ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…!? ಹುಷಾರ್…!

ಲೈಫ್‍ಸ್ಟೈಲ್

ಈಗಂತೂ ಧೂಮಪಾನ ಅಂದ್ರೆನೇ ಒಂತರಾ ಟ್ರೆಂಡ್ ಆಗ್ಬಿಟ್ಟಿದೆ. ಸಣ್ಣ ಸಣ್ಣ ವಯಸ್ಸಿಗೇ ಧೂಮಪಾನದ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ಇತ್ತಿಚಿನ ವರಧಿಯಲ್ಲಿ ಧೂಮಪಾನಕ್ಕೆ ತುತ್ತಾಗುತ್ತಿರುವ ವ್ಯಸನಿಗಳಲ್ಲಿ ಪುರುಷರಷ್ಟೇ ಸಮಾನರಾಗಿ ಮಹಿಳೆಯರೂ ರನ್ನಿಂಗ್ ಮಾಡ್ತಾ ಇದಾರೆ… ಇದು ಹೀಗೆ ಮುಂದುವರೆದರೆ ಎಲ್ಲಾದ್ರಲ್ಲೂ ಮಹಿಳೆರೇ ಫಸ್ಟ್…!
ನೆನಪಿರಲಿ ಮಹಿಳೆಯರೇ ನೀವು ಧೂಮಪಾನ ವ್ಯಸನಿಗಳಾದರೆ ಪುರುಷರಿಗಿಂತ ಹೆಚ್ಚು ಹಾನಿ ನಿಮಗೇನೇ.. ಹೀಗೇಂದು ನಾವೇಳ್ತಾ ಇಲ್ಲ ಅಧ್ಯಯನವೊಂದು ವರಧಿ ಮಾಡಿದೆ.
ಧೂಮಪಾನ ಮಾಡುವ ಮಹಿಳೆಯರ ಮೆದುಳಿನಲ್ಲಿ ರಕ್ತ ಸ್ರಾವ ಆಗುವ ಸಂಭವ ಇದೆ. ಜೊತೆಗೆ ಬ್ರೈನ್ ಹ್ಯಾಮರೇಜ್ ಆಗುವ ಸಾಧ್ಯತೆಗಳು ತುಂಬಾ ಹೆಚ್ಚಿರುತ್ತದೆಯಂತೆ. ಮೆದುಳಿನ ಮೇಲ್ಮೈ ಹಾಗೂ ಮೆದುಳಿನ ಅಂಗಾಂಶಗಳ ನಡುವೆ ಸೋರಿಕೆಯಾಗುತ್ತದೆ, ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬರುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ದಿನವೊಂದಕ್ಕೆ 1-10 ಸಿಗರೇಟ್ ಎಳೆಯುವ ಮಹಿಳೆಯರಲ್ಲಿ ಧೂಮಪಾನ ಮಾಡದವರಿಗೆ ಹೋಲಿಸಿದರೆ 2.95 ಪಟ್ಟು ಹೆಚ್ಚು ಹ್ಯಾಮರೇಜ್ ಆಗುವ ಸಾಧ್ಯತೆ ಹೆಚ್ಚಿದೆ. ಅದೇ ದಿನಕ್ಕೆ 11-20 ಸಿಗರೇಟ್ ಸೇದುವ ಮಹಿಳೆಯರಲ್ಲಿ 3.89 ರಷ್ಟು ಹ್ಯಾಮರೇಜ್ ಆಗುವ ಸಂಭವ ಹೆಚ್ಚಿದೆ ಎಂದು ವರಧಿ ಮಾಡಿದ್ದಾರೆ.. ಆದ್ದರಿಂದ ಧೂಮಪಾನ ಮಾಡುವುದಕ್ಕೂ ಮುನ್ನ ಯೋಚಿಸಿ, ಇಲ್ಲದಿದ್ದರೆ ನಿಮ್ಮ ಮೃತ್ಯುವಿಗೆ ನೀವೇ ಆಹ್ವಾನ ನೀಡಿದಂತೆ… ಹುಷಾರ್…!