ಜೊತೆ ಜೊತೆಯಲಿ ಅನು ಸಿರಿಮನೆ ಈಗ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಸಿನಿಮಾ

ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಮನೆಮಾತಾಗಿದ್ದಾರೆ. ಅಭಿನಯಿಸಿದ್ದು ಕೇವಲ ಒಂದೇ ಧಾರಾವಾಹಿಯಾದರೂ ಅನು ಸಿರಿಮನೆ ಪಾತ್ರ ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಿದೆ. ಮಂಗಳೂರಿನ ಮೂಲದ ಈ ಮುದ್ದು ಮುಖದ ಚೆಲುವೆಗೆ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ ಇದೆಯಂತೆ.

ಈ ಮಧ್ಯೆ ನಟನೆಯತ್ತ ಮುಖ ಮಾಡಿರುವ ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ, ಕಿರುತೆರೆಯಲ್ಲಿ ಮೋಸ್ಟ್ ಪಾಪ್ಯುಲರ್ ನಟಿಯಾಗಿದ್ದಾರೆ. ಸಾಕಷ್ಟು ಜನಪ್ರಿಯತೆ ಗಳಿಸಿರುವ ಮೇಘಾ ಶೆಟ್ಟಿಗೆ ಈಗ ಬೇಡಿಕೆ ಕೂಡ ಹೆಚ್ಚಾಗಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ಮೊದಲ ಧಾರಾವಾಹಿಯಾದರೂ, ಅನು ಅವರಿಗೆ ಒಂದು ದಿನಕ್ಕೆ ಎಂಟು ಸಾವಿರ ಸಂಭಾವನೆ ಪಡೆಯುತ್ತಿದ್ದರಂತೆ.

ಜೊತೆ ಜೊತೆಯಲಿ ಧಾರಾವಾಹಿ ಮೊದಲಿನಿಂದಲೂ ನಂಬರ್ ಒನ್ ಸ್ಥಾನದಲ್ಲಿರುವ ಕಾರಣ ಅನು ಅವರ ಸಂಭಾವನೆ ಕೂಡ ಹೆಚ್ಚಾಗಿದೆಯಂತೆ. ಈ ಹಿಂದೆ 8 ಸಾವಿರ ಪಡೆಯುತ್ತಿದ್ದ ಅನು, ಈಗ ಒಂದು ದಿನಕ್ಕೆ 40 ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಧಾರಾವಾಹಿ ಹಿಟ್ ಆದ ಕಾರಣ ಏಕಾಏಕಿ ಸಂಭಾವನೆ ಹೆಚ್ಚಿಸಿದ್ದಾರೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.