ಪವರ್ ಸ್ಟಾರ್ ಜೇಮ್ಸ್ ಗೆ ಯಾರಾಗಬೇಕು ಕ್ವೀನ್.? ಇವರಲ್ಲಿ ಅಪ್ಪು ಜೊತೆ ಹೆಜ್ಜೆ ಹಾಕೊ ಚಾನ್ಸ್ ಯಾರಿಗೆ..?

ಸಿನಿಮಾ

ಪವರ್ ಸ್ಟಾರ್ ಸಿನಿಮಾ ಅನೌಸ್ ಆದ್ರೆ ಸಾಕು ಅಪ್ಪು ಅಭಿಮಾನಿಗಳಲ್ಲಿ ಹೊಸ ಉತ್ಸಹ ಕ್ರಿಯೇಟ್ ಆಗಿಬಿಡುತ್ತೆ.. ಫ್ಯಾಮಿಲಿ ಆಡಿಯನ್ಸ್ಯಿಂದ ಹಿಡಿದು ಪುಟ್ಟ ಮಕ್ಕಳವರೆಗು ಅಪ್ಪು ಸಿನಿಮಾ ನೋಡೋಕೆ ಕಾಯೋದು ಸಾಮಾನ್ಯವಾಗಿ ಬಿಟ್ಟಿದೆ.. ಈ ನಡುವೆ ಯುವರತ್ನ ಸಿನಿಮಾ ಸದ್ಯದಲ್ಲೆ ಅಭಿಮಾನಿಗಳ ಮುಂದೆ ಬರೋಕೆ ಸಿದ್ದವಾಗಿದೆ.. ಹೀಗಿರುವಾಗ್ಲೆ ಜೇಮ್ಸ್ ಫೀವರ್ ಕ್ರಿಯೇಟ್ ಆಗಿಬಿಟ್ಟಿದೆ.. ಭರಾಟೆ ನಂತರ ಚೇತನ್ ಆಕ್ಷನ್ ಕಟ್ ಹೇಳ್ತಿರುವ ಡ್ರೀಮ್ ಪ್ರಾಜೆಕ್ಟ್ ಈ ಜೇಮ್ಸ್..

ಸದ್ಯ ಪವರ್ ಸ್ಟಾರ್ ನ ಈ ಸಿನಿಮಾಗೆ ನಾಯಕಿ ಹುಡುಕಾಟ ಶುರು ಮಾಡಿದೆ ಚಿತ್ರತಂಡ.. ಅಪ್ಪು ಜೊತೆಗೆ ಹೆಜ್ಜೆ ಹಾಕೋ ಚಾನ್ಸ್ ಈ ಬಾರಿ ಯಾರಿಗೆ ಸಿಗಲಿದೆ ಅನ್ನೋದು ಸದ್ಯಕ್ಕೆ ಗಾಂಧಿನಗರದ ಹಾಟ್ ಟಾಪಿಕ್.. ಈಗಾಗ್ಲೇ ಅಪ್ಪು ಜೊತೆಗೆ ಒಂದು ಎರಡು ಚಿತ್ರಗಳಲ್ಲಿ ನಾಯಕಿಯರಾಗಿರೋರನ್ನ ಜೇಮ್ಸ್ ಗೆ ಆಯ್ಕೆ ಮಾಡಬೇಕಾ ಅಥವಾ ಹೊಸ ಮುಖಕ್ಕೆ ಮಣೆ ಹಾಕಬೇಕು ಅನ್ನೋ ಚರ್ಚೆ ಕೂಡ ನಡೆದಿದ್ದು, ತೆಲುಗಿನಲ್ಲಿ ಸಖತ್ ಹೆಸರು ಮಾಡ್ತಿರೋ ಪೂಜೆ ಹೆಗಡೆ ಸೇರಿದಂತೆ ಅಂಜನಿಪುತ್ರನ ರಾಣಿ ರಶ್ಮಿಕಾ ವರೆಗು ಹೆಸರುಗಳು ಕೇಳಿ ಬರ್ತಿದೆ..

ಈ ನಡುವೆ ಭರಾಟೆ ಚಿತ್ರದ ನಾಯಕಿ ಶ್ರೀಲೀಲಾ ಇದ್ದಾರೆ.. ಇವರ ಜೊತೆಗೆ ಮತ್ತೊಂದಷ್ಟು ಹೆಸರುಗಳು ಕೇಳಿ ಬರ್ತಿದ್ದು, ಜೇಮ್ಸ್ ನ ಕ್ವೀನ್ ಯಾರಾಗಲ್ಲಿದ್ದಾರೆ ಅನ್ನೋದನ್ನ ಕಾದುನೋಡ್ಬೇಕಿದೆ.. ಸದ್ಯಕ್ಕೀಗ ಯುವರತ್ನ ಮುಗಿಸಿ ತನ್ನ ಫ್ಯಾನ್ಸ್ ಗೆ ಭರ್ಜರಿ ಗಿಫ್ಟ್ ಕೊಡುವುದಕ್ಕೆ ಪವರ್ ಸ್ಟಾರ್ ರೆಡಿಯಾಗಿದ್ದು ಮುಂದಿನ ದಿನಗಳಲ್ಲಿ ಚಿತ್ರತಂಡದಿಂದ ಮತ್ತಷ್ಟು ಮಾಹಿತಿ ಹೊರ ಬೀಳಲಿದೆ..