ಲಾಕ್ ಡೌನ್ ನಲ್ಲಿ ಪ್ರಜ್ಞಾಪ್ರಸಾದ್ ತಮ್ಮ ದಿನವನ್ನ ಹೇಗೆ ಕಳಿತಿದ್ದಾರೆ ಗೊತ್ತಾ..? ಮಾದರಿಯಾಗ್ತಿದೆ ಈ ನಟಿ ಕೆಲಸ..!

ವಾಹಿನಿ ಸುದ್ದಿ ಸಿನಿಮಾ

ಲಾಕ್ ಡೌನ್ ಗೆ ಇಡೀ ದೇಶವೆ ಸ್ತಬ್ಧವಾಗಿ.. ಹೀಗಾಗೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.. ಇನ್ನು ನಮ್ ಸೆಲೆಬ್ರಿಟಿಗಳ ದಿನಚರಿ ಸಹ ಹೀಗೆ ಆಗಿದೆ.. ಹೀಗಾಗೆ ಯಾವಾಗ್ಲೂ ವರ್ಕ್ ಮೂಡ್ ನಲ್ಲಿ ಇರ್ತಿದ್ದ ಇವರೆಲ್ಲರ ಲೈಫ್ ಹೇಗಿದೆ..? ಮನೆಯಲ್ಲಿ ಇದ್ದು, ತಮ್ಮ ಸಮಯವನ್ನ ಹೇಗೆ ಸದುಪಯೋಗ ಪಡೆಸಿಕೊಳ್ತಿದ್ದಾರೆ ಅನ್ನೋ ಕುತೂಹಲ ಇರೋದು ಸಹಜ..
ಸದ್ಯ ನಟಿಯಾಗಿ ಹಾಗು ಉದ್ಯಮಿಯೂ ಆಗಿ ಹೆಸರು ಮಾಡಿರುವ ಪ್ರಜ್ಞಾ ಪ್ರಸಾದ್ ಲಾಕ್ ಡೌನ್ ಸಮಯವನ್ನ ತನ್ನ ಫ್ಯಾಮಿಲಿಗೆ ಮೀಸಲಿಟ್ಟಿದ್ದಾರೆ.. ಅಮ್ಮನ ಜೊತೆಗೆ ಹೆಚ್ಚು ಸಮಯವನ್ನ ಕಳಿತಿದ್ದೀನಿ ಅಂತಾರೆ.. ಅಷ್ಟೆ ಅಲ್ಲ ಲಾಕ್ ಡೌನ್ ವರ್ಕ್ಔಟ್ ಮಾಡೋದನ್ನ ಪೋಸ್ಟ್ ಪೋನ್ ಮಾಡೋಕೆ ಕಾರಣವಾಗಬಾರದು ಅಂತ ಹೇಳುವ ಈ ಚೆಲುವೆ, ತನ್ನ ಫಿಟ್ನೆಸ್ ಅನ್ನ ಕಾಪಾಡಿಕೊಳ್ಳಲು ಎಂದಿನಂತೆ ಯೋಗ ಹಾಗು ಧ್ಯಾನ ಮಾಡ್ತಿದ್ದಾರೆ..
ಇದರ ಜೊತೆಗೆ ನಿಮಗೆಲ್ಲ ಗೊತ್ತಿರುವ ಹಾಗೆ ಲಾಕ್ ಡೌನ್ ನಿಂದಾಗಿ ಬೀದಿ ನಾಯಿಗಳಿಗೆ ಆಹಾರ ಸಿಗೋದೆ ಕಷ್ಟವಾಗಿದೆ.. ಹೀಗಾಗೆ ಸ್ವತಃ ಪ್ರಜ್ಞಾ ಪ್ರತಿದಿನ ಇವುಗಳಿಗೆ ಆಹಾರವನ್ನ ಒದಗಿಸುತ್ತಿದ್ದಾರೆ.. ಈ ರೀತಿ ತನ್ನ ಕೈಲಾದ ಸಹಾಯವನ್ನ ಮಾಡ್ತಾ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿರುವ ಸಮಯವನ್ನ ಉತ್ತಮವಾಗಿ ಸದುಪಯೋಗ ಪಡೆಸಿಕೊಳ್ತಿದ್ದಾರೆ..