ಮಾಸ್ಟರ್ ಪೀಸ್ ಯಶ್ ಅಭಿನಯದ ಕೆಜಿಎಫ್ ಅಡ್ಡದಿಂದ ಬಂದ ಬಿಗ್ ಬ್ರೇಕಿಂಗ್ ನ್ಯೂಸ್ ಇದು..!!

ಕೇಳ್ರೋಪ್ಪೊ ಕೇಳಿ..!! ಕೆಜಿಎಫ್ ಸೀಕ್ವೆಲ್‍ ಬರಲಿದೆಯಂತೆ..!!

ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಅತಿ ದೊಡ್ಡ  ಬಜೆಟ್ ಚಿತ್ರ ಎಂದು ಗುರುತಿಸಿಕೊಳ್ಳುತ್ತಿರುವ ಕೆಜಿಎಫ್ ಚಿತ್ರ ಬಿಡುಗಡೆ ಮೊದಲೇ ಸಾಕಷ್ಟು ಸುದ್ದಿಗಳು ಹಾರಿದಾಡುತ್ತಿದೆ. ಮೇಕಿಂಗ್ ನಿಂದ ಟ್ರೆಂಡಿಂಗ್ ನಲ್ಲಿರುವ ಕೆಜಿಎಫ್ ಚಿತ್ರ ಇದೀಗ ಮತ್ತೊಂದು ಸುದ್ದಿ ಹೊರಹಾಕಿದೆ. ಅದೇ ಕೆಜಿಎಫ್ ಭಾಗ-2 ಬರಲಿದೆಯಂತೆ.

ಹೌದು, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲು ನಿರ್ದೇಶನದಲ್ಲಿ ಹೊರಬರುತ್ತಿರುವ ಕೆಜಿಎಫ್ ಚಿತ್ರ ರಾಕಿಂಗ್ ಸ್ಟಾರ್ ಯಶ್ ಕೆರಿಯರ್ ನಲ್ಲಿ ಅತಿ ದೊಡ್ಡ ಸಿನಿಮಾ ಎನ್ನಬಹುದು. ನೈಜ ಘಟನೆ ಆಧಾರಿತವಾದ ಕೆಜಿಎಫ್ ಮೊದಲ ಭಾಗ ಇನ್ನೂ ತೆರೆಕಂಡಿಲ್ಲ. ಹೀಗಿರುವಾಗಲ್ಲೇ ಕೆಜಿಎಫ್ ಭಾಗ-2 ಬರಲಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡೋಕೆ ಶುರುವಾಗಿದೆ.

ಕೆಜಿಎಫ್ 1970 ಕಾಲದ ವ್ಯಕ್ತಿಯೊಬ್ಬನ ಸುತ್ತ ನಡೆಯುವ ಕಥೆ. ಈ ಚಿತ್ರಕ್ಕಾಗಿ ಅಂದಿನ ಕಾಲದ ದೃಶ್ಯಗಳನ್ನ ಬೆಳ್ಳಿತೆರೆ ಮೇಲೆ ರೀ-ಕ್ರಿಯೇಟ್ ಮಾಡಲಾಗುತ್ತಿದೆ.  ಹೀಗಾಗಿ ಎಲ್ಲವನ್ನು’ ಒಂದು ಚಿತ್ರದಲ್ಲಿ ತೋರಿಸಲು ಕೊಂಚ ಕಷ್ಟವಾಗುವುದರಿಂದ ಭಾಗ-2 ರಲ್ಲೂ ಮುಂದುವರೆಸಲು ನಿರ್ಧಾರಿಸಿದ್ದಾರೆ ಅಂತೆ.

ಈ ಹಿಂದೆ ಬಾಹುಬಲಿ ಹಾಗೂ ರಕ್ತಚರಿತ್ರೆ ಚಿತ್ರಗಳು ಕೂಡ ರಿಲೀಸ್ ಗೂ ಮುನ್ನವೇ ಸೀಕ್ವೆಲ್ ಬರಲಿದೆ ಎಂದಿದ್ರು, ಈ ಮೂಲಕ ಹೊಸ ಟ್ರೆಂಡ್ ಅನ್ನೇ ಹುಟ್ಟಿಹಾಕಿದರು. ಇದೀಗ ಕನ್ನಡದ ಕೆಜಿಎಫ್ ಚಿತ್ರವೂ ಇದೇ ಹಾದಿಯಲ್ಲಿ ಸಾಗುತ್ತಿದೆ. ಸ್ಯಾಂಡಲ್ವುಡ್ ನಲ್ಲಿ ಮಾತ್ರವಲ್ಲದೆ ಹಿಂದಿಯಲೂ ಕೂಡ ರಾಕಿಂಗ್ ಸ್ಟಾರ್ ಗೆ ಅಭಿಮಾನಿಗಳ ದಂಡೆ ಇದೆ. ಹೀಗಾಗಿ ಹಿಂದಿ, ಭೋಜಪುರಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಡಬ್ ಆಗಲಿದೆ. ಅಲ್ಲದೆ ಕೆಜಿಎಫ್ ಚಿತ್ರದ ಸ್ಯಾಟಲೈಟ್  ರೈಟ್ಸ್ ಗಾಗಿ ಸಾಕಷ್ಟು ಪೈಪೋಟಿ ಶುರುವಾಗಿದೆ.

‘ಮಾಸ್ಟರ್ ಪೀಸ್’ ಚಿತ್ರವನ್ನ ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರು ‘ಕೆಜಿಎಫ್’ ಚಿತ್ರಕ್ಕೂ ನಿರ್ಮಾಪಕರಾಗಿದ್ದಾರೆ. ಇನ್ನೂ ಭುವನ್ ಗೌಡ ಛಾಯಗ್ರಹಣ ಮಾಡಲಿದ್ದಾರೆ.

KGF ನಂತರ ಯಶ್ ಮುಂದಿನ ಚಿತ್ರ ಇದು

Comments

comments

Similar Articles

Top