ಮಾಜಿ ಸಿಎಂ ಎಸ್ಸೆಂ ಕೃಷ್ಣ ಅಳಿಯ, ಉದ್ಯಮಿ ವಿ.ಜಿ. ಸಿದ್ಧಾರ್ಥನಾಪತ್ತೆ

ವಾಹಿನಿ ಸುದ್ದಿ

ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆ ಬಳಿ ನಾಪತ್ತೆ . ಚಾಲಕನಲ್ಲಿ ಕಾರು ನಿಲ್ಲಿಸಲು ಹೇಳಿ ನಡೆದುಕೊಂಡು ಹೋಗಿದ್ದ ಸಿದ್ದಾರ್ಥ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ನಡೆದಿರುವ ಘಟನೆ . ನೇತ್ರಾವತಿ ನದಿಗೆ ಹಾರಿದ ಶಂಕೆಯಲ್ಲಿ ಪೊಲೀಸರಿಂದ ಹುಡುಕಾಟ . ಭಾರತದ ಅತಿದೊಡ್ಡ ಕಾಫಿ ರಫ್ತು ಉದ್ಯಮಿಯಾಗಿರುವ ವಿ.ಜಿ. ಸಿದ್ಧಾರ್ಥ . ಚಿಕ್ಕಮಗಳೂರಿನಲ್ಲಿ 12 ಸಾವಿರ ಎಕ್ರೆ ಕಾಫಿ ಎಸ್ಟೇಟ್ ಹೊಂದಿರುವ ಉದ್ಯಮಿ. ದೇಶವಿದೇಶದಲ್ಲಿ ಕೆಫೆ ಕಾಫಿ ಡೇ ಸ್ಥಾಪಿಸಿ, ಹೆಸರು ಗಳಿಸಿದ್ದ ಸಿದ್ದಾರ್ಥ್. ಮಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪೆನಿಗಳಿಗೆ ಹೂಡಿಕೆ ಮಾಡಿದ್ದ ಉದ್ಯಮಿ. ಷೇರು ಉದ್ಯಮ,  ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ ಸಿದ್ದಾರ್ಥ..ಮಂಗಳೂರು ಎಸ್ಸೆಂ ಕೃಷ್ಣ ಅಳಿಯ ಸಿದ್ದಾರ್ಥ ನಾಪತ್ತೆ ಪ್ರಕರಣ. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಹುಡುಕಾಟ. ಅಗ್ನಿಶಾಮಕ ದಳ, ಮುಳುಗು ತಜ್ಞರಿಂದ ತೀವ್ರ ಶೋಧ. ಸ್ಥಳದಲ್ಲಿ ಪೊಲೀಸರಿಂದ ಬಿಗು ಬಂದೋಬಸ್ತ್