ಮೊಬೈಲ್ ಆರ್ಡರ್ ಮಾಡಿದ್ದ ಕೇಂದ್ರ ಸಚಿವರ ಮನೆಗೆ ಬಂದಿದ್ದೇನು ಗೊತ್ತಾ? ಸಚಿವರಿಗೇ ಧೋಕ ಈ ಸ್ಟೋರಿ ನೋಡಿ…

ವಾಹಿನಿ ಸುದ್ದಿ

ಪಶ್ಚಿಮ ಬಂಗಾಳದ ಮಾಲ್ಡಾ ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಖಾಗನ್ ಮುರ್ಮು ಅವರ ಹೆಸರಿಗೆ ಕಳೆದ ಸೋಮವಾರ ಪಾರ್ಸೆಲ್ ಒಂದು ಬಂದಿದೆ. ಮನೆಯಲ್ಲಿ ಇವರು ಇಲ್ಲದ ಕಾರಣ, ಅವರ ಶ್ರೀಮತಿ ಅದನ್ನು ತೆಗೆದುಕೊಂಡಿದ್ದರು. ಇಂದಿಗೂ ಆನ್ಲೈನ್ ನಲ್ಲಿ ಆರ್ಡರ್ ಮಾಡದ ಮುರ್ಮು ರವರು, ಮಗನ ಒತ್ತಾಯದ ಮೇರೆಗೆ, ಒಂದು ಸ್ಯಾಮ್‌ಸಂಗ್‌ ಮೊಬೈಲ್ ಅನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದರು. ದೀಪಾವಳಿಗೆ ಒಂದು ವಾರ ಇರುವಂತೆ ಆರ್ಡರ್ ಮಾಡಿದ್ದ ಮೊಬೈಲ್ ಬಂದಿದ್ದು ಹಬ್ಬದ ದಿನ. ಆದರೆ ಪಾರ್ಸೆಲ್ ಓಪನ್ ಮಾಡಿದ ನಂತರವೇ ನಿಜವಾದ ಸರ್ಪ್ರೈಸ್ ಕಾದಿತ್ತು!

ಮೊದಲನೆಯದಾಗಿ, ತಾವು ಆರ್ಡರ್ ಮಾಡಿದ್ದ ಸ್ಯಾಮ್‌ಸಂಗ್‌ ಮೊಬೈಲ್ ಬದಲಾಗಿ, ರೆಡ್‌ಮಿ ಫೋನ್‌ನ ಪೆಟ್ಟಿಗೆ ಅಲ್ಲಿತ್ತು. ನಂತರ ಆ ಪೆಟ್ಟಿಗೆಯನ್ನು ತೆರೆದಾಗ ಫೋನ್ ಬದಲಿಗೆ ಎರಡು ಅಮೃತಶಿಲೆಯ ಕಲ್ಲುಗಳನ್ನು ಪೆಟ್ಟಿಗೆಯೊಳಗೆ ತುಂಬಿಸಲಾಗಿತ್ತು!!

ಈ ಕಲ್ಲಿಗೆ ಅವರು ತೆತ್ತ ಬೆಲೆ ಎಷ್ಟು ಗೊತ್ತಾ? 11,999 ರೂಪಾಯಿಗಳು! ತಕ್ಷಣ ಕೋಪಗೊಂಡ ಮುರ್ಮು ಶೀಘ್ರದಲ್ಲೇ ಟೈಮ್ಸ್ ಆಫ್ ಇಂಡಿಯಾಕ್ಕೆ, “ನಾನು ಈ ಮೊದಲು ಆನ್‌ಲೈನ್‌ನಲ್ಲಿ ಏನನ್ನೂ ಆರ್ಡರ್ ಮಾಡೇ ಇರಲಿಲ್ಲ. ನನ್ನ ಮಗ ಇದನ್ನು ಮಾಡಿದ್ದ. ಈ ಮೋಸದ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಿಗೆ ವರದಿ ಮಾಡುತ್ತೇನೆ” ಎಂದು ಮಾಲ್ಡಾದ ಇಂಗ್ಲಿಷ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಲ್ಡಾ ಪೊಲೀಸ್ ಮುಖ್ಯಸ್ಥ ಅಲೋಕ್ ರಾಜೋರಿಯಾರವರು “ನಾವು ಖಂಡಿತವಾಗಿಯೂ ದೂರಿನ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.