ಸಾವಿನ ಭಯಕ್ಕೆ ವಧುವಾಗಿ ಮಾರ್ಪಾಡಾದ ಈ ವ್ಯಕ್ತಿ! ಈ ವಿಲಕ್ಷಣಕ್ಕೆ ಇದೇ ಕಾರಣವಂತೆ!!

ಲೈಫ್‍ಸ್ಟೈಲ್

ಈತ ಉತ್ತರ ಪ್ರದೇಶದ ಜೌನ್‌ ಪುರದ ದೈನಂದಿನ ಕೂಲಿ ಕಾರ್ಮಿಕ ಚಿಂತಾಹರನ್ ಚೌಹಾನ್. ಈತ ಕಳೆದ 30 ವರ್ಷಗಳಿಂದ ವಧುವಿನಂತೆ ಬಟ್ಟೆ, ದೊಡ್ಡ ಉಂಗುರದ ಮೂಗುತಿ, ಬಳೆಗಳು, ಜುಮುಕಿ ಇತ್ಯಾದಿಗಳನ್ನು ನಿತ್ಯ ಧರಿಸುತ್ತಿದ್ದಾನಂತೆ!. ಇದೇನಪ್ಪಾ, ಏನಾಗಿದೆ ಇವನಿಗೆ ಎಂದು ತಿಳಿಯಬೇಕಾದ್ರೆ ಇವನ 30 ವರ್ಷದ ಹಿಂದಿನ ಕಥೆ ಕೇಳಲೇಬೇಕು..

ಚೌಹಾನ್ 14 ನೇ ವಯಸ್ಸಿನಲ್ಲಿ ವಿವಾಹವಾದ, ಆದರೆ ಈತನ ಪತ್ನಿ ಕೆಲವೇ ತಿಂಗಳುಗಳಲ್ಲಿ ನಿಧನಳಾದಳು. ಹೆಂಡತಿಯ ಸಾವನ್ನು ಸಹಿಸಲಾಗದ ಚೌಹಾನ್ ದಿನಾಜ್‌ಪುರಕ್ಕೆ ಮರಳಿದನಂತೆ. ಈಗ 66 ವರ್ಷದ ಚೌಹಾಣ್, ತನ್ನ ಕುಟುಂಬದ 14 ಸದಸ್ಯರನ್ನು ಇದೆ ರೀತಿಯ ಅಕಾಲಿಕ ಮರಣದಲ್ಲಿ ಕಳೆದುಕೊಂಡಿದ್ದಾನಂತೆ!!. ಸಾವಿನ ಭಯ ಹಾಗು ಮೂಢನಂಬಿಕೆ ಈತನನ್ನು ನಿತ್ಯವಧುವಾಗಿ ಮಾರ್ಪಡಲು ಕಾರಣವಾಯಿತಂತೆ. 1989 ರಿಂದ ಈ ರೀತಿ ದಿರಿಸು ಧರಿಸುತ್ತಿದ್ದಾನೆ ಈತ. ತನ್ನ 21 ನೇ ವಯಸ್ಸಿನಲ್ಲಿ, ಚೌಹಾನ್ ಪಶ್ಚಿಮ ಬಂಗಾಳದ ದಿನಾಜ್‌ ಪುರದ ಇಟ್ಟಿಗೆ ಗೂಡು ಕೆಲಸಕ್ಕೆ ಹೋದನಂತೆ.

ಕಾರ್ಮಿಕರಿಗೆ ಧಾನ್ಯ ಖರೀದಿಸುವ ಕೆಲಸವನ್ನು ಮಾಡುತ್ತಿದ್ದ ಚೌಹಾಣ್, ಅಂಗಡಿಯ ಮಾಲೀಕರಿಗೆ ಹತ್ತಿರವಾದ. ಆತನ ಮಗಳನ್ನು ಮದುವೆಯಾದ. ಆದರೆ, ಚೌಹಾನ್ ಕುಟುಂಬವು ಮದುವೆಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದಾಗ, ಅವನು ತನ್ನ ಹೆಂಡತಿಯನ್ನು ಬಿಟ್ಟು ಮನೆಗೆ ಮರಳಿದ್ದನಂತೆ. ಇದನ್ನು ಸಹಿಸದ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು. ಆಕೆಯ ಸಾವಿನ ಬಗ್ಗೆ ತಿಳಿದಾಗ ಚೌಹಾನ್ ದಿನಾಜ್‌ ಪುರಕ್ಕೆ ಮರಳಿದ. ಕೆಲವು ತಿಂಗಳುಗಳ ನಂತರ, ಕುಟುಂಬವು ಮತ್ತೆ ಮದುವೆಯಾಗಲು ಮನವೊಲಿಸಿದಾಗ, ಸಾವಿನ ಸರಪಳಿ ಮತ್ತೆ ಪ್ರಾರಂಭವಾಯಿತು!.

ನನ್ನ ಮೂರನೆಯ ಮದುವೆಯ ಕೆಲವು ತಿಂಗಳುಗಳ ನಂತರ, ನಾನು ಅನಾರೋಗ್ಯಕ್ಕೆ ಒಳಗಾಗಿದ್ದೆ ಮತ್ತು ಒಬ್ಬರ ನಂತರ ಒಬ್ಬರು ಕುಟುಂಬ ಸದಸ್ಯರು ಸಾಯಲಾರಂಭಿಸಿದರು. ನನ್ನ ತಂದೆ ರಾಮ್ ಜಿಯವಾನ್, ಹಿರಿಯ ಸಹೋದರ ಚೋಟೌ, ಅವರ ಪತ್ನಿ ಇಂದ್ರಾವತಿ, ಅವರ ಇಬ್ಬರು ಗಂಡು ಮಕ್ಕಳು, ಕಿರಿಯ ಸಹೋದರ ಬಾದೌ ಶೀಘ್ರವಾಗಿ ನಿಧನರಾದರು. ನಂತರ ನನ್ನ ಸಹೋದರರು ಮೂರು ಹೆಣ್ಣುಮಕ್ಕಳು ಮತ್ತು ನಾಲ್ಕು ಗಂಡು ಮಕ್ಕಳು ಸಹ ಸತ್ತರುಎಂದು ಹೇಳಿದ ಚೌಹಾನ್, ಕನಸಿನಲ್ಲಿ ತನ್ನ ಎರಡನೇ ಹೆಂಡತಿಯನ್ನು ಆಗಾಗ್ಗೆ ನೋಡುತ್ತಾನೆ ಎಂದು ಹೇಳಿದರು. “ಅವಳು ನನ್ನನ್ನು ವಧುವಿನಂತೆ ನೋಡಲು ಇಷ್ಟಪಡುತ್ತಾಳೆ. ಅದಕ್ಕೆ ನಾನು ಒಪ್ಪಿಕೊಂಡೆ. ಆ ದಿನದಿಂದ ನಾನು ವಧುವಿನಂತೆ ಅಲಂಕರಿಸಿಕೊಳ್ಳುತ್ತಿದ್ದೇನೆ. ಅಂದಿನಿಂದ ಸಾವುಗಳು ನಿಂತುಹೋಗಿವೆಎಂದು ಅವರು ಹೇಳಿದರು. ಈಗ ಅವರ ಆರೋಗ್ಯ ಸುಧಾರಿಸಿದೆ ಮತ್ತು ಅವರ ಪುತ್ರರೂ ಸಹ ಆರೋಗ್ಯವಾಗಿದ್ದಾರೆ ಎಂದು ಅವರು ಹೇಳಿದರು