ಮುಖದ ಅಂದ ಹೆಚ್ಚಿಸಬೇಕಾ…?

ಲೈಫ್‍ಸ್ಟೈಲ್

ಮಹಿಳೆಯರಿಗೆ ಸೌಂದರ್ಯ ಎಂದ ತಕ್ಶಣ ನೆನಪಾಗುವುದು ಪಾರ್ಲರ್. ಮೊದಲು ಪಾರ್ಲರ್ ಬೇಕಾದಲ್ಲಿ ಎಷ್ಟೋ ದೂರ ಹೋಗಬೇಕಿತ್ತು. ಅಲ್ಲಿ ಎಷ್ಟೊ ಹೊತ್ತು ತನ್ನ ಸರದಿಗಾಗಿ ಕಾಯಬೇಕಿತ್ತು. ಆದರೆ ಈಗ ಪ್ರತೀ ಗಲ್ಲಿಯಲ್ಲುರಿಂದಪಾರ್ಲರ್ ಕಾಣಸಿಗುತ್ತೆ. ಒಂದೆ ಒಂದು ಫೊನ್ ಕಾಲ್ ನಿಂದ ತಮ್ಮ ಸೌಂದರ್ಯಕ್ಕೆ ಕೃತಕ ಲೇಪನ ಹಾಕಿ ಸುಂದರ ಕಾಣಲು ಪ್ರಯತ್ನಿಸೋ ಈ ಕಾಲದಲ್ಲಿ ಅದರಿಂದಾಗೊ ಸೈಡ್ ಎಫೆಕ್ಟ್ಸ್ ಗೆ ಸಿದ್ದವಾಗಿರ್ಬೆಕಾಗಿದೆ. ಈ ದಿನಗಳು ತುಂಬ ವೇಗದ ದಿನಗಳು, ಯಾರನ್ನೆ ಕೇಳಿದರೂ ಸಮಯವಿಲ್ಲ, ತಮ್ಮ ಕೈಗೆಟುಕುವ ನೈಸರ್ಗಿಕ ವಸ್ತುಗಳನ್ನು ಮರೆತಂತಿದೆ, ಅಂತಹವರಿಗಾಗಿ ಇಲ್ಲಿವೆ ಕೆಲವೊಂದು ಟಿಪ್ಸ್.

ಚರ್ಮದ ಕಾಂತಿಗೆ ದ್ರವಾಹಾರ ಸೇವನೆ, ಹಸಿ ತರಕಾರಿ, ಸೊಪ್ಪುಗಳ ಸೇವನೆ ತುಂಬಾ ಮುಖ್ಯ. ಆಗಾಗ್ಗೆ ಚರ್ಮಕ್ಕೆ ಒಗ್ಗುವ ಎಣ್ಣೆಯನ್ನು ಮಾಲಿಷ್ ಮಾಡಬೇಕು. ಆಗ ಚರ್ಮದ ರಂಧ್ರಗಳು ತೆರೆದುಕೊಂಡು ಎಣ್ಣೆಯನ್ನು ಹೀರಿಕೊಳ್ಳುತ್ತವೆ.

ಸ್ನಾನ ಮಾಡುವ ನೀರಿಗೆ ಹೂವಿನ ಪಕಳೆಗಳನ್ನು ಹಾಕಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ ಚರ್ಮವು ಸುವಾಸನೆ ಮತ್ತು ಮ್ರುದುವಾಗಿರುತ್ತೆ.

ಕಾಲಿನ ಮಂಡಿ, ಮೊಣಕೈ ಬಳಿ ತುಂಬಾ ಕಪ್ಪಗಿದ್ದಲ್ಲಿ ಬಾಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಉಜ್ಜಬೇಕು.

ಕಲ್ಲಂಗಡಿ ಹಣ್ಣು ಸೇವನೆಯು ಚರ್ಮದ ಕಾಂತಿಗೆ ಒಳ್ಳೆಯದು.

ಶ್ರೀಗಂಧ ಪುಡಿಯ ಜೊತೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಲೇಪಿಸಿ. ಉಷ್ಣವು ದೂರಾಗುವುದಲ್ಲದೆ ಕಾಂತಿಯು ಉಕ್ಕುವುದು

ಗುಲಾಬಿ ಎಸಳುಗಳನ್ನು ಚೆನ್ನಾಗಿ ರುಬ್ಬಿ ಮೈಗೆ ಹಚ್ಛಿಕೊಂಡು ಉಗುರು ಬಿಸಿ ನೀರ ಸ್ನಾನ ಮಾಡಿ ನೋಡಿ.

ತೆಂಗಿನ ಎಳನೀರು ಕುಡಿದಲ್ಲಿ ಚರ್ಮವು ಕಾಂತಿಯುಕ್ತವಾಗುತ್ತದೆ.

ಮೆಂತೆ ಸೊಪ್ಪಿನ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುವುದು.

.ಪ್ರತಿನಿತ್ಯ ಕ್ಯಾರೆಟ್ ರಸವನ್ನು ಸೇವಿಸುವುದರಿಂದ ಮುಖವು ಕಾಂತಿಯಿಂದ ಮಿನುಗುವುದು.

ನಿಮ್ಮ ಮುಖದಲ್ಲಿ ಕಪ್ಪು ಬಣ್ಣದ ಚುಕ್ಕೆಗಳಿದ್ದರೆ ಹುಣಿಸೆ ಹಣ್ಣಿನ ಗೊಜ್ಜಿಗೆ ಬೆಲ್ಲಸೇರಿಸಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿ ಶುಭ್ರ ನೀರಿನಿಂದ ತೊಳೆದಲ್ಲಿ ನಿವಾರಣೆಯಾಗುವುದು.

ಮೊಳಕೆ ಬಂದಿರುವ ಕಾಳುಗಳನ್ನು ಚೆನ್ನಾಗಿ ರುಬ್ಬಿ ಮುಖಕ್ಕೆ ಹಚ್ಚಿದ್ರೆ ಮುಖ ಫಳ ಫಳ.