You are here
Home > ವಾಹಿನಿ ಸುದ್ದಿ > “ಪ್ರಥಮ್ ಒಬ್ಬ ಗೋಮುಖ ವ್ಯಾಘ್ರ” ಸಹ ನಿರ್ದೇಶಕ ಕೆಂಡಾಮಂಡಲ..

“ಪ್ರಥಮ್ ಒಬ್ಬ ಗೋಮುಖ ವ್ಯಾಘ್ರ” ಸಹ ನಿರ್ದೇಶಕ ಕೆಂಡಾಮಂಡಲ..

ಬಿಗ್ ಬಾಸ್ ನಿಂದಲೂ ಪ್ರಥಮ್ ಬಗ್ಗೆ ಒಂದಲ್ಲೊಂದು ಸುದ್ದಿಗಳು ಕೇಳಿ ಬರ್ತಾನೆ ಇದೆ.. ಅದು ನೆಗೆಟಿವ್ ಅಥವಾ ಪಾಸಿಟಿವ್ ಒಟ್ಟಿನಲ್ಲಿ ಪ್ರಥಮ್ ಬಿಗ್ ಬಾಸ್ ನಿಂದ ಬಂದ ಬಳಿಕ ಹಲವು ಬೇಡವಾದ ಹಾಗೆ ಒಳ್ಳೆ ವಿಷ್ಯಗಳಿಂದ ಸುದ್ದಿಯಾಗಿದ್ದಾರೆ..

ಸದ್ಯಕ್ಕೆ ಈಗ ಮತ್ತೆ ಒಳ್ಳೆ ಹುಡುಗ ಪ್ರಥಮ್ ಸುದ್ದಿಯಲ್ಲಿದ್ದಾರೆ.. ಹಂಗಂತ ಈ ಬಾರಿ ಅವರು ಸುದ್ದಿಯಾಗಿರೋದು ಒಳ್ಳೆ ವಿಚಾರಕ್ಕೆ ಅಲ್ಲ.. ಬದಲಿಗೆ ಸಹ ನಿರ್ದೇಶಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ.. ಹೀಗಂತ ಸ್ವತಃ ಸಹ ನಿರ್ದೇಶಕರೊಬ್ಬರು ಫೇಸ್ ಬುಕ್ ನಲ್ಲಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ..

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಟಿ ಶೃತಿ ಹರಿಹರನ್..!!

ಸದ್ಯಕ್ಕೆ ಪ್ರಥಮ್ ಅಭಿನಯದ ಎಂಎಲ್ ಎ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೀತಿದೆ.. ಈ ಚಿತ್ರದಲ್ಲಿ ಕುರಿ ಪ್ರತಾಪ್, ಬಿಗ್ ಬಾಸ್ ರೇಖಾ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.. ಇದೇ ಸಂದರ್ಭದಲ್ಲಿ ಪ್ರಥಮ್ ಹಾಗೆ ಸಹ ನಿರ್ದೇಶಕರಾದ ರಾಮಚಂದ್ರ ಅವರ ನಡುವೆ ಜಗಳವಾಗಿದೆ..

ಜಗನ್ ಕೃಷ್ಟಲೀಲೆಯ ಬಗ್ಗೆ ತನ್ನದೇ ಶೈಲಿಯಲ್ಲಿ ಟಾಂಗ್ ಕೊಟ್ಟ ಕಿಚ್ಚ ಸುದೀಪ್…

ಸಹ ನಿರ್ದೇಶಕ ರಾಮಚಂದ್ರ ಹೇಳುವಂತೆ ಪ್ರಥಮ್ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕರ ಮಾತಿಗೆ ಬೆಲೆ ಕೊಡದೆ ಶೂಟಿಂಗ್ ನಿಲ್ಲಿಸಿ ಹೊರಗೆ ಹೋಗಿದ್ರಂತೆ.. ಈ ಸಮಯದಲ್ಲಿ ಸಹ ನಿರ್ದೇಶಕ ರಾಮಚಂದ್ರ ಈತನ ಕೈ ಹಿಡಿದು ಸೆಟ್ ಗೆ ಕರೆತಂದ್ರಂತೆ.. ಇದರಿಂದ ಕೋಪಗೊಂಡ ಪ್ರಥಮ್ ಈ ಸಹ ನಿರ್ದೇಶಕನನ್ನ ಬಾಯಿ ಬಂದಂತೆ ಬೈದಿದ್ದಾರಂತೆ.. ಜೊತೆಗೆ ಈತ ನಾಳೆ ಸೆಟ್ ಗೆ ಬಂದರೆ ನಾನು ಸಿನಿಮಾದಲ್ಲಿ ಅಭಿನಯಿಸೋದಿಲ್ಲ ಅಂತ ನಿರ್ದೇಶಕರಿಗೆ ಧಮ್ಕಿ ಹಾಕಿದ್ದಾರಂತೆ.. ಈ ಬಗ್ಗೆ ಸಹ ನಿರ್ದೇಶಕರಾದ ರಾಮಚಂದ್ರ ಫೇಸ್ ಬುಕ್ ನಲ್ಲಿ ವಿಡಿಯೋವನ್ನ ಅಪ್ ಲೋಡ್ ಮಾಡಿದ್ದಾರೆ…

ಇದು ಸಹ ನಿರ್ದೇಶಕರ ಆರೋಪವಾಗಿದ್ದು, ಈ ಬಗ್ಗೆ ಪ್ರಥಮ್ ಪ್ರತಿಕ್ರಿಯೆ ನೀಡ್ತಾರ ಅನ್ನೋದನ್ನ ಕಾದು ನೋಡ್ಬೇಕು

Comments

comments

Similar Articles

Leave a Reply

Top