You are here
Home > ಸಿನಿಮಾ > ಮಾಳವಿಕ –ಪರಮೇಶ್ವರ್ ಗುಂಡ್ಕಲ್ ವಿಡಿಯೋ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದಿಷ್ಟು..

ಮಾಳವಿಕ –ಪರಮೇಶ್ವರ್ ಗುಂಡ್ಕಲ್ ವಿಡಿಯೋ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದಿಷ್ಟು..

ಮಾಳವಿಕ ಹಾಗೆ ಪರಮೇಶ್ವರ್ ಗುಂಡ್ಕಲ್ ಅವರ ಬಿಗ್ ಬಾಸ್ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿತ್ತು.. ಈ ಬಗ್ಗೆ ಇಂದು ನಡೆದ ಸುದ್ದಗೋಷ್ಟಿಯಲ್ಲಿ ಪರಮೇಶ್ವರ್ ಗುಂಡ್ಕಲ್ ಹಾಗೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ..

ಪರಮೇಶ್ ಗುಂಡ್ಕಲ್:

ವೀಡಿಯೋವನ್ನ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗ್ತಿದೆ.. ಹಿಂದೆ ಮುಂದೆ ನೋಡದೆ ಮಾತನಾಡುವುದು ಸರಿಯಲ್ಲ.. ಸಿಕ್ರೇಟ್ ರೂಂಗೆ ಮಾಳವಿಕ ಅವರನ್ನ ಕಳುಹಿಸುತ್ತಿದೆ ಅದನ್ನ ಬಿಟ್ಟರೆ ಮತ್ತೇನು ಇಲ್ಲ ಅಂತ ಪರಂ ಹೇಳಿದ್ರು

ಇನ್ನೂ ಇದೇ ವಿಚಾರವಾಗಿ ಮಾತಾನಾಡಿದ ಕಿಚ್ಚ ಸುದೀಪ್ :  

ಒಬ್ಬ ಷೋ ಡೈರೆಕ್ಟರ್ ಆದವನಿಗೆ ಎಲ್ಲಿ ಕ್ಯಾಮರ ಇದೆ, ಎಲ್ಲಿ ಮೈಕ್ ಇದೆ ಅನ್ನೋದು ಗೊತ್ತಿರುತ್ತೆ.. ಹೀಗಿರುವಾಗ ವಿಡಿಯೋ ಪರ್ಸನಲ್ ಆಗಿದ್ರೆ ಪರಮೇಶ್ ಅದನ್ನ ಡಿಲೀಟ್ ಮಾಡಿಸ ಬಹುದಿತ್ತು.. ಬಟ್ ಅವ್ರು ಹಾಗೆ ಮಾಡಲಿಲ್ಲ.. ಇನ್ನೂ ಮನೆಗೆ ಬರುವ ಪ್ರತಿಯೊಬ್ಬರು ಗೆಲ್ಲಬೇಕು ಅನ್ನೋ ಆಸೆಯಿಂದಲೇ ಬಿಗ್ಬಾಸ್ ಮನೆಗೆ ಬಂದಿರ್ತಾರೆ.. ಹೀಗಾಗೆ ಎಲ್ಲ ಸ್ಪರ್ಧಿಗಳನ್ನೂ ಒಂದೇ ರೀತಿ ಕಾಣಬೇಕು.. ಇದುವರೆಗೂ ಬಿಗ್ ಬಾಸ್ ನಲ್ಲಿ ಅಂತಹ ಕೆಟ್ಟದೇನನ್ನೂ ನಾನು ಕಂಡಿಲ್ಲ.. ಹಾಗೆನಾದ್ರೂ ಇದದ್ದೆ ಆದ್ರೇ ನಾನು ಈ ಷೋನ ಮಾಡ್ತಾ ಇರಲಿಲ್ಲ.. ಅಂದಹಾಗೆ ನನಗೂ ಸ್ಟೆಜ್ ಮೇಲೆ ತುಂಬ ಜನ ಮುತ್ತಿಟ್ಟಿದ್ದಾರೆ.. ನೋಡುವ ರೀತಿಯನ್ನ ಬದಲಾಗಿಯಿಕೊಳ್ಳಬೇಕು ಅಷ್ಟೆ.. ಪರಮೇಶ್ವರ್ ಗುಂಡ್ಕಲ್ ಹಾಗೆ ಮಾಳವಿಕ ಇಬ್ಬರು ಒಳ್ಳೆ ವ್ಯಕ್ತಿಗಳು ಅವರ ಬಗ್ಗೆ ಹೀಗೆಲ್ಲ ತಪ್ಪು ಸುದ್ದು ಹರಡದಿರಿ ಅಂತ ಹೇಳಿದ್ರು..

ಅಂದಹಾಗೆ ಬಿಗ್ ಬಾಸ್ ಇದೇ 15ಕ್ಕೆ ಗ್ರ್ಯಾಂಡ್ ಆಗಿ ಶುರುವಾಗಲಿದೆ.. ಕಲರ್ ಸೂಪರ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ..

Comments

comments

Similar Articles

Leave a Reply

Top