You are here
Home > ಲೈಫ್‍ಸ್ಟೈಲ್ > ಈ ದೇವಸ್ಥಾನದಲ್ಲಿ ವರ್ಷವಾದ್ರೂ ದೀಪ ಆರೋದಿಲ್ಲ.. ಮುಡಿದ ಹೂ ಬಾಡೋದಿಲ್ಲ..!!

ಈ ದೇವಸ್ಥಾನದಲ್ಲಿ ವರ್ಷವಾದ್ರೂ ದೀಪ ಆರೋದಿಲ್ಲ.. ಮುಡಿದ ಹೂ ಬಾಡೋದಿಲ್ಲ..!!

ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುವ ಪುರಾಣ ಪ್ರಸಿದ್ಧ ಹಾಸನದ ಹಾಸನಾಂಬೆ ತಾಯಿಯ ದೇವಾಲಯ ಭಕ್ತಾದಿಗಳಿಗಾಗಿ ಸಿದ್ದವಾಗಿದೆ.. ಎಂದಿನಂತೆ ಈ ವರ್ಷವೂ ಸಹ ತಾಯಿಯ ದರ್ಶನಕ್ಕೆ ಶುಭ ಘಗಳಿಕೆ ಕೂಡಿ ಬಂದಿದ್ದು ನಿನ್ನೆ ದೇವಸ್ಥಾನದ ಬಾಗಿಲನ್ನ ತೆರೆಯಲಾಗಿದೆ..

 

ಅಕ್ಟೋಬರ್ 21ರ ವರೆಗೆ ದೇವಾಲಯದ ಬಾಗಿಲು ತೆರೆದಿರಲಿದೆ.. ಆದ್ರೇ 21ರಂದು ಭಕ್ತಿರಿಗೆ ದೇವರ ದರ್ಶನ ಸಿಗುವುದಿಲ್ಲ.. ಅಹೋರಾತ್ರಿ ಅಮ್ಮನರ ದರ್ಶನ ಪಡೆಯಲು ಅವಕಾಶವಿದ್ದು ಮಧ್ಯಾಹ್ನ 1.30ರಿಂದ 3.30ರ ಸಮಯದಲ್ಲಿ ದರ್ಶನವಿರುವುದಿಲ್ಲ..

 

ದೇವಸ್ಥಾನದ ಇತಿಹಾಸ

೧೨ ನೇ ಶತಮಾನ, ಪಾಳೆಯಗಾರ ಕೃಷ್ಣಪ್ಪನಾಯಕನ ಕಾಲ. ಕೃಷ್ಣಪ್ಪನಾಯಕ ಕಾರ್ಯನಿಮಿತ್ತ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದಿತು. ಇದು ಅಪಶಕುನವೆಂದು ಭಾವಿಸುತ್ತಾನೆ. ಪ್ರತ್ಯಕ್ಷಳಾದ ಆದಿಶಕ್ತಿ ಸ್ವರೂಪಿಣಿ-ಈ ಸ್ಥಳದಲ್ಲಿ ದೇಗುಲ ಕಟ್ಟು, ನಾನು ಹಾಸನಾಂಬೆ ಎಂದೇ ಹೆಸರಾಗಿ ಇಲ್ಲಿ ನೆಲೆಸುವೆ ಎಂದಳಂತೆ.

 

ಕೃಷ್ಣಪ್ಪ ನಾಯಕನ ಕಾಲದಿಂದಲೂ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.

ಗರ್ಭಗುಡಿಯಲ್ಲಿ ಹುತ್ತದೋಪಾದಿಯಲ್ಲಿರುವ ಆದಿಶಕ್ತಿಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಕಣ್ತುಂಬಿಕೊಳ್ತುವ ಭಕ್ತಾಗಿಗಳಿಗೆ ಪುನೀತರಾಗುತ್ತಾರೆ.

 

 

 

 

Comments

comments

Similar Articles

Leave a Reply

Top