ಬಿಗ್ಬಾಸ್ ಸ್ಪರ್ಧಿಗಳಾದ ದೀಪಿಕಾ ದಾಸ್ ಹಾಗು ಭೂಮಿಗೆ ಒಟ್ಟಾರೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ..?

ವಾಹಿನಿ ಸುದ್ದಿ

ಅಂತಿಮವಾಗಿ ಬಿಗ್ಬಾಸ್ ಸೀಸನ್ 7ರ ವಿನ್ನರ್ ಆಗಿ ಶೈನ್ ಶೆಟ್ಟಿ ಗೆದ್ದಿದ್ದಾರೆ.. ಅಂತಿಮ ದಿನಗಳಲ್ಲಿ ಐದು ಸ್ಪರ್ಧಿಗಳನ್ನ ಹಿಂದಿಟ್ಟು ಬಿಗ್ಬಾಸ್ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದ್ದಾರೆ.. ಈ ನಡುವೆ ಇವರ ಜೊತೆಯಲ್ಲಿ ಸ್ಥಾನ ಪಡೆದಿದ್ದು ಇಬ್ಬರು ಹುಡುಗಿಯರಾದ ದೀಪಿಕಾ ದಾಸ್ ಹಾಗು ಭೂಮಿ ಟಫ್ ಫೈಟ್ ನೀಡಿ ಕೊನೆ ಹಂತದಲ್ಲಿ ಬಿಗ್ಬಾಸ್ ನಿಂದ ನಿರ್ಗಮಿಸಿದ್ದಾರೆ

ಹಾಗಿದ್ರೆ ಈ ಇಬ್ಬರು ಇಷ್ಟು ವಾರಗಳು ಬಿಗ್ಬಾಸ್ ನಲ್ಲಿ ಇದಿದ್ದಕ್ಕೆ ಪಡೆದ ಸಂಭಾವನೆ ಎಷ್ಟು ಎಂಬ ಪ್ರಶ್ನೆ ಮೂಡೋದು ಸಹಜ.. ಮೂಲಗಳ ಪ್ರಕಾರ ಬಿಗ್ಬಾಸ್ ನಲ್ಲಿ ವಾರದಿಂದ ವಾರಕ್ಕೆ ಉಳಿಯುತ್ತ ಹೋಗುವ ಸ್ಪರ್ಧಿಗಳ ಸಂಭಾವನೆ ಕೂಡ ಹೆಚ್ಚಾಗುತ್ತೆ ಎನ್ನಲಾಗಿತ್ತೆ.. ಆದ್ರೆ ಇದನೆಲ್ಲ ಪಕ್ಕಕ್ಕಿಟ್ಟು ನೋಡಿದ್ರು.. ಈ ಇಬ್ಬರು ಸಂಭಾವನೆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎನ್ನಬಹುದು

ಯಾಕಂದ್ರೆ ದೀಪಿಕಾ ದಾಸ್ ಅವರಿಗೆ ವಾರಕ್ಕೆ 50 ರಿಂದ 60 ಸಾವಿರ ಸಂಭಾವನೆ ಸಿಕ್ಕಿದ್ರೆ ಭೂಮಿಗೆ 3೦ ರಿಂದ 35 ಸಾವಿರದವರೆಗೆ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.. ಇದನ್ನ ಹೊರತು ಪಡೆಸಿ ಇಂಡಿಯಾ ಗೇಟ್ ಬಾಸ್ಮತಿ ರೈಸ್ ಅವರ‌ ಕಡೆಯಿಂದ ದೀಪಿಕಾಗೆ 5 ಲಕ್ಷ ರೂಪಾಯಿ ಕೂಡ ಬಂದಿದ್ದು, ಅಂದಾಜು 15 ಲಕ್ಷದ ವರೆಗು ದೀಪಿಕಾ ಸಂಪಾದನೆ ಮಾಡಿದ್ದಾರೆಇನ್ನು ಭೂಮಿಗೆ ಕೂಡ  ಒಂದು ಲಕ್ಷ ನಗದು ಬುಹುಮಾನದ ಜೊತೆಗೆ ಸಂಭಾವನೆಯನ್ನು ಸೇರಿಸಿ 6 ರಿಂದ 7 ಲಕ್ಷ ಸಂಭಾವನೆಯ ರೂಪದಲ್ಲಿ ಪಡೆದುಕೊಂಡಿದ್ದಾರೆ..