ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ.!

ಲೈಫ್‍ಸ್ಟೈಲ್

ಹಾಲನ್ನು ಯಾರು ತಾನೆ ಇಷ್ಟ ಪಡೊಲ್ಲ ಹೇಳಿ..?ಹಾಲಿನ ಉತ್ಪನ್ನಗಳನ್ನ ಯಾರ್‍ತಾನೆ ಇಷ್ಟ ಪಡೊಲ್ಲ.. ವೈದ್ಯರು ರೋಗಿಗಳಿಗೆ ಹಾಲು ಕುಡಿಯಿರಿ ಎಂದೇ ಸಲಹೆ ಮಾಡ್ತಾರೆ. ಅಷ್ಟೇ ಏಕೆ ಹುಟ್ಟಿದ ಮಗು ಮೊದಲು ಕುಡಿಯೋದೆ ಹಾಲನ್ನ. ಆದ್ರೆ ಅದು ಅತಿಯಾದ್ರೆ ವಿಷವಂತೆ ಎಚ್ಚರವಿರಲಿಹೀಗೆಂದು ಸಂಶೋಧನೆ ನಡೆಸಿ ವರದಿ ಮಾಡಿದೆ ಬ್ರಿಟೀಷ್ ಮೆಡಿಕಲ್ ಜರ್ನಲ್. ಜಾಸ್ತಿ ಹಾಲು ಕುಡಿಯೋರ್ಗೆ ಈ ಅಧ್ಯಯನ ಸಂಸ್ಥೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಅಧ್ಯಯನದ ಪ್ರಕಾರ ಹೆಚ್ಚಿ ಪ್ರಮಾಣದಲ್ಲಿ ಹಾಲು ಕುಡಿಯೋದ್ರಿಂದ ಮೂಳೆಗಳು ಸವೆತಕ್ಕೆ ಒಳಪಡುತ್ತದೆಯಂತೆ. ಅಷ್ಟೇ ಅಲ್ಲ ಹೆಚ್ಚು ಹಾಲು ಕುಡಿಯುವವರು ಬಹು ಬೇಗ ಸಾವನ್ನಪ್ಪತ್ತಾರೆಂದು ವರದಿ ಮಾಡಿದೆ. ಈ ಅಧ್ಯಯನ ಸಂಸ್ಥೆ ಸುಮಾರು 20 ವರ್ಷಗಳ ಕಾಲ 61 ಸಾವಿರ ಮಹಿಳೆಯರು ಹಾಗೂ 45 ಸಾವಿರ ಪುರುಷರ ಮೇಲೆ ಮಾಡಿದ ಪ್ರಯೋಗದ ಆಧಾರಿತದಿಂದ ಈ ವರದಿ ಸಿದ್ದಪಡಿಸಿದೆ. ಡೈರಿ ಉತ್ಪನ್ನಗಳನ್ನು ಉಪಯೋಗಿಸುವ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೂಳೆ ಸಮಸ್ಯೆ ಕಂಡುಬರುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಹಾಲು ಕುಡಿಯುವ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೂಳೆ ಮುರಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದಿದೆ ಅಧ್ಯಯನ. ಅಷ್ಟೇ ಅಲ್ಲ ದಿನಕ್ಕೆ ಮೂರು ಬಾರಿ ಹಾಲು ಕುಡಿಯೋರ ಆಯಸ್ಸು ತುಂಬಾ ಕಡಿಮ ಎನ್ನುತ್ತಾರೆ. ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶ ಇರೋದ್ರಿಂದ ದಿನಕ್ಕೆ ಒಂದು ವೇಳೆ ಹಾಲು ಕುಡಿಯೋರು ಆರೋಗ್ಯದಲ್ಲಿರುತ್ತಾರೆ. ಆದ್ರೆ ಹಾಲು ಅತಿಯಾಗಿ ಸೇವಿಸಿದ್ರೆ ವಿಷಕ್ಕೆ ಸಮಾನ ಎನ್ನುತ್ತಾರೆ ಅಧ್ಯಯನ