ಈ ಆಫರ್ ಯಾರಿಗುಂಟು ಯಾರಿಗಿಲ್ಲ!! 7 ಲಕ್ಷ ವೇತನ ಭಡ್ತಿ (ಇನ್ಕ್ರಿಮೆಂಟ್) ಕೊಟ್ಟ ಕಂಪೆನಿ ಸಿಇಒ!!

ವಾಹಿನಿ ಸುದ್ದಿ

ಕ್ರೆಡಿಟ್ ಕಾರ್ಡ್ ಸಂಸ್ಕರಣಾ ಕಂಪನಿಗ್ರಾವಿಟಿ ಪೇಮೆಂಟ್ಸ್’, ಇತ್ತೀಚೆಗೆ ಮತ್ತೊಂದು ಕಂಪೆನಿಚಾರ್ಜ್ ಇಟ್ ಪ್ರೊಎನ್ನುವ ಕಂಪೆನಿಯನ್ನು ಖರೀದಿಸಿತು. ಸಿಇಒ ಡಾನ್ ಪ್ರೈಸ್ ವೈಯಕ್ತಿಕವಾಗಿ ಉದ್ಯೋಗಿಗಳಿಗೆ ಈ ಸಂತೋಷದ ಸುದ್ದಿಯನ್ನು ಹೇಳಿ, ಡಾನ್ ಪ್ರೈಸ್ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ 7,10,622 ರೂ ವೇತನ ಭಡ್ತಿಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ಕೇಳಿದ ನಂತರ ಕಂಪನಿಯ ಉದ್ಯೋಗಿಗಳು ಈಗ ಸಂತೋಷದ ಉತ್ತುಂಗದಲ್ಲಿದ್ದಾರೆ!!

ಈ ಹಿಂದೆ ನೌಕರರಿಗೆ ಕನಿಷ್ಠ 28,42,488 ರೂ ಸಂಬಳವಿತ್ತಂತೆ!. “ಈಗ ನಡೆಯುತ್ತಿರುವ ಸಂಪತ್ತು ಮತ್ತು ಅಧಿಕಾರದ ವ್ಯಾಪಕ ಬಲವರ್ಧನೆಯಿಂದ ಸಂತೋಷವಾಗಿದ್ದೇನೆ.ಜೊತೆಗೆ ಅದು ನಮ್ಮ ನಿರ್ಧಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನೂ ಮನಗಂಡಿದ್ದೇನೆ. ಹಿಂದೆ, ನಾನು ವರ್ಷಕ್ಕೆ ಒಂದು ಮಿಲಿಯನ್ ಡಾಲರ್ ಸಂಪಾದಿಸುತ್ತಿದ್ದೆ ಮತ್ತು ನನಗೆ ಕೆಲಸ ಮಾಡುವ ಜನರು ವರ್ಷಕ್ಕೆ $ 30,000 ಗಳಿಸುತ್ತಿದ್ದರು ಇದು ತಪ್ಪು ಎಂದು ಕಂಡುಬಂದಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ.” ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

35 ವರ್ಷದ ಈ ಸಿಇಒ ತನ್ನ ಸಂಬಳದಲ್ಲಿ 80% ರಿಂದ 90% ವೇತನ ಕಡಿತ ಮಾಡಿ ನೌಕರರ ವೇತನವನ್ನು ಹೆಚ್ಚಿಸಿದ್ದಾರಂತೆ!. ಮಕ್ಕಳಿಗೆ ಉತ್ತಮ ಪೋಷಕರಾಗುವುದು ಅತ್ಯಗತ್ಯ. ಆದ್ದರಿಂದ ವೇತನ ಹೆಚ್ಚಳದಿಂದ ಪೋಷಕರು ಮಕ್ಕಳ ಕಡೆ ಗಮನಹರಿಸುವುದು ಸಾಧ್ಯ. ಹಾಗೆಯೇ ಇದು ವೇತನ ಸಮಾನತೆಯನ್ನು ಎತ್ತಿ ಹಿಡಿಯುತ್ತದೆಎಂದು ಹೇಳಿದ್ದಾರೆ. ತಾವು ತನ್ನ ಕಂಪೆನಿ ನೌಕರರಿಗೆ ಸಂಬಳ ನೀಡಲು ಯಾವುದೇ ದೇಣಿಗೆ ಪಡೆಯುತ್ತಿಲ್ಲ ಮತ್ತು ತಾವು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಮತ್ತು ಯಶಸ್ವಿಯಾಗುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದರು. ಇಂತಹ ಮಾಲೀಕ ಎಲ್ಲರಿಗೂ ಬೇಕು ಅಥವಾ ನಾವು ಈ ಕಂಪೆನಿಯಲ್ಲಿ ಉದ್ಯೋಗಿಯಾಗಬೇಕು ಅನಿಸುತ್ತಿದೆಯಲ್ಲವೇ?