದಲ್ಲಿ  ಅಚ್ಯುತ್ ಕುಮಾರ್, ರಮ್ಯ ಕೃಷ್ಣ ಮತ್ತು ವಶಿಷ್ಠ ಎನ್ ಸಿಂಹ ಸೇರಿದಂತೆ  ಬಹುದೊಡ್ಡ ತಾರಾ ಬಳಗವಿದೆ.. ಯಶ್ ಗೆ ನಾಯಕಿಯಾಗಿ ಶ್ರೀನಿಧಿ ರಮೇಶ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಹೊಂಬಾಳೆ  ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗ್ತಿರೋ ಚಿತ್ರಕ್ಕೆ ವಿಜಯ್ ಕಿರಂಗದೂರ್ ಹಣ ಹೂಡಿದ್ದಾರೆ. ಕೆ ಜಿ ಫ್ ಚಿತ್ರವು 5 ಭಾಷೆಗಳಲ್ಲಿ ತೆರೆ ಕಾಣ್ತ ಇರೋದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆಯಾಗಲಿದೆ.

ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಯಶ್, ರಾಮಾಚಾರಿ ಚಿತ್ರಕ್ಕೆ ಫಿಲಂಫೇರ್ ಅವಾರ್ಡ್ ಪಡೆದಿದ್ದಾರೆ.  ” ರಾಣಾ”  ಚಿತ್ರವು ಭರ್ಜರಿ ಯಶಸ್ಸು ಗಳಿಸಲಿ , ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಲಿ ಎಂದು  ವಾಹಿನಿ ಟಿವಿ ತಂಡವು ಹಾರೈಸುತ್ತದೆ.

ಇದನ್ನೂ ನೋಡಿ: KGF ಬ್ರೇಕಿಂಗ್ ನ್ಯೂಸ್

Comments

comments

Similar Articles

One thought on “ಕೆಜಿಎಫ್ ಸಿನಿಮಾವಾದ ಬಳಿಕ ಯಶ್ ಈ ಪಾತ್ರದಲ್ಲಿ ಕಾಣಿಸಿಕೊಳ್ತಾರೆ

Leave a Reply

Top