ತನ್ನ ಅತ್ತೆಯನ್ನೇ ಮದುವೆಯಾದ ಸೀರಿಯಲ್ ನಟ !

ವಾಹಿನಿ ಸುದ್ದಿ

ವಿವಾಹ ಎನ್ನುವುದು ಒಂದು ಪ್ರಮೋಷನ್. ಜೀವನದ ಒಂದು ಮೈಲಿಗಲ್ಲು. ಈ ಮೈಲಿಗಲ್ಲು ಕೆಲವು ಸಮಯ ಸ್ವಯಂ ನಿರ್ಧಾರದಿಂದ ತಲುಪಿದರೆ ಹಲವು ವೇಳೆ ತಮ್ಮ ಕುಟುಂಬ ಬಂಧು ಬಾಂಧವರೊಡನೆ ಚರ್ಚಿಸಿ ತಲುಪಬೇಕಾಗುತ್ತದೆ. ಈ ಸಮಯದಲ್ಲಿ ತನ್ನ ಬಾಳ ಸಂಗಾತಿಯಾಗಿ ಬರುವವರು ಜೀವನದುದ್ದಕ್ಕೂ ತನ್ನ ಏಳುಬೀಳಿನಲ್ಲಿ ಜೊತೆಯಾಗಿರಬೇಕಾಗುವುದರಿಂದ ಸಮಾನ ಮನಸ್ಕರರಾಗಿರುವುದು ಮುಖ್ಯವಾಗುತ್ತದೆ. ಇದೆ ರೀತಿಯ ಒಂದು ಸಮಾನ ಮನಸ್ಸನ್ನು ಹುಡುಕಿ ಮದುವೆಯಾದ ಈ ಸೀರಿಯಲ್ ನಟ. ಆದರೆ ಆಕೆ ಆತನ ಅತ್ತೆ ಎನ್ನುವುದೇ ಈಗ ಸಮಸ್ಯೆಯಾಗಿದೆ. ಅಯ್ಯೋ ಏನಪ್ಪಾ ಇದು ಅತ್ತೆಯನ್ನ ಮದುವೆಯಾದನಾ ಈ ನಟ ಅಂತೀರಾ? ಹಾಗಲ್ಲರೀ. ಈಕೆ ಈ ನಾಯಕ ನಟನ ಸೀರಿಯಲ್ ಅತ್ತೆ!!

ಸದಾ ಸೀರಿಯಲ್ ನಲ್ಲಿ ಮುಳುಗಿಹೋಗಿರುವ ಜನರಿಗೆ ಹಲವು ವೇಳೆ ಅವರ ನಿಜ ಜೀವನದ ಸಂಬಂಧಗಳು ಅಷ್ಟೇ ಏಕೆ ಅವರ ನಿಜವಾದ ಹೆಸರು ಕೂಡ ಗೊತ್ತೇ ಇರುವುದಿಲ್ಲ. ಸಿನಿಮಾಗಳಿಗಿಂತ ಧಾರಾವಾಹಿಗಳು ಜನರ ಜೀವನದಲ್ಲಿ ಒಂದು ಮುಖ್ಯ ಭಾಗವಾಗಿ ಬಹಳವೇ ಪ್ರಭಾವ ಬೀರಿವೆ. ಆದ್ದರಿಂದಲೇ ಈ ಗೊಂದಲ ಸೃಷ್ಟಿಯಾಗಿರುವುದು.

ಅಂದಹಾಗೆ ಈ ಸ್ಟಾರ್ ಸೀರಿಯಲ್ ನಟ ತೆಲುಗು ಧಾರಾವಾಹಿ “ಚಕ್ರವಾಕಂ” ನ ನಾಯಕ ಇಂದ್ರನೀಲ್ ವರ್ಮಾ. ಈ ಸೀರಿಯಲ್ ನ ಅತ್ತೆ ಪಾತ್ರ ಮಾಡಿದ್ದ ಮೇಘನಾ ಈಗ ಇಂದ್ರನೀಲ್ ರ ಪತ್ನಿ. ಈಕೆ ವಯಸ್ಸಿನಲ್ಲಿ ಚಿಕ್ಕವರಾದರೂ, ಸ್ವಲ್ಪ ಸ್ಥೂಲಕಾಯದವರಾದ್ದರಿಂದಲೇ ಅತ್ತೆ ಪಾತ್ರ ಮಾಡಲು ಒಪ್ಪಿಕೊಂಡ್ಡಿದ್ದರಂತೆ. ಮನಸ್ಸು ಹಾಗು ಭಾವನೆಗಳು ಈ ಹೊರನೋಟಕ್ಕಿಂತ ಮುಖ್ಯವಾದ್ದರಿಂದಲೇ ಈಕೆಯನ್ನು ಇಂದ್ರನೀಲ್ ಪ್ರೀತಿಸಿ ವೈವಾಹಿಕ ಜೀವನಕ್ಕೆ ಹೆಜ್ಜೆಯಿಟ್ಟಿದ್ದಾರೆ.

ಆದರೆ ಈ ಜೋಡಿ ಹೊರಗಡೆ ಎಲ್ಲೇ ಓಡಾಡಿದರೂ, ಜನ ಇವರನ್ನು ಕಂಡು ಏನಪ್ಪಾ ಹೆಣ್ಣು ಕೊಟ್ಟ ಅತ್ತೆಯನ್ನು ಮದುವೆಯಾಗಿಬಿಟ್ಟಿರಲ್ಲಾ ಅಂತ ಚುಡಾಯಿಸುತ್ತಿದ್ದಾರಂತೆ. ಮದುವೆ ಬಗ್ಗೆ ಗೊತ್ತಿಲ್ಲದಿದ್ದವರು ಇವರು ನಿಮ್ಮ ಅತ್ತೆಯಲ್ಲವಾ ಅಂತ ಅಂದಾಗ, ಅಲ್ಲ ಈಕೆ ನನ್ನ ಪತ್ನಿ ಎಂದು ಪರಿಚಯಿಸಲು ಬಹಳ ಮುಜುಗರವಾಗುತ್ತಿದೆಯಂತೆ. ಜನ ತಮ್ಮ ಟಿವಿಯಲ್ಲಿ ಬರುವ ಸಂಬಂಧಕ್ಕೆ ಹೆಚ್ಚು ಅಂಟಿಕೊಂಡಿದ್ದಾರೆಯೇ ಹೊರತು ನಿಜಜೀವನಕ್ಕೆ ಬಹಳ ಕಡಿಮೆ ಎನ್ನುವುದು ಇದರಿಂದ ತಿಳಿಯುತ್ತಿದೆ. ಇದರ ಬಗ್ಗೆ ನಿಮಗೇನನ್ನಿಸುತ್ತೆ?