ಮಹಾಶಿವರಾತ್ರಿಗೆ ದೇಶದಾದ್ಯಾಂತ ಪಾಪ್ ಕಾರ್ನ್ ಮಂಕಿ ಗ್ರ್ಯಾಂಡ್ ರಿಲೀಸ್.

ಸಿನಿಮಾ

ಡಾಲಿ ಧನಂಜಯ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್ ನ ಬಹುನಿರೀಕ್ಷಿತ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಹೌದು, ಮಹಾ ಶಿವರಾತ್ರಿಗೆ ಅಂದ್ರೆ ಇದೇ ಫೆಬ್ರವರಿ 21ರಂದು ಪಾಪ್ ಕಾರ್ನ್ ಮಂಕಿ‌ ಟೈಗರ್ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಟೈಗರ್‌ ನ ಆಟ ನೋಡಲು ಅಭಿಮಾನಿಗಳು ತಯಾರಾಗಿ…

ಮಹಾ ಶಿವರಾತ್ರಿಗೆ ಪಾಪ್ ಕಾರ್ನ್ ಮಂಕಿ ಟೈಗರ್ ಪ್ರೇಕ್ಷಕರೆದುರಿಗೆ ಆಗಮನವಾಗುತ್ತಿದ್ದು, ಫೆ. 21ಕ್ಕೆ ದೇಶದಾದ್ಯಂತ ಪಾಪ್ ಕಾರ್ನ್ ಮಂಕಿ ಟೈಗರ್ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಸೆನ್ಸಾರ್ ಮಂಡಳಿಯಿಂದ ಗ್ರೀನ್‌ ಸಿಗ್ನಲ್ ಸಿಗುತ್ತಿದ್ದಂತೆ, ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಪಾಪ್ ಕಾರ್ನ್ ಟೀಮ್..‌ ಹೀಗಾಗಿ ಮಹಾಶಿವರಾತ್ರಿಗೆ ನಿಮ್ಮನ್ನು ಮನರಂಜಿಸಲು ಧನಂಜಯ್ ಅಂಡ್ ಟೀಮ್ ಬರ್ತಿರುವುದು ಪಕ್ಕಾ…

ಸಾಕಷ್ಟು ವಿಶೇಷತೆಗಳಿಂದ ಹೆಸರು ಮಾಡಿರುವ ಪಾಪ್‌ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ. ನಿವೇದಿತಾ ಸ್ಮಿತಾ, ಅಮೃತಾ ಐಯ್ಯಂಗಾರ್, ಸಪ್ತಮಿ, ಕಾಕ್ರೋಚ್ ಸುಧೀ, ಪೂರ್ಣಚಂದ್ರ ತೇಜಸ್ವಿ, ಮೌನೀಶ ನಾಡಿಗೇರ್ ಸೇರಿದಂತೆ ಅನೇಕ‌ ಕಲಾವಿದರು ಚಿತ್ರದಲ್ಲಿ ಕಾಣಬಹುದಾಗಿದೆ. ಸುಧೀರ್ ಮೋಹನ್ ಫಿಲಂಸ್ ಮತ್ತು ಪುಷ್ಕರ್ ಫಿಲಂಸ್ ಜಂಟಿ ವಿತರಣೆಯಲ್ಲಿ ದೇಶದಾದ್ಯಂತ ಚಿತ್ರವನ್ನ ವಿತರಿಸ್ತಿದ್ದಾರೆ. ಒಟ್ಟಿನಲ್ಲಿ ಧನಂಜಯ್ ಹಾಗೂ ಸೂರಿ ಕಾಂಬಿನೇಷನ್‌‌ ಚಿತ್ರವನ್ನು ನೋಡಲು‌ ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವುದು ಸತ್ಯ…