ಆರ್ಯವರ್ಧನ್ ಅವರನ್ನು ಹರ್ಷವರ್ಧನ್, ದಾದಾ ಎಂದು ಕರೆಯುವ ಹಿಂದಿದೆ ರೋಚಕ ಕಥೆ. ಏನದು ನೋಡಿ…

ಸಿನಿಮಾ

ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಬೆಳ್ಳಿಪರದೆಯಲ್ಲಿ ಸಾಕಷ್ಟು ಸಿನಿಮಾ ಮಾಡಿ ಸೈ ಎನಿಸಿಕೊಂಡಿರುವ ಅನಿರುದ್ಧ ಈಗ ಕಿರುತೆರೆಯಲ್ಲೂ ಶಭಾಷ್ ಎನಿಸಿಕೊಂಡಿದ್ದಾರೆ. ಇನ್ನು ಜೊತೆ ಜೊತೆಯಲಿ ಧಾರಾವಾಹಿಡ ಸರಳ ಸಜ್ಜನ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ಅನಿರುದ್ಧ ಪಾತ್ರವೇ ವಿಶೇಷ ಎನ್ನಬಹುದು.

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಅನಿರುದ್ಧ ಅವರು ಆರ್ಯವರ್ಧನ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇನ್ನು ಆರ್ಯವರ್ಧನ್ ತಮ್ಮನಾಗಿ ಅಭಿನಯಿಸಿರುವ ಹರ್ಷವರ್ಧನ್, ಆರ್ಯವರ್ಧನ್ ಅವರನ್ನು‌ ಮಾತ್ರ ಬೇರೆ ಹೆಸರಿಂದ ಕರೆಯುತ್ತಾರೆ. ಆ ಹೆಸರು ದಾದಾ… ಆದರೆ ಹರ್ಷವರ್ಧನ್‌, ಆರ್ಯವರ್ಧನ್ ಬದಲು‌ ದಾದಾ ಎಂದು ಕರೆಯುವುದರ ಹಿಂದಿದೆಯಂತೆ ರೋಚಕ ಕಥೆ.. ಏನದು? ಮುಂದೆ ಓದಿ..

ಕೈಗೆ ಖಡ್ಗ ಧರಿಸಿ ವಿಷ್ಣುವರ್ಧನ್ ಅವರಂತೆ ದಾದಾ ಎಂದು ಕರೆಸಿಕೊಳ್ಳುವುದರ ಹಿಂದಿದೆ ಒಂದು ಇಂಟ್ರಸ್ಟಿಂಗ್ ಕಥೆಯಿದೆ ಎನ್ನುತ್ತಾರೆ‌ ನಿರ್ದೇಶಕರು. ಆದರೆ ಯಾಕೆ ದಾದಾ ಎಂದು ಕರೆಯುತ್ತಾರೆ, ಎಂದು ನಿರ್ದೇಶಕರನ್ನು ಕೇಳಿದಾಗ ಈಗ್ಲೇ ರಿಲೀವ್ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ‌ ನಿಮಗೆ ತಿಳಿಯಲಿದೆ ಹರ್ಷವರ್ಧನ್ ಯಾಕೆ ದಾದ ಎಂದು ಕರೆಯುತ್ತಾರೆ ಹಾಗೂ ಅದರ ಹಿಂದೆ ಒಂದು ದೊಡ್ಡ ಕಥೆ ಕೂಡ ಇದೆ ಎಂದು ವಿವರಿಸಿದರು.