ಅಮೂಲ್ಯಳನ್ನ ಪೊರಕೆಗೆ ಹೋಲಿಸಿದ ವೇದಾಂತ್..! ವಿಡಿಯೋ ನೋಡಿ..

ಸಿನಿಮಾ

ಉತ್ತಮ ನಟನೆಗಾಗಿ ಹಾಗೂ ಕಥೆಗಾಗಿ ಜೀ ಕುಟುಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ, ಇಂದಿನ ಸಂಚಿಕೆಯಲ್ಲಿ ಅಮೂಲ್ಯ ಹಾಗೂ ವೇದಾಂತ್ ವಶಿಷ್ಟ ಪಾರ್ಟಿಯೊಂದರಲ್ಲಿ ಭಾಗಿಯಾಗಲಿದ್ದಾರೆ.

ಮನಸ್ಸಿನಲ್ಲಿ ಲೈಟ್ ಆಗಿ ವೇದಾಂತ್ ಮೇಲೆ ಪ್ರೀತಿ ಮೂಡಿದ್ದರೂ ಮೇಲೆ ತೋರಿಸಿಕೊಳ್ಳದ ಅಮೂಲ್ಯ, ವೇದಾಂತ್ ಮುಂದೆ ಮಾತ್ರ ಮುನಿಸಿನಿಂದಲೇ ಮಾತಾಡಿಸ್ತಾ ಇರ್ತಾಳೆ. ವೇದಾಂತ್ ಕೂಡ ಅಮೂಲ್ಯ ಮೇಲಿರುವ ಪ್ರೀತಿಯನ್ನ ತಡೆಹಿಡಿದಿಡಲಾಗದೆ ಮನೆಯವರ ಮುಂದೆ ಆಗಾಗ್ಗ ಸಿಕ್ಕಿ ಹಾಕಿಕೊಳ್ಳುತ್ತಿರುತ್ತಾನೆ. ಇಂತಹದೇ ಸೀನ್ ಗಳಿಂದ ಒಳ್ಳೆಯ ಅಭಿಮಾನಿ ಬಳಗವನ್ನ ಹೊಂದಿರುವ ಗಟ್ಟಿಮೇಳ ಧಾರಾವಾಹಿ, ಒಂದು ಕಚಗುಳಿ ಇಡುವ ಪ್ರೇಮ ಕಥಾಹಂದರದ ಮೇಲೆ ಮೂಡಿಬರುತ್ತಿದೆ.

ಈಗ ಇಂದಿನ ಸಂಚಿಕೆಯಲ್ಲಿ, ಪಾರ್ಟಿಯಲ್ಲಿ ಎಲ್ಲವನ್ನ ಅಲಂಕರಿಸುವಾಗ ಅಮೂಲ್ಯ, ಇದು ವೇದಾಂತ್ ರವರ ಪಾರ್ಟಿ ಅದಕ್ಕೆ ಎಲ್ಲಾ ಸರಿಯಾಗಿ ಮಾಡಿ ಅಂತ ಎಲ್ಲರಿಗೂ ಆರ್ಡರ್ ಮಾಡುತ್ತಿದ್ದರೆ ಇತ್ತ, “ಅಮೂಲ್ಯ ಮೇಡಂ ತುಂಬಾ ಚೆನ್ನಾಗಿ ಕಾಣಿಸ್ತಿದ್ದಾರೆ” ಅಲ್ವಾ ಅಂತ ಅವರ ಅಸ್ಸಿಸ್ಟೆಂಟ್ ಕೇಳಿದ್ದಕ್ಕೆ, ವೇದಾಂತ್ “ಹೌದು ನೋಡೋಕೆ ಪೊರಕೆ ಕಡ್ಡಿ ತರ ಇದ್ರೂ ಬ್ಯೂಟಿಫುಲ್ ಆಗಿದ್ದಾರೆ ಅಂತ ಮನಸ್ಸಿನ ಮಾತನ್ನು ಹೇಳಿಬಿಡುತ್ತಾನೆ.”

ಇಂತಹದೇ ಆಕ್ಷೇಪಣೀಯ ಮಾತುಗಳಿಂದ ತನ್ನ ಮನಸ್ಸನ್ನು ವೀಕ್ಷಕರ ಮುಂದೆ ತೆರೆಡಿದುವ ವೇದಾಂತ್ ಹಾಗೂ ಅಮೂಲ್ಯ ಈ ಧಾರಾವಾಹಿಯ ಹೈಲೈಟ್ಸ್ ಆಗಿ ಕಾಣಿಸಿಕೊಂಡಿದ್ದಾರೆ.