You are here
Home > ಸಿನಿಮಾ > ಎವರ್ ಗ್ರೀನ್ ಬ್ಯೂಟಿ ಶ್ರೀದೇವಿ ಕನ್ನಡದಲ್ಲಿ ನಟಿಸದಿರಲು ಇದೇ ಕಾರಣವಂತೆ!

ಎವರ್ ಗ್ರೀನ್ ಬ್ಯೂಟಿ ಶ್ರೀದೇವಿ ಕನ್ನಡದಲ್ಲಿ ನಟಿಸದಿರಲು ಇದೇ ಕಾರಣವಂತೆ!

ಎಲ್ಲಾ ದಕ್ಷಿಣ ಚಿತ್ರರಂಗದಲ್ಲಿ ನಟಿಸಿದ ಬಾಲಿವುಡ್ ಬೆಡಗಿ ಶ್ರೀದೇವಿ ಕನ್ನಡದಲ್ಲಿ ನಟಿಸಲೇ ಇಲ್ಲ!!

ಹವಾ ಹವಾಯಿ.. ಅಂತ ಬಾಲಿವುಡ್ ನಲ್ಲಿ ಟ್ರೆಂಡ್ ಸೆಟ್ ಮಾಡಿ ಚಿತ್ರ ರಸಿಕರ ಮನದಲ್ಲಿ ತಲ್ಲಣ ಉಂಟುಮಾಡಿದ್ದ ಶ್ರೀದೇವಿ ಬಾಲಿವುಡ್ ಅಲ್ಲದೆ ಎಲ್ಲಾ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ!!..

  

ಆದರೆ ವಿಶೇಷವೆಂದರೆ ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ಇವರು ಕೇವಲ ಅತೀ ಕಡಿಮೆ ಚಿತ್ರಗಳಲ್ಲಿ ನಟಿಸಿರುವುದು!ಬಾಲನಟಿಯಾಗಿ ಕನ್ನಡದಲ್ಲಿ ನಟಿಸಿರುವ ಶ್ರೀದೇವಿ ಆನಂತರ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಕನ್ನಡದಲ್ಲಿ ನೀವ್ಯಾಕೆ ನಟಿಸಲಿಲ್ಲ ಅಂದಿದ್ದಕ್ಕೆ ಶ್ರೀದೇವಿ ಹೇಳಿದ್ದೇನು ಗೊತ್ತಾ…?

ಶ್ರೀದೇವಿಯವರಿಗೆ ಕನ್ನಡ ಭಾಷೆ ಇತರ ದಕ್ಷಿಣ ಭಾರತದ ಭಾಷೆಗಳಿಗಿಂತ ಕಷ್ಟವಂತೆ!!

ಶ್ರೀದೇವಿ ಮತ್ತು ಬೆಂಗಳೂರು..

ಆದರೂ ಬೆಂಗಳೂರಿನ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದಾರೆ ಶ್ರೀದೇವಿ. ಅವರೇ ಹೇಳುವ ಪ್ರಕಾರ, ಬೆಂಗಳೂರು ಅವರ ನೆನಪಿನಲ್ಲಿ ಉಳಿಯುವ ಒಂದು ಮುಖ್ಯ ವಿಷಯ. ಅವರ ಹಲವಾರು ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆಯಂತೆ. ಅದರಲ್ಲಿ ಮುಖ್ಯವಾಗಿ ಇತ್ತೀಚಿನ ಬಾಲು ಮಹೇಂದ್ರ ಅವರ “ಸದ್ಮಾ” ಮತ್ತು ಅದರ ತಮಿಳು ಅವತರಣಿಕೆ “ಮೂನ್ದ್ರಂ ಪಿರೈ” ಚಿತ್ರಕ್ಕಾಗಿ 1 ತಿಂಗಳು ಬೆಂಗಳೂರಿನಲ್ಲಿ ತಂಗಿದ್ದರು. ಅವರು ಇಲ್ಲಿದ್ದಾಗ ಅವರ ಹಲವು ಅಭಿಮಾನಿಗಳು ಅವರನ್ನು ಭೇಟಿಯಾಗಿದ್ದರಂತೆ. ಅವರ ಕೊನೆಯ ಹಿಂದಿ ಸಿನೆಮಾ “ಮಾಮ್”ಗೆ ಅವರ ಅತ್ಯತ್ತಮ ಪ್ರತಿಕ್ರಿಯೆ ಪಡೆದಿದ್ದಾರೆ. ಇದರಲ್ಲಿ ಅಕ್ಷಯ್ ಖನ್ನ ಮತ್ತು ನವಾಜುದ್ದಿನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತಮಿಳಿನಲ್ಲಿ ಅವರ ಕೊನೆಯ ಸಿನೆಮಾ “ಪುಲಿ” ಆಗಿತ್ತು.

Comments

comments

Similar Articles

Leave a Reply

Top