You are here
Home > ವಾಹಿನಿ ಸುದ್ದಿ > ಅಗ್ನಿಶಾಮಕ ಸಿಲಿಂಡರ್ ಬ್ಲಾಸ್ಟ್ ಆಗಿ ರಾಕೆಟ್ ನಂತೆ ಹಾರಿತು!!

ಅಗ್ನಿಶಾಮಕ ಸಿಲಿಂಡರ್ ಬ್ಲಾಸ್ಟ್ ಆಗಿ ರಾಕೆಟ್ ನಂತೆ ಹಾರಿತು!!

ಮಧ್ಯ ಪ್ರದೇಶದ ಭೋಪಾಲ್ ನಲ್ಲಿ, ಪ್ರಸಿದ್ಧ ಗಡಿಯಾರದ ಮಳಿಗೆಯೊಂದರಲ್ಲಿ ಕಾರ್ಬನ್ ಡೈ ಆಕ್ಸೈಡ್ ಅಗ್ನಿಶಾಮಕ ಸಿಲಿಂಡರ್ ನ ವಾಲ್ವ್ ರಿಪೇರಿ ಮಾಡುವಾಗ ಅನಾಹುತ ಸಂಭವಿಸಿದ ಘಟನೆ ಕಳೆದ ಸೋಮವಾರ ಮಧ್ಯಾನ್ಹ ನಡೆದಿದೆ. ಇದರ CCTV ಕ್ಯಾಮೆರಾ ಫೂಟೇಜ್ ಈಗ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದರ ಡೀಟೇಲ್ಸ್ ಇಲ್ಲಿದೆ ನೋಡಿ..

ಈ ಸಿಲಿಂಡರ್ 30KG ತೂಕದ್ದಾಗಿದ್ದು, ಇದರ ವಾಲ್ವ್ ಕೆಲಸ ಮಾಡುತ್ತಿದ್ದಿಲ್ಲ. ಅದಕ್ಕಾಗಿ ರಿಪೇರಿ ಮಾಡಲು ಬಂದಿದ್ದ ಇಬ್ಬರು ಯುವಕರು ಇದನ್ನು ಪರೀಕ್ಷಿಸುತ್ತಿದ್ದಾಗ, ಸಿಲಿಂಡರ್ ಸಿಡಿದಿದೆ. ಅದೃಷ್ಟವಶಾತ್ ಈ ಯುವಕರು ಪ್ರಾಣಾಪಾಯದಿಂದ ಬಚಾವಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಇವರು ಮಾಡುವ ಕೆಲಸವನ್ನೇ ನೋಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸಹ ಅಲ್ಲೇ ಇದ್ದು ಅವರಿಗೂ ಸಣ್ಣಪುಟ್ಟ ಗಾಯಗಳಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ ನ ಕಾಲಿನ ಬಳಿಯೇ ರಾಕೆಟ್ ಮಾದರಿ ತೂರಿಹೋದ ಸಿಲಿಂಡರ್ ಎದುರಿಗೆ ಸಿಕ್ಕ ಗಾಜಿನ ಗೋಡೆಗೆ ಡಿಕ್ಕಿ ಹೊಡೆದು ಬ್ಲಾಸ್ಟ್ ಆಗಿದೆ. ಸೆಕ್ಯೂರಿಟಿ ಗಾರ್ಡ್ ನ ಕಾಲಿಗೆ ಪೆಟ್ಟಾಗಿದೆ. ಮಳಿಗೆಯ ಒಳಗೆ ಇದ್ದ ಸೇಲ್ಸ್ ಗರ್ಲ್ಸ್ ಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದೆಲ್ಲ ಕ್ಷಣಾರ್ಧದಲ್ಲಿ ಆಗಿದ್ದು ಅಲ್ಲಿ ಏನಾಯಿತು ಎಂದು ತಿಳಿಯುವ ಮುನ್ನವೇ ಎಲ್ಲ ನಡೆದು ಹೋಗಿದೆ.

ಇದರ CCTV ಕ್ಯಾಮೆರಾ ಫೂಟೇಜ್ ಇಲ್ಲಿದೆ ನೋಡಿ:

ಇದರ CCTV ಕ್ಯಾಮೆರಾ ಫೂಟೇಜ್ ನಿಂದ ಇದರ ವಿವರ ತಿಳಿಯುವಂತಾಯಿತು ಎಂದಿದ್ದಾರೆ ಪ್ರತ್ಯಕ್ಷ ಸಾಕ್ಷಿಗಳು. ಆದರೆ ಸಿಲಿಂಡರ್ ರಾಕೆಟ್ ನಂತೆ ಮೇಲಕ್ಕೆ ಹಾರದೆ ಅಕ್ಕ ಪಕ್ಕ ಹಾರಿದ್ದೇ ಈ ಎಲ್ಲಾ ಅವಘಡಕ್ಕೆ ಕಾರಣವಾಗಿದೆ.

Comments

comments

Similar Articles

Leave a Reply

Top