ಧ್ಯಾನಪೀಠದ ನಿತ್ಯಾನಂದನಿಗೆ ಮತ್ತೊಂದು ಯೋಗ!! ಗಿನ್ನಿಸ್ ರೆಕಾರ್ಡ್ ಮಾಡಿದ ಸ್ವಾಮಿ!!

ಒಹ್ ಇದೇನಪ್ಪಾ ಸದ್ದೇ ಇಲ್ಲದಂತೆ ಬಂದು ದೊಡ್ಡ ಸುದ್ದಿಯಾಗಿ ಈಗ ಸದ್ದು ಅಡಗಿ ಹೋದ ನಿತ್ಯಾನಂದ ಸ್ವಾಮಿಯ ಬಗ್ಗೆ ಇದೇನ್ ಸುದ್ದಿ ಅಂತೀರಾ..!!

ಹೌದು ಸ್ವಾಮಿ.. ಇದು ಅಂತಿಂಥಾ ಸುದ್ದಿ ಅಲ್ಲ.. ಗಿನ್ನಿಸ್ ರೆಕಾರ್ಡ್ ಆಗಿರೋ ಸುದ್ದಿ.. ಇದೆ ನಮ್ಮ ರಾಮನಗರಕ್ಕೆ ಬಂದು ಬಿಡದಿಯಲ್ಲಿ ಬಿಡು ಬಿಟ್ಟು ಊರಿನಲ್ಲಿ ಧ್ಯಾನಪೀಠ ಅಂತ ಮಠ ಕಟ್ಟಿ ನಟೀಮಣಿಯೊಬ್ಬಳೊಂದಿಗೆ ಯೋಗಮಾಡಿ  ಜೈಲ್ ಯೋಗ ಪಡೆದು ಫೇಮಸ್ ಆದ ನಿತ್ಯಾನಂದ ಸ್ವಾಮಿ ಈಗ ಹೊಸ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ!!… ಗುರುಕುಲದ ಶಿಷ್ಯರಿಗೆ ಮಲ್ಲಕಂಬ ಯೋಗದ ಪಾಠ ಮಾಡಿ ವಿಶ್ವದಲ್ಲೇ ದೊಡ್ಡ ಮಲ್ಲಕಂಬ ಅಥವಾ ಪೋಲ್ ಯೋಗ ಪ್ರದರ್ಶನ ನೀಡಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ.

ಇಲ್ಲಿ ನೋಡಿ ಅವ್ರು ತೆಗೆದುಕೊಂಡ ಸರ್ಟಿಫಿಕೇಟ್!!

 

ಅಂದ್ಹಾಗೆ ಈ ಮಲ್ಲಕಂಬ ಅಥವಾ ಶಿವಸ್ಥಂಬ ಯೋಗ ಅಂದ್ರೆ ಏನು..?

ಇದು ನಮ್ಮ ಗರಡಿ ಮನೇಲಿ ಮಾಡೋ ಕಸರತ್ತು. ಮಲ್ಲಕಂಬ ಯೋಗದಿಂದ ದೇಹದಲ್ಲಿ ಕುಂಡಲಿನಿ ಶಕ್ತಿ ಬಂದು ಶಕ್ತಿ ಸಂಚಯ ಆಗುತ್ತಂತೆ. ಇದು ಸನಾತನ ಹಿಂದೂ ಸಂಸ್ಕೃತಿಯಿಂದ ಬಂದಿದೆ ಅನ್ನೋ ಮಾತಿದೆ!! ಇದನ್ನ ಹೆಣ್ಣು, ಗಂಡು, ವಯಸ್ಸಿನ ಬೇಧವಿಲ್ಲದೆ, ಅಂಗವಿಕಲತೆ ಇರೋರು ಹೀಗೆ ಯಾರು ಬೇಕಾದ್ರೂ ಮಾಡ್ಬಹುದಂತೆ! ಇದನ್ನು ಮಾಡೋಕೆ ಅಂತಾನೆ ವಿಶೇಷವಾಗಿ ಕಂಬ, ಹಗ್ಗ ಎಲ್ಲಾ ರೆಡಿ ಮಾಡಿಕೊಂಡು ಚೆನ್ನಾಗಿ ಶಿಷ್ಯರನ್ನು ತಯಾರು ಮಾಡಿದ್ರು ನಿತ್ಯಾನಂದ..

ಇದು ರೆಕಾರ್ಡ್ ಹೇಗಾಯ್ತು!!

ರೆಕಾರ್ಡ್ ಮಾಡ್ಬೇಕು ಅಂತಾನೆ ಎಲ್ಲೆಲ್ಲಿಂದೋ ಬಂದ ೨೬೩ ಹೆಣ್ಣು-ಗಂಡು ಶಿಷ್ಯರನ್ನ ಸೇರಿಸಿ ಅಕಾಡಕ್ಕೆ ಇಳಿಸಿದ್ರಂತೆ!.. ಇದರಲ್ಲಿ ೪೪ ದೇಶದ ಶಿಷ್ಯರಿದ್ರಂತೆ!!.. ಶಿಷ್ಯರು ೧೬ರ ಹದಿಹರೆಯದ ವಯಸ್ಸಿನಿಂದ ಹಿಡಿದು ೭೪ ವರ್ಷದ ಹಣ್ಣಣ್ಣು ವೃದ್ಧರೂ ಇದ್ರಂತೆ!!!..

ಹಗ್ಗದಿಂದ ಯೋಗ (ರೋಪ್ ಯೋಗ) ಮಾಡಿಸಿ ಮೊದಲನೇ ರೆಕಾರ್ಡ್!

ಹಗ್ಗದಿಂದ ಯೋಗ (ರೋಪ್ ಯೋಗ) ಮಾಡಿಸಿ ರೆಕಾರ್ಡ್ ಮಾಡಿದ ಕೇವಲ ೨ ದಿನದಲ್ಲಿ ಮಲ್ಲಕಂಬ ಯೋಗ (ಪೋಲ್ ಯೋಗ) ಮಾಡಿಸಿ ಈ ರೆಕಾರ್ಡ್ ಮಾಡಿದ್ದಾರಂತೆ… ಈ ವಿಷಯವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..

 

Comments

comments

Similar Articles

Top