ಮುಗಿತು ಮಜಾ ಟಾಕೀಸ್

ಈಗಾಗ್ಲೇ ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ ಶೋ ಅಂದ್ರೆ ಅದು ಮಜಾ ಟಾಕೀಸ್.. ಸೃಜನ್ ಲೋಕೇಶ್ ನೇತೃತ್ವದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರತಿ ವೀಕೆಂಡ್ ನಲ್ಲಿ ಮೂಡಿ ಬರ್ತಿದ್ದ ಮಜಾ ಟಾಕೀಸ್ ತನ್ನ ಕೊನೆ ಆಟವನ್ನ ಮುಗಿಸಲಿದೆ..

ಕಲಾವಿದರು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಹಲವರನ್ನ ಕರೆಸಿ ಸೃಜಾ ಅಂಡ್ ಟೀಮ್ ಪ್ರೇಕ್ಷಕರಿಗೆ ನಗುವಿನ ಟಾನಿಕ್ ಕೊಡುತ್ತಿದ್ದ ಕಾರ್ಯಕ್ರಮಕ್ಕೀಗ ಫುಲ್ ಸ್ಟಾಪ್ ಬಿದ್ದಿದೆ… ಹೌದು ಇನ್ನೂ ಮುಂದೆ ಮಜಾ ಟಾಕೀಸ್ ಜಾಗಕ್ಕೆ ಹೊಸ ಕಾರ್ಯಕ್ರಮ ಬರಲಿದೆ..

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನೂ ಮುಂದೆ ಪ್ರತಿ ವೀಕೆಂಡ್ ನ 8 ಗಂಟೆಗೆ ನಿಮ್ಮ ಮುಂದೆ ಹಾಜರಾಗಲಿದ್ದಾರೆ.. ಮಜಾ ಟಾಕೀಸ್ ಗೆ ಬ್ರೇಕ್ ಕೊಟ್ಟು, ಪವರ್ ಸ್ಟಾರ್ಗೆ ವೆಲ್ಕಂ ಮಾಡಿದೆ ಕಲರ್ಸ್ ಕನ್ನಡ ವಾಹಿನಿ…

ಈಗಾಗ್ಲೇ ಗ್ರ್ಯಾಂಡ್ ಫಿನಾಲೆಯ ರೆಕಾರ್ಡಿಂಗ್ ನ್ಯಾಷನಲ್ ಕಾಲೇಜ್ ಮೈದಾನ ನಡೆದಿದೆ.. ಇನ್ನೂ ಸ್ವಲ್ಪ ತಿಂಗಳಲ್ಲಿ ಮಜಾ ಟಾಕೀಸ್ ಸೀಸನ್ 2 ಶುರು ಆದ್ರು ಅಚ್ಚರಿ ಇಲ್ಲ.. ಒಟ್ಟಿನಲ್ಲಿ ಇಷ್ಟು ವಾರಗಳು ಪ್ರೇಕ್ಷಕರಲ್ಲಿ ನಗುವನ್ನ ಮೂಡಿಸ್ತಾ ಇದ್ದ ಮಜಾ ಟಾಕೀಸ್ ಕಂಪ್ಲೀಟ್ ಆಗ್ತಿದ್ದು, ಅಪ್ಪುವಿನ ಹೊಸ ಷೋಗೆ ವೇದಿಕೆ ಸಜ್ಜಾಗಿದೆ…

 

Comments

comments

Similar Articles

Top