ಬ್ರೇಕಿಂಗ್: ಪಾದರಾಯನಪುರದಲ್ಲಿ ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ದಾಳಿ,

ವಾಹಿನಿ ಸುದ್ದಿ

ಸೀಲ್ ಡೌನ್ ಮಾಡಲಾಗಿದ್ದ ಪಾದರಾಯನಪುರದಲ್ಲಿ ಇಂದು ರಾತ್ರಿ ಅಲ್ಲಿನ ನೂರಕ್ಕೂ ಹೆಚ್ಚು ಜನ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು, ಬಂದೋಬಸ್ತ್ ಗಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಗಳಲ್ಲಿ ಮುರಿದು ಹಾಕಿ ಉದ್ದಟತನ ಮೆರೆದಿದ್ದಾರೆ… ಇಂದು ಸೋಂಕಿತನ ಸಂಪರ್ಕದಲ್ಲಿದ್ದ 58 ಜನರನ್ನ ಗುರುತಿಸಿ ಪರಿಶೀಲಿಸಲು ತರಳಿದಾಗ ಘರ್ಷಣೆ ನಡೆದಿದೆ. 15 ಜನ ಆಸ್ಪತ್ರೆಗೆ ಬರು ಒಪ್ಪಿದ್ದರೆ, ಉಳಿದವರಿಂದ ಗಲಾಟೆ ಸೃಷ್ಟಿಯಾಗಿದೆ.. ತಮ್ಮ ಕ್ಷೇತ್ರದ ಶಾಸಕರು ಬರಲಿ ಇಲ್ಲೆ ನಮಗೆ ಟ್ರೀಟ್ಮೆಂಟ್ ಕೊಡಿ ಅಂತ ಸಿಬ್ಬಂದಿಗಳ ವಿರುದ್ದವೆ ತಿರುಗಿ ಬಿದ್ದ ಘಟನೆ ನಡೆದಿದೆ.‌ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ..