ದೇವಸ್ಥಾನದ ಗಂಟೆಯ ನಿನಾದದ ಮಹತ್ವವೇನೆಂದು ಬಲ್ಲಿರಾ?

ಲೈಫ್‍ಸ್ಟೈಲ್

ವು ಯಾವುದೇ ಪ್ರಾರ್ಥನೆಗೆ ಮುನ್ನ ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಘಂಟೆ ಬಾರಿಸುತ್ತೀರಲ್ಲವೇ???ಅದ್ರೆ ಯಾಕೆ ಆ ಥರ ಮಾಡ್ತೀವಿ ಅಂತ ಯಾವತ್ತಾದ್ರೂ ಯೋಚಿಸಿದ್ದೀರಾ..

ದೇವಸ್ಥಾನದ ಘಂಟೆಯನ್ನು ಏಳು ಲೋಹಗಳಿಂದ ತಯಾರಿಸಲಾಗುತ್ತದೆ,ಇದರ ಶಬ್ದವು ವಾಯುವಿನಲ್ಲಿ ಏಳು ಸೆಕೆಂಡುಗಳ ತನಕ ಸಂಚರಿಸಿ,ನಮ್ಮ ಶರೀರವನ್ನು ಸ್ಪರ್ಶಿಸುತ್ತದೆ ಹಾಗೂ ನಮ್ಮ ಶರೀರದಲ್ಲಿರೋ ಏಳು ಚಕ್ರಗಳಿಗೆ ಈ ಶಬ್ದ ತಲುಪುತ್ತದೆ.ಇದಲ್ಲದೆ,ನಮ್ಮ ಎಡ ಬದಿಯ ಹಾಗೂ ಬಲಬದಿಯ ನರಕೋಶಗಳನ್ನು ಪ್ರಚೋದಿಸಿ,ಧ್ಯಾನವಸ್ಥೆಯತ್ತ ನಮ್ಮನ್ನು ತಳ್ಳುತ್ತದಲ್ಲದೆ,ನಮ್ಮನ್ನು ಧ್ಯಾನದಲ್ಲಿ ಸಂಪೂರ್ಣವಾಗಿ ತೊಡಗುವಂತೆ ಮಾಡುತ್ತದೆ.

ನೀವು ಗಂಟೆಯನ್ನು ಹೊಡೆದ ಕ್ಷಣ ಏಳು ಸೆಕೆಂಡುಗಳಷ್ಟು ಕಾಲ ದೀರ್ಘ ಹಾಗೂ ಮೊನಚಾದ ಧ್ವನಿಯನ್ನು ಉತ್ಪಾದಿಸುತ್ತದೆ. ಇದರ ಪ್ರತಿ ಧ್ವನಿಯು ನಿಮ್ಮ ದೇಹದ ಚಕ್ರಗಳನ್ನು ಹೋಗಿ ತಲುಪುತ್ತದೆ. ಗಂಟೆಯನ್ನು ನೀವು ಬಡಿದಾಗ ನಿಮ್ಮ ಆತ್ಮವನ್ನು ಎಚ್ಚರಿಸಿದ ಅನುಭವ ನಿಮಗುಂಟಾಗುತ್ತದೆ.. ಘಂಟಾನಾದದೊಂದಿಗೆ ಓಂ ಶಬ್ದವು ಹೊರಹೊಮ್ಮುತ್ತಿದ್ದು,ಇದೊಂದು ಪ್ರಾಕೃತಿಕ ಶಬ್ದೋಚ್ಛಾರವಾಗಿದ್ದು,ಪ್ರಪಂಚದ ಪ್ರತೀ ಜೀವಿಗಳ ನರ ನಾಡಿಗಳಲ್ಲಿ ಉಲ್ಲಾಸದ ಚೈತನ್ಯವನ್ನೀಯುತ್ತದೆ. ಘಂಟೆಯ ಶಬ್ದವು ಒಂದು ಧಾರ್ಮಿಕ ಗಡಿಯಾರದ ಅಲರಾಂ ನಂತೆ ಇದನ್ನು ಬಾರಿಸಿದಾಗ ಉಂಟಾಗುವ ಶಬ್ದವು,ಧಾರ್ಮಿಕ ಭಾವನೆಗಳತ್ತ ನಮ್ಮನ್ನು ಸ್ಥಿತ ಪ್ರಜ್ಞರಾಗುವಂತೆ ನೋಡುತ್ತದೆ..